ನೀವು ಹೆಚ್ಚು ಬೀಟ್ ರೂಟ್ ಸೇವಿಸುತ್ತೀರಾ, ಹಾಗಾದರೆ ಇದನ್ನೊಮ್ಮೆ ನೋಡಿ

ನೀವೇನಾದ್ರು ಬೀಟ್ರೂಟ್ ಜ್ಯೂಸ್, ಬೀಟ್ರೂಟ್ ಪಲ್ಯ, ಬೀಟ್ರೂಟ್ ಯಿಂದ ಮಾಡಿದ ಎಲ್ಲಾ ಖಾಧ್ಯಗಳನ್ನ ಸೇವಿಸುತ್ತಿದ್ರೆ ನಿಮ್ಮ ದೇಹದಲ್ಲಿ ನಿಮಗೆ ಗೊತ್ತಿರದಷ್ಟು ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುತ್ತದೆ. ಬೀಟ್ರೂಟ್ ಸೇವನೆ ನಿಮ್ಮ ಆರೋಗ್ಯಕ್ಕೆ ಉತ್ತಮ ಪರಿಣಾಮಕಾರಿ ಆಹಾರ ಪಧಾರ್ಥ ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಾಗಾದರೆ ಈ ಬೀಟ್ರೂಟ್ ಸೇವಿಸುವುದರಿಂದ ಯಾವೆಲ್ಲಾ ರೀತಿಯ ಪ್ರಯೋಜನಗಳಿವೆ ಅನ್ನೋದನ್ನ ನೋಡೋಣ. ಇಂದು ಬದಲಾದ ಆಹಾರ ಕ್ರಮ ಮತ್ತು ಜೀವನ ಶೈಲಿ ನಮ್ಮ ಆರೋಗ್ಯಕ್ಕೆ ಅನೇಕ ತೊಂದರೆ ತಾಪತ್ರಯಗಳನ್ನ ತಂದೊಡ್ಡುತ್ತದೆ. ಆದರೆ ನಾವು ಸೇವಿಸುವ ಆಹಾರದಲ್ಲಿ ಪೌಷ್ಠಿಕಾಂಶಗಳು ಇದ್ಯೋ, ಇಲ್ವೋ, ಯಾವ ಆಹಾರಗಳನ್ನ ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದನ್ನ ಮೊದಲು ಮನಗಂಡಿರಬೇಕು.

ಬೀಟ್ರೂಟ್ ಸೇವನೆ ಕೆಲವರಿಗೆ ಆಗಿಬರುವುದಿಲ್ಲ. ಬಹುತೇಕ ಜನ ಬೀಟ್ರೂಟ್ ಇದ್ದರೆ ಅದನ್ನ ಪಕ್ಕಕ್ಕೆ ಸರಿಸಿ ಊಟ ಮಾಡುತ್ತಾರೆ. ಆದರೆ ಅವರಿಗೆ ಬೀಟ್ರೂಟ್ ನಲ್ಲಿ ಯಾವೆಲ್ಲಾ ಅಂಶಗಳಿರುತ್ತವೆ ಅನ್ನೋದೇ ತಿಳಿದಿರುವುದಿಲ್ಲ. ಬೀಟ್ರೂಟ್ ನಲ್ಲಿ ನೈಸರ್ಗಿಕ ಸಕ್ಕರೆಯ ಅಂಶ ವಿದ್ದು, ಇದು ದೇಹಕ್ಕೆ ಶಕ್ತಿಯನ್ನ ಪೂರೈಸುತ್ತದೆ. ಬ್ಲಡ್ ಪ್ರೆಶರ್ ಇದ್ದೋರಿಗೆ ಇದು ಅತ್ಯುತ್ತಮ ಔಷಧಿಯಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತದೆ. ಬೀಟ್ರೂಟ್ ಸೇವನೆಯಿಂದ ತಲೆ ಕೂದಲು ಉದರುವ ಸಮಸ್ಯೆಯಿಂದ ಮುಕ್ತವಾಗಬಹುದು. ಅದೇ ರೀತಿಯಾಗಿ ಇದರಲ್ಲಿ ಆಮ್ಲಜನಕ ಮಟ್ಟವನ್ನ ಹೆಚ್ಚಿಸುವ ಸಾಮರ್ಥ್ಯ ಅಧಿಕವಾಗಿರೋ ಹಿನ್ನೆಲೆಯಲ್ಲಿ ದೇಹಕ್ಕೆ ಅಗತ್ಯವಾಗಿರುತ್ತದೆ.

ವೈದ್ಯರ ಸಲಹೆಯಂತೆ ನಮ್ಮ ಹಿರಿಯರು ಕೂಡ ಈ ಮಲ ಬದ್ದತೆ, ಅಜೀರ್ಣತೆ, ಹೊಟ್ಟೆಯ ನೋವಿನ ಸಮಸ್ಯೆಗಳು ಕಾಣಿಸಿಕೊಂಡಾಗ ಬೀಟ್ರೂಟ್ ಜ್ಯೂಸ್ ಕುಡಿಯಲು ಹೇಳುತ್ತಾರೆ‌. ಯಾಕಂದ್ರೆ ಬೀಟ್ರೂಟ್ ನಲ್ಲಿ ಫೈಬರ್ ಅಂಶಗಳಿರುತ್ತದೆ. ಇದು ಜೀರ್ಣಕ್ರಿಯೆಯನ್ನ ಸರಾಗ ಮಾಡುತ್ತದೆ. ಸಾಮಾನ್ಯವಾಗಿ ಇಂದು ಬಿಪಿ, ಶುಗರ್ ಅನ್ನೋ ಖಾಯಿಲೆಗಳು ಪ್ರತಿಯೊಬ್ಬರ ಮನೆಯಲ್ಲಿ ಒಬ್ಬರಿಗಾದರು ಇರುತ್ತದೆ. ಅಂತಹವರಿಗೆ ಬೀಟ್ರೂಟ್ ಉತ್ತಮ ಔಷಧಿಕಾರಿ ತರಕಾರಿಯಾಗಿದೆ ಅಂದರೆ ತಪ್ಪಾಗಲಾರದು. ಹಾಗಾಗಿ ಇನ್ಮುಂದೆ ನೀವು ಬೀಟ್ರೂಟ್ ಅನ್ನ ತ್ಯಜಿಸುತ್ತಿದ್ದರೆ ಆದಷ್ಟು ಬೀಟ್ರೂಟ್ ಸೇವನೆ ಮಾಡುವ ಹವ್ಯಾಸವನ್ನು ರೂಢಿಸಿಕೊಂಡು ನಿಮ್ಮ ಆರೋಗ್ಯವನ್ನು ವೃದ್ದಿಸಿಕೊಳ್ಳಿ.

%d bloggers like this: