ನಿಗದಿ ಮಾಡಿದ್ದ ದಿನಾಂಕಕ್ಕಿಂತ ಒಂದು ವಾರ ಮುಂಚಿತವಾಗಿ ಬಿಡುಗಡೆ ಆಗುತ್ತಿದೆ ಕನ್ನಡದ ಈ ಹೊಸ ಸಿನಿಮಾ

ಮೊದಲ ಚಿತ್ರದಿಂದಲೇ ಭರವಸೆಯ ನಟಿ ಎಂಬ ಹೊಗಳಿಕೆಗೆ ಪಾತ್ರವಾದ ನಟಿ ಶ್ರೀಲೀಲಾ. ಕಿಸ್ ಚಿತ್ರದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕ್ಯೂಟ್ ಅಂಡ್ ಬ್ಯೂಟಿಫುಲ್ ನಟಿ ಎಂದರೆ ಶ್ರೀಲೀಲಾ. ತಮ್ಮ ಮೊದಲ ಚಿತ್ರದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಶ್ರೀಲೀಲಾ ಅವರು ಗಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬೇರೆ ಭಾಷೆಗಳಲ್ಲೂ ಕೂಡ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿರುವ ನಟಿ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳಲ್ಲಿ ಬಿಸಿಯಾಗಿದ್ದಾರೆ. ಶ್ರೀಲೀಲಾ ಅವರ ಕಿಸ್ ಚಿತ್ರದ ನಂತರ ಬೈಟು ಲವ್ ಚಿತ್ರದ ಟೀಸರ್ ನಿಂದ ಅತೀ ಹೆಚ್ಚು ಸುದ್ದಿಯಲ್ಲಿದ್ದರು. ನಟ ಧನವೀರ್ ಗೌಡ ಮತ್ತು ಬಹುಭಾಷಾ ಬೆಡಗಿ ಶ್ರೀಲೀಲಾ ಅವರ ಜೋಡಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಇವರಿಬ್ಬರೂ ಅಭಿನಯಿಸಿದ ಬೈ ಟೂ ಲವ್ ಚಿತ್ರ ಹಿಂದೆಯೇ ತೆರೆಕಾಣಬೇಕಿತ್ತು.

ಆದರೆ ಕೊರೋನಾ ಮಹಾಮಾರಿಯ ಕಾರಣದಿಂದ ಯಾವ ಸಿನಿಮಾಗಳೂ ಕೂಡ ಅಂದುಕೊಂಡ ದಿನಾಂಕದಂದು ರಿಲೀಸ್ ಆಗಲಿಲ್ಲ. ಕೋರೋಣ ಹಾವಳಿ ಸ್ವಲ್ಪ ಕಡಿಮೆಯಾದ ನಂತರ ಫೆಬ್ರುವರಿ 25ನೇ ತಾರೀಕು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಡಿಸೈಡ್ ಮಾಡಿತ್ತು. ಈಗಾಗಲೇ ಬೈಟು ಲವ್ ಚಿತ್ರದ ಪೋಸ್ಟರ್ ಮತ್ತು ಕಲರ್ಫುಲ್ ಅಂಡ್ ಬ್ಯೂಟಿಫುಲ್ ಸಾಂಗ್ಸ್ ನಿಂದ ಕುತೂಹಲ ಕೆರಳಿಸಿರುವ ಈ ಚಿತ್ರವನ್ನು ಅತಿಬೇಗನೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೌದು ಪೋಸ್ಟರ್ ಟೀಸರ್ ಹಾಗೂ ಸಾಂಗ್ಸ್ ಹೀಗೆ ಪ್ರತಿ ಹಂತದಲ್ಲೂ ನಿರೀಕ್ಷೆಯನ್ನು ಹೆಚ್ಚಿಸಿದ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಬಜಾರ್ ಸಿನಿಮಾ ಖ್ಯಾತಿಯ ದನ್ವೀರ್ ಗೌಡ ಮತ್ತು ಕಿಸ್ ಸಿನಿಮಾ ಖ್ಯಾತಿಯ ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಮಹೇಶ್ ಸಿಂಹ ಛಾಯಾಗ್ರಹಣ ನೀಡಿದ್ದು.

ಅಜನೀಶ್ ಲೋಕನಾಥ್ ಸಂಗೀತ ಹಾಗೂ ಯೋಗಾನಂದ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಹರಿ ಸಂತೋಷ್ ಅವರ ಕಲ್ಪನೆಯಲ್ಲಿ ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ಅದ್ಭುತವಾಗಿ ಮೂಡಿ ಬಂದಿದ್ದು, ಈ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಧನ್ವೀರ್ ಮಿಂಚಿದ್ದು ಲವ್ವರ್ ಬಾಯ್ ಪಾತ್ರ ಮಾಡಿದ್ದಾರೆ. ಇನ್ನು ಮುದ್ದು ಮುದ್ದಾದ ಮಲೆನಾಡ ಹುಡುಗಿಯ ಪಾತ್ರದಲ್ಲಿ ನಟಿ ಶ್ರೀಲೀಲ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ನಟ ಗಣೇಶ್ ಅಭಿನಯದ ಸಕ್ಕತ್, ನಿಖಿಲ್ ಕುಮಾರಸ್ವಾಮಿ ನಟನೆಯ ಯದುವೀರ ಹಾಗೂ ಜೋಗಿ ಪ್ರೇಮ್ ದ್ರುವ ಸರ್ಜಾ ಕಾಂಬಿನೇಷನ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ ಈ ಚಿತ್ರಕ್ಕೆ ನಿರ್ಮಾಣ ಮಾಡುತ್ತಿದೆ. ಬಿಡುಗಡೆಗಾಗಿ ಕಾಯುತ್ತಿದ್ದ ಪ್ರೇಕ್ಷಕರನ್ನು ಇನ್ನೂ ಹೆಚ್ಚು ಕಾಯಿಸುವುದು ಬೇಡ ಎಂದು ಡಿಸೈಡ್ ಮಾಡಿಕೊಂಡು, ಮೊದಲೇ ನಿರ್ಧರಿಸಿದ್ದ ದಿನಕ್ಕೂ ಮೊದಲೇ ಅಂದರೆ ಫೆಬ್ರವರಿ 18ರಂದು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.

%d bloggers like this: