ನೆಗೆಟಿವ್ ಚಿಂತನೆಗಳನ್ನು ಹೋಗಲಾಡಿಸಿ ಖುಷಿಯ ಜೀವನಕ್ಕಾಗಿ ಈ ಸರಳ ಸೂತ್ರಗಳನ್ನು ಪಾಲಿಸಿ

ಜೀವನದಲ್ಲಿ ಬರುವ ಸಮಸ್ಯೆಗಳನ್ನು ನೀವು ನೋಡುವ ದೃಷ್ಠಿಕೋನದ ಆಧಾರದ ಮೇಲೆ ನಿಮ್ಮ ಸಮಸ್ಯೆಗೆ ಪರಿಹಾರ ಅಡಗಿರುತ್ತದೆ, ಆದರೆ ನೀವು ಮಾಡುವ ತಪ್ಪು ಅಂದರೆ ಯಾವುದಾದರು ಸಂಕಷ್ಠ ಬಂದೊಡನೆ ಆಕಾಶವೇ ತಲೆಮೇಲೆ ಬಿದ್ದಂತೆ ಹಣೆಗೆ ಕೈಒರಗಿ ಕೂರುವವರಿದ್ದರೆ ಇಂತಹ ವ್ಯಕ್ತಿತ್ವವನ್ನು ಮೊದಲು ಬಿಡಿ. ನಿಮ್ಮಿಂದ ಆಗದಿರುವುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಆದರೆ ಅದಕ್ಕೆ ಬೇಕಾದ ಅರ್ಹತೆಗಳನ್ನು ಗಳಿಸಿಕೊಳ್ಳುವುದು, ಉತ್ತಮವಾದ ಯೋಜನೆ ಸಿದ್ದಪಡಿಸಿಕೊಳ್ಳುವ ಮಾರ್ಗವನ್ನು ಸೃಷ್ಠಿ ಮಾಡಿಕೊಳ್ಳಬೇಕು. ಈ ಬದುಕು ಎಂಬುದು ಹಗ್ಗ ಜಗ್ಗಾಟದ ಆಟವಿದ್ದಹಾಗೆ ಒಂದೆಡೆ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ, ಮತ್ತೊಂದೆಡೆ ಸೋಲಬಹುದು ಎಂಬ ಆತಂಕ ಇವೆರಡೂ ಸೇರಿ ಮನುಷ್ಯನಿಗೆ ಭಯ ದುಗುಡವನ್ನು ನಿರ್ಮಾಣ ಮಾಡುತ್ತದೆ.

ನೀವು ಬಲಿಷ್ಠವಾಗಿದ್ದರೆ ಮಾತ್ರ ನಿಮಗೆ ನಾನು ಗೆಲ್ಲಬಲ್ಲೆ ಎಂಬ ಧೈರ್ಯ ಇರುತ್ತದೆ. ಆದರೆ ನೀವು ಅಶಕ್ತರಾಗಿದ್ದು, ನಿರುತ್ಸಾಹ ಮೂಡುಬಿಟ್ಟರೆ ಆ ಆಟದಲ್ಲಿ ಸೋಲುವುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಆದರೆ ಗೆಲ್ಲುವ ನಂಬಿಕೆ ಒಂದು ನಿಮ್ಮಲ್ಲಿ ಇದ್ದರೆ ಎಲ್ಲಾದರೂ ಆ ಆಟದಲ್ಲಿ ಗೆಲ್ಲುವ ಅವಕಾಶ ಇದ್ದೇ ಇರುತ್ತದೆ. ನಿಮ್ಮಲ್ಲಿರುವ ಆತ್ಮವಿಶ್ವಾಸವೇ ಗೆಲ್ಲುವುದಕ್ಕೆ ಯಾವುದಾದರೊಂದು ಅವಕಾಶ ಸೃಷ್ಠಿಯಾಗಿರುತ್ತದೆ.

ಇನ್ನು ನಮ್ಮ ಪೂರ್ವಜರು ಮಾಡಿರುವ ಆಚರಣೆಗಳು, ನಂಬಿಕೆಗಳು ಸಂಪ್ರದಾಯಗಳು ಇವೆಲ್ಲವು ಸಹ ಮನುಷ್ಯನ ಮೇಲೆ ಪ್ರಭಾವ ಬೀರಿರುತ್ತವೆ. ಆದರೆ ಇಂದಿನ ಆಧುನಿಕ ಪೀಳಿಗೆ ಅದನ್ನೆಲ್ಲಾ ಮೂಢನಂಬಿಕೆಗಳೆಂದು ಭಾವಿಸಿ ನಮ್ಮ ಆಚಾರ ವಿಚಾರಗಳನ್ನು ಕಡೆಗಣಿಸಿದ್ದಾರೆ. ನಮ್ಮ ಸಂಪ್ರಾದಯದಲ್ಲಿರುವ ಆಧ್ಯಾತ್ಮಿಕ ಆಚರಣೆಗಳು, ಮಂತ್ರ ಪಠನೆಗಳಿಂದ ನಮ್ಮ ಎಷ್ಟೋ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ. ಹನುಮಾನ್ ಚಾಲೀಸಾ ಮತ್ತು ಗಾಯತ್ರಿದೇವಿ ಮಂತ್ರ, ವಿಷ್ಣು ಸಹಸ್ರನಾಮ ಪಠಿಸುವುದರಿಂದ ನಿಮ್ಮಲ್ಲಿರುವ ಭಯ ದುಗುಡ ದುಮ್ಮಾನಗಳು ನಿವಾರಣೆ ಆಗುತ್ತವೆ. ಕಾರಣ ಅದರಲ್ಲಿರುವ ಜೀವನದ ಕಷ್ಟ ಸಂಕಷ್ಟ ಮೌಲ್ಯವನ್ನು ತಿಳಿಸುವುದಾಗಿರುತ್ತವೆ.

ನಂಬಿಕೆ ಕೆಲವೊಮ್ಮೆ ನಿಮಗೆ ನೀವು ಊಹಿಸಲಾಗದಷ್ಟು ಯಶಸ್ಸು ತಂದುಕೊಡುತ್ತವೆ, ನೀವು ಒಂದು ಗುರಿಯನ್ನು ಹೊಂದಿದ್ದು ಅದರ ಬಗ್ಗೆ ಎಷ್ಟೇ ನಕರಾತ್ಮಕ ವಿಚಾರ ಕೇಳಿದರು ಸಹ ನೀವು ಅದರ ಬಗ್ಗೆ ಸ್ಪಷ್ಟತೆ ಹೊಂದಿದ್ದರೆ ನಿಮಗೆ ನಿಮ್ಮ ಗುರಿಗೆ ಬೇಕಾದ ಸಕರಾತ್ಮಕವಿಚಾರಗಳಿಗೆ ಪೂರಕವಾದ ವಾತಾವರಣವನ್ನು ಸೃಷ್ಠಿ ಮಾಡುತ್ತದೆ. ಯಾವುದೇ ವಿಚಾರದಲ್ಲಿ ಗೊಂದಲ ಬೇಡ ನಿಧಾನವಾದರು ಸರಿ ನೀವು ಹೋಗುವ ದಾರಿ ನಿಮಗೆ ಸ್ಪಷ್ಟವಾಗಿ ತಿಳಿದಿರಬೇಕು. ನಿಮ್ಮ ನ್ಯುನತೆ ಅರಿತು ಸರಿಪಡಿಸಿಕೊಳ್ಳಿ. ನೀವು ಬಯಸುವ ಹುದ್ದೆ, ಅಧಿಕಾರಕ್ಕೆ ನಿಮ್ಮಲ್ಲಿ ಆ ಹುದ್ದೆಗೆ ಬೇಕಾದ ಅರ್ಹತೆ ಇಲ್ಲದಿದ್ದರೆ ಮೊದಲು ಅರ್ಹತೆ ಸಂಪಾದಿಸಿದರೆ ಗೆಲುವು ನಿಮ್ಮದಾಗುತ್ತದೆ. ಯೋಗ ಆಕಸ್ಮಿಕವಾಗಿ ಬರಬಹುದು ಆದರೆ ನಿಮ್ಮ ಶ್ರಮ, ಪ್ರಯತ್ನ ನಿಮ್ಮಿಂದ ಮಾತ್ರ ಸಾಧ್ಯ ಆದ್ದರಿಂದ ಆದಷ್ಟು ಧನಾತ್ಮಕ ಚಿಂತನೆ, ಆಲೋಚನೆಯೇ ನಿಮ್ಮ ಯಶಸ್ಸಿನ ಮೂಲ ಮಂತ್ರವಾಗಿರಬೇಕು.

%d bloggers like this: