ನಿಖಿಲ್ ಕುಮಾರಸ್ವಾಮಿ ಅವರ ನಂತರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಮತ್ತೋರ್ವ ರಾಜಕಾರಣಿಯ ಪುತ್ರ

ಸ್ಟಾರ್ ನಟರ ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದು ಸಾಮಾನ್ಯ. ಆದರೆ ಇತ್ತೀಚೆಗೆ ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಒಳ್ಳೆ ಪರ್ಸನಾಲಿಟಿ, ಒಳ್ಳೆಯ ಲುಕ್ ಇರುವವರು ಡಾನ್ಸ್, ಆಕ್ಟಿಂಗ್ ಕಲಿತುಕೊಂಡು ಅಕಾಡಕ್ಕೆ ಧುಮುಕುತ್ತಿದ್ದಾರೆ. ಇದೇ ರೀತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸಾಮಾನ್ಯವಾಗಿ ರಾಜಕಾರಣಿಗಳ ಪುತ್ರರು ರಾಜಕಾರಣದ ಮೇಲೆ ಆಸಕ್ತಿ ವಹಿಸಿರುತ್ತಾರೆ. ಆದರೆ ಕೆಲವರು ಸಿನಿಮಾರಂಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಿಖಿಲ್ ಕುಮಾರಸ್ವಾಮಿ ಅವರ ನಂತರ ಮತ್ತೊಬ್ಬ ರಾಜಕಾರಣಿಯ ಪುತ್ರ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯಾವ ರಾಜಕಾರಣಿಯ ಪುತ್ರ ಸಿನಿಮಾರಂಗಕ್ಕೆ ಬರುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ ಮುಂದೆ ಓದಿ.

ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಅವರ ಪುತ್ರ ದುಶ್ಯಂತ್ ಅವರು ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೌದು ಸಿನಿಮಾರಂಗದಲ್ಲಿ ಮಿಂಚಬೇಕು ಎನ್ನುವುದು ಇವರ ಕನಸು. ಇದರ ಕುರಿತಾಗಿ ಮಾತನಾಡಿದ ದುಶ್ಯಂತ್ ಅವರು 2017ರಲ್ಲಿ ನಾನು ನಟನಾಗಬೇಕು ಎಂದು ನಿರ್ಧರಿಸಿ, ಸಿನಿಮಾಗಾಗಿ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ಟೆಂಟ್ ಸಿನಿಮಾ ಅಭಿನಯ ಶಾಲೆಯಲ್ಲಿ ಮೂರು ವರ್ಷಗಳ ಕೋರ್ಸ್ ಮಾಡಿರುವ ಇವರು, ಸುಚಿತ್ರ ಫಿಲಂ ಸೊಸೈಟಿಯಲ್ಲಿ ಸಿನಿಮಾ ವಿಷಯವನ್ನು ಕಲಿತಿದ್ದಾರೆ. ಬೀದಿ ನಾಟಕ, ಕಿರುಚಿತ್ರ, ಮ್ಯೂಸಿಕ್ ವಿಡಿಯೋ ಹೀಗೆ ನಟನೆಗೆ ಸಹಾಯವಾಗುವಂತಹ ಹಲವಾರು ಕೆಲಸಗಳನ್ನು ಮಾಡಿದ್ದಾರೆ. 2019ರಲ್ಲಿ ರಂಗಕರ್ಮಿ ಕೃಷ್ಣ ಅವರ ಆಕ್ಟಿಂಗ್ ವರ್ಕ್ಷಾಪ್ ನಲ್ಲಿ ಪಾಲ್ಗೊಂಡ ಇವರು, ಪುಷ್ಕರ್ ಆಕ್ಟಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯನ್ನು ಕಲಿತಿದ್ದಾರೆ.

ನೀನಾಸಂ ಧನಂಜಯ್ ಅವರ ಬಳಿಯೂ ಒಂದಿಷ್ಟು ದಿನಗಳ ಕಾಲ ನಟನಾ ಕಲೆಗಳನ್ನು ಕಲಿತುಕೊಂಡಿದ್ದಾರೆ. ಡಾನ್ಸ್, ಮಾರ್ಷಿಯಲ್ ಆರ್ಟ್ಸ್, ಜಿಮ್ನಾಸ್ಟಿಕ್ ಸೇರಿದಂತೆ ಒಬ್ಬ ನಾಯಕನಿಗೆ ಬೇಕಾಗಿರುವ ಎಲ್ಲಾ ಕಲೆಗಳನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ತಯಾರಿ ನಡೆಸಿರುವ ದುಶ್ಯಂತ್ ಅವರಿಗೆ ಸ್ಯಾಂಡಲ್ವುಡ್ ನ ನಿರ್ದೇಶಕ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಲು ಸಿದ್ದರಾಗಿದ್ದಾರೆ. ನಿರ್ದೇಶಕ ಸುನಿ ಅವರು ಈಗಾಗಲೇ ಬಜಾರ್ ಸಿನಿಮಾ ಮೂಲಕ ದನ್ವೀರ್ ಅವರನ್ನು ಚಂದನವನಕ್ಕೆ ಪರಿಚಯಿಸಿದ್ದಾರೆ. ಇದೀಗ ದುಶ್ಯಂತ್ ಅವರನ್ನು ಪರಿಚಯಿಸಲು ಹೊರಟಿದ್ದಾರೆ. ಸುನಿ ನಿರ್ದೇಶನದ ಸಕ್ಕತ್ ಸಿನಿಮಾ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತು ನಟ ಶರಣ್ ಅಭಿನಯದ ಅವತಾರ ಪುರುಷ ಸಿನಿಮಾಗೂ ಇವರೇ ನಿರ್ದೇಶನ ನೀಡಿದ್ದು, ಇನ್ನೇನು ರಿಲೀಸ್ ಗಾಗಿ ಈ ಸಿನಿಮಾ ಕಾಯುತ್ತಿದೆ. ಇನ್ನು ದುಶ್ಯಂತ್ ಅವರು ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಚಿತ್ರಕ್ಕೆ ‘ಗತ ವೈಭವ’ ಎಂಬ ಪವರ್ಫುಲ್ ಟೈಟಲನ್ನು ನೀಡಿದ್ದಾರೆ. ಗತವೈಭವ ಸಿನಿಮಾ ಪ್ರೇಮಕಥೆ ಹಾಗೂ ಸೈಂಟಿಫಿಕ್ ತ್ರಿಲ್ಲರ್ ಸ್ಟೋರಿ ಆಗಿದೆ. ದುಶ್ಯಂತ್ ಜೊತೆ ನಾನು ರಾಬಿನ್ ಹುಡ್ ಸಿನಿಮಾ ಮಾಡಬೇಕಿತ್ತು. ಆದರೆ ಈ ಸಿನಿಮಾವನ್ನು ಕೆಲವು ಕಾರಣಗಳಿಂದ ಮುಂದೆ ಹಾಕಿದ್ದು, ಗತವೈಭವ ಸ್ಟೋರಿ ದುಶ್ಯಂತ್ ಅವರಿಗೆ ಸೂಟ್ ಆಗುತ್ತದೆ ಈ ಚಿತ್ರಕ್ಕಾಗಿ ಅವರು ತುಂಬಾ ಶ್ರಮಪಡುತ್ತಿದ್ದಾರೆ. ತಮ್ಮ ತಂದೆಯ ರಾಜಕೀಯ ಕ್ಷೇತ್ರದ ಹೆಸರನ್ನು ಬಳಸಿಕೊಳ್ಳದೆ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬುದು ದುಶ್ಯಂತ್ ಅವರ ಉದ್ದೇಶ ಎಂದು ಹೇಳಿದರು.

%d bloggers like this: