ನಿಲ್ಲುತ್ತಿಲ್ಲ ಡಾಲಿ ಧನಂಜಯ ಅವರ ಯಶಸ್ಸಿನ ಓಟ, ಡಾಲಿ ಬಗ್ಗೆ ಪ್ರಶಾಂತ್ ನೀಲ್ ಹೀಗಂದ್ರು

ಬಡವ ರಾಸ್ಕಲ್ ಬಗ್ಗೆ ಕೆಜಿಎಫ್ ಸಿನಿಮಾ ನಿರ್ದೇಶಕ ಹೇಳಿದ್ದೇನು ಗೊತ್ತಾ, ಚಂದನವನದ ನಟ ರಾಕ್ಷಸ ಖ್ಯಾತಿಯ ನಟ ಧನಂಜಯ್ ನಟನೆಯ ಬಡವ ರಾಸ್ಕಲ್ ಸಿನಿಮಾ ರಾಜ್ಯಾದ್ಯಂತ ಇನ್ನೂರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಕಳೆದ ಡಿಸೆಂಬರ್ 24 ರಂದು ಬಿಡುಗಡೆಯಾದ ಬಡವ ರಾಸ್ಕಲ್ ಸಿನಿಮಾ ಬಿಡುಗಡೆ ಮೊದಲು ಟೀಸರ್, ಟ್ರೇಲರ್ ಮತ್ತು ಹಾಡುಗಳಿಂದ ಸಾಕಷ್ಟು ಸದ್ದು ಮಾಡಿತ್ತು. ನಟ ಧನಂಜಯ್ ಅವರೇ ಬಂಡವಾಳ ಹೂಡಿದ್ದ ಈ ಚಿತ್ರಕ್ಕೆ ಅವಲ ಆಪ್ತ ಗೆಳೆಯರಾದ ಗುರು ಶಂಕರ್ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಚಿತ್ರದ ಹಾಡುಗಳು ಸಿನಿ ಪ್ರೇಕ್ಷಕರನ್ನ ಮೋಡಿ ಮಾಡಿವೆ.

ಇದುವರೆಗೆ ನಟರಾಗಿದ್ದ ಧನಂಜಯ್ ಅವರು ಬಡವ ರಾಸ್ಕಲ್ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ‌. ಮಧ್ಯಮ ವರ್ಗದ ಆಟೋ ಓಡಿಸುವ ಯುವಕನ ಕಥೆ ಇರುವ ಬಡವ ರಾಸ್ಕಲ್ ಸಿನಿಮಾ ಪ್ರಮೋಶನ್ ನಲ್ಲಿಯೂ ಕೂಡ ಸಖತ್ ಸೌಂಡ್ ಮಾಡಿತ್ತು. ಸ್ವತಃ ನಟ ಧನಂಜಯ್ ಅವರೇ ಬಡವ ರಾಸ್ಕಲ್ ಸಿನಿಮಾ ಪ್ರಚಾರವನ್ನು ಜನ ಸಾಮಾನ್ಯರ ಬಳಿಯೇ ನೇರವಾಗಿ ಹೋಗಿ ತಮ್ಮ ಚಿತ್ರದ ಬಗ್ಗೆ ತಿಳಿಸುತ್ತಿದ್ದರು. ಅದರಂತೆ ಬಡವ ರಾಸ್ಕಲ್ ಸಿನಿಮಾ ತಂಡದ ಶ್ರಮ ಮತ್ತು ಉತ್ಸಾಹಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಬಿಡುತ್ತದೆ. ಹೌದು ಬಡವ ರಾಸ್ಕಲ್ ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಡಾಲಿ ಧನಂಜಯ್ ಅವರ ಅಭಿನಯಕ್ಕೆ ಮನಸೋತಿರುವ ಅವರ ಅಭಿಮಾನಿಗಳು ಡಾಲಿ ಗೆ ಜೈಕಾರ ಕೂಗುತ್ತಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಥಿಯೇಟರ್ ಗಳಿಗೆ ಭೇಟಿ ನೀಡುತ್ತಿರುವ ಧನಂಜಯ್ ಅವರಿಗೆ ಎಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಹೋದಲೆಲ್ಲಾ ಧನಂಜಯ್ ಅವರನ್ನು ನೋಡಲು ಜನ ಸಾಗರವೇ ಹರಿದು ಬರುತ್ತಿದೆ. ರಾಜ್ಯದ ವಿವಿಧ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ಯಶಸ್ಸಿನ ಸವಾರಿ ಮಾಡುತ್ತಿರುವ ಬಡವ ರಾಸ್ಕಲ್ ಸಿನಿಮಾ ತಂಡ ಜನರ ಪ್ರೀತಿ ನೋಡಿ ಫುಲ್ ಖುಷ್ ಆಗಿದ್ದಾರೆ. ಚಿತ್ರದ ನಾಯಕಿ ನಟಿಯಾಗಿ ಅಮೃತಾ ಅಯ್ಯಂಗರ್ ಕಾಣಿಸಿಕೊಂಡಿದ್ದು, ರಂಗಾಯಣ ರಘು, ತಾರಾ, ನಾಗಭೂಷಣ್ , ಪೂರ್ಣಚಂದ್ರ, ಸ್ಪರ್ಶ ರೇಖಾ, ಜೊತೆಗೆ ವಿಶೇಷ ಪಾತ್ರದಲ್ಲಿ ಮಠ ಚಿತ್ರದ ನಿರ್ದೇಶಕ ಗುರು ಪ್ರಸಾದ್ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಬಡವ ರಾಸ್ಕಲ್ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿದೆ‌. ಇನ್ನು ಇತ್ತೀಚೆಗೆ ಕೆಜಿಎಫ್ ಚಿತ್ರದ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೂಡ ಬಡವ ರಾಸ್ಕಲ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಶಾಂತ್ ನೀಲ್ ಅವರು 2021 ನಿಜವಾಗಿಯೂ ಕೂಡ ಎಲ್ಲರಿಗೂ ರೋಲರ್ ಕೋಸ್ಟರ್ ರೈಡ್ ಆಗಿತ್ತು. ನಮ್ಮ ಬಡವ ರಾಸ್ಕಲ್ ಚಿತ್ರ ಯಶಸ್ಸಿನ ಮೂಲಕ ಈ ವರ್ಷ ಕೊನೆಗೊಂಡಿದೆ ಎಂದು ಬರೆದುಕೊಂಡು ಚಿತ್ರಕ್ಕೆ ಅಭಿನಂದನೆ ತಿಳಿಸಿದ್ದಾರೆ. ಈ ಟ್ವೀಟ್ ಅನ್ನು ನಟ ಧನಂಜಯ್ ಶೇರ್ ಮಾಡಿಕೊಂಡು ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

%d bloggers like this: