ನಿಲ್ಲುತ್ತಿಲ್ಲ ಈ ಕಾರಿನ ಓಟ, ಕೇವಲ 6 ತಿಂಗಳಲ್ಲಿ ದಾಖಲೆ ಪ್ರಮಾಣದ ಬುಕ್ಕಿಂಗ್

ದಾಖಲೆ ಮಟ್ಟದ ಬುಕ್ಕಿಂಗ್ ಪಡೆದ ಪ್ರಸಿದ್ದ ಕಂಪನಿಯ ಎಸ್ ಯೂ ವಿ ಕಾರು ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಅನೇಕ ಕಂಪನಿಗಳ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಗೊಳ್ಳುತ್ತಿವೆ. ಅವುಗಳ ಪೈಕಿ ಮಹೀಂದ್ರಾ ಮೋಟಾರ್ಸ್ ಕಂಪನಿಯ ಎಕ್ಸ್.ಯು.ವಿ 700 ಕಾರ್ ಕೂಡ ಒಂದು. ಇತ್ತೀಚೆಗೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಭಾರತೀಯ ಕಾರು ಮಾರಾಟಕ್ಕೆ ಪರಿಚಯವಾದ ಈ ಮಹೀಂದ್ರಾ ಎಕ್ಸ್.ಯೂ.ವಿ 700.ಕಾರು ಲಾಂಚ್ ಆದ ಎರಡೇ ದಿನಗಳಲ್ಲಿ ಬರೋಬ್ಬರಿ ಐವತ್ತು ಸಾವಿರಕ್ಕೂ ಅಧಿಕ ಮುಂಗಡ ಕಾಯ್ದಿರಿಸುವಿಕೆ ಮಾಡಿಕೊಂಡು ಈ ಮಹೀಂದ್ರಾ ಎಕ್ಸ್.ಯು.ವಿ.700 ಕಾರು ಭಾರಿ ಸುದ್ದಿಯಾಗಿತ್ತು.

ಮಹೀಂದ್ರಾ ಸಂಸ್ಥೆ ತಿಳಿಸಿರುವ ಪ್ರಕಾರ ಈ ಎಕ್ಸ್.ಯು.ವಿ 700 ಕಾರು ಇದುವರೆಗೆ ಬರೋಬ್ಬರಿ 14 ಸಾವಿರ ಕಾರುಗಳನ್ನು ಗ್ರಾಹಕರಿಗೆ ತಲುಪಿಸಿದ್ದು, ಸರಿ ಸುಮಾರು ಒಂದು ಲಕ್ಷ ದವರೆಗೆ ಅಡ್ವಾನ್ಸ್ ಬುಕ್ಕಿಂಗ್ ಪಡೆದುಕೊಂಡಿವೆಯಂತೆ. ಇಲ್ಲಿ ಮಹೀಂದ್ರಾ ಸಂಸ್ಥೆಗೆ ಹೊರೆಯಾಗಿ ಕಾಣಿಸುತ್ತಿರುವುದು ಅಂದರೆ ಅದು ಪ್ರೊಡಕ್ಟಿವಿಟಿ. ಹೌದು ಉತ್ಪಾದನೆಗಿಂತ ಮೂರು ಪಟ್ಟು ಅಧಿಕ ಬೇಡಿಕೆ ಬರುತ್ತಿರುವುದರಿಂದ ಮಹೀಂದ್ರಾ ಕಂಪನಿಗೆ ಸೂಕ್ತ ಸಮಯಕ್ಕೆ ಗ್ರಾಹಕರಿಗೆ ಕಾರುಗಳನ್ನ ನೀಡಲು ಸಾಧ್ಯವಾಗುತ್ತಿಲ್ಲ.

ಈ ಮಹೀಂದ್ರಾ ಎಕ್ಸ್.ಯು.ವಿ 700 ಕಾರಿಗೆ ಈ ಪರಿ ಪ್ರಮಾಣದ ಬೇಡಿಕೆ ಸೃಷ್ಟಿಯಾಗಲು ಪ್ರಮುಖ ಕಾರಣ ಅಂದರೆ ಈ ಕಾರಿನಲ್ಲಿ ಇರುವಂತಹ ಅಡ್ವಾನ್ಸ್ ಫೀಚರ್ ಮತ್ತು ಅದರ ಬೆಲೆ. ಹೌದು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಆಯ್ಕೆ ಹೊಂದಿರುವ ಈ ಕಾರಿನಲ್ಲಿ ಗ್ರಾಹಕರ ಬೇಡಿಕೆಯ ಅನುಗುಣವಾಗಿ ಸೆವೆನ್ ಸೀಟರ್ ಹಾಗೂ ಫೈವ್ ಸೀಟರ್ ಸಿಸ್ಟಂ ಹೊಂದಿದೆ. ಈ ಹೊಸ ಕಾರಿನಲ್ಲಿ 2.0 ಲೀಟರ್ ಟರ್ಬೋ ಪೆಟ್ರೋಲ್ ಮತ್ತು 2.2 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಆಯ್ಕೆಯನ್ನೊಂದಿದೆ.

ಇನ್ನು ಈ ಎಕ್ಸ್.ಯು.ವಿ ಕಾರು 198 ಬಿ.ಎಚ್.ಪಿ., 300 ಎನ್.ಎಂ.ಟಾರ್ಕ್ ಉತ್ಪಾದನೆ ಮಾಡಲಿದ್ದು, ಎಂ.ಎಕ್ಸ್, ಎ ಎಕ್ಸ್,ಎ.ಎಕ್ಸ್ ಫೈವ್, ಎ.ಎಕ್ಸ್ ಸೆವೆನ್,ಎ.ಎಕ್ಸ್ ಸೆವೆನ್ ಲಗ್ಸುರಿ ಹೀಗೆ ವಿವಿಧ ವೇರಿಯಂಟ್ ಗಳಲ್ಲಿ ಮಹೀಂದ್ರಾ ಎಕ್ಸ್ ಯು.ವಿ 700 ಕಾರು ಲಭ್ಯವಿದೆ. ಇನ್ನು ದೆಹಲಿಯ ಶೋರಂ ಆರಂಭಿಕ ಬೆಲೆಯು 12.95 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿ ಬೆಲೆ 23.80 ಲಕ್ಷ ರೂ ಗಳ ಮೌಲ್ಯವನ್ನೊಂದಿದೆ ಎಂದು ಕಂಪನಿ ತಿಳಿಸಿದೆ. ಒಟ್ಟಾರೆಯಾಗಿ ಬಿಡುಗಡೆಯಾಗಿ ಐದೇ ತಿಂಗಳ ಅವಧಿಯಲ್ಲಿ ಈ ಮಹೀಂದ್ರಾ ಎಕ್ಸ್.ಯು.ವಿ 700 ಕಾರು ಬರೋಬ್ಬರಿ ಒಂದು ಲಕ್ಷ ಅಡ್ವಾನ್ಸ್ ಬುಕ್ಕಿಂಗ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ.

%d bloggers like this: