ನಿಮಗೆ ಧನಪ್ರಾಪ್ತಿ ಆಗುವ ಮುನ್ನ ಕಾಗೆ ಕೊಡುವ ಸೂಚನೆಗಳು ಇವು

ಸಾಮಾನ್ಯವಾಗಿ ನಾವು ಕಾಗೆಯ ಕೂಗು ಅಶುಭ ಎಂದು ನಂಬುತ್ತೇವೆ. ಕಾಗೆ ಏನಾದರು ನಿಮ್ಮ ಮನೆಯ ಮುಂಭಾಗ ಅಥವಾ ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಕಾಣಿಸಿಕೊಂಡು ನಿರಂತರವಾಗಿ ಕೂಗುತ್ತಿದ್ದರೆ ಹಲವರು ಇದು ಸಾ-ವಿನ ಸಂಕೇತ ಎಂದು ಭಾವಿಸುತ್ತಾರೆ. ಕೆಲವು ಸಮಯದಲ್ಲಿ ಅದರಲ್ಲೂ ತಿಥಿಯ ಸಂಧರ್ಭಗಳಲ್ಲಿ ಕಾಗೆಯನ್ನು ಸ-ತ್ತು ಹೋದ ವ್ಯಕ್ತಿಯ ರೂಪದಲ್ಲಿ ಕಾಣುತ್ತಾರೆ. ಈ ಕಾಗೆ ಬಂದು ತಿಥಿಯ ಕಾರ್ಯದಲ್ಲಿ ಇಟ್ಟಿರುವ ಆಹಾರವನ್ನು ಸೇವಿಸಿದರೆ ಆ ಕಾಲವಾದ ವ್ಯಕ್ತಿಯೇ ಬಂದು ಸೇವಿಸುತ್ತಾನೆ ಎಂಬ ನಂಬಿಕೆಯೂ ಕೂಡ ಉಂಟು, ಹಾಗಾದರೆ ಈ ಕಾಗೆ ಕೂಗಿನ ಸೂಚನೆಯಲ್ಲಿ ಶುಭ ಮತ್ತು ಅಶುಭ ಸಂಕೇತಗಳು ಯಾವ ರೀತಿಯಲ್ಲಿ ಇರುತ್ತವೆ ಎಂಬುದನ್ನು ತಿಳಿಯಿರಿ.

ನೀವು ಪ್ರಯಾಣಿಸುವಾಗ ಎಲ್ಲಿಯಾದರು ಕಾಗೆಯು ಪಾತ್ರೆಯಲ್ಲಿರುವ ನೀರನ್ನು ತನ್ನ ಬಾಯಿಂದ ಕುಡಿಯುತ್ತಿರುವ ದೃಶ್ಯ ಕಂಡು ಬಂದರೆ ನಿಮಗೆ ಅಂದಿನ ಕೆಲಸ ಕಾರ್ಯಗಳಲ್ಲಿ ಧನಲಾಭ ಪ್ರಾಪ್ತಿಯಾಗುತ್ತದೆ ಜೊತೆಗೆ ನಿಮ್ಮ ಪ್ರಯಾಣ ಕ್ಷೇಮವಾಗಿ ಸುಖಮಯ ವಾಗಿರುತ್ತದೆ ಎಂಬ ಸೂಚನೆ ನೀಡುತ್ತದೆ. ಬೆಳಿಗ್ಗೆಯ ಸಮಯದಲ್ಲಿ ಕಾಗೆಯು ಆಕಸ್ಮಿಕವಾಗಿ ಅಥವಾ ಕಾಕತಾಳಿಯವಾಗಿ ನಿಮ್ಮ ಪಾದವನ್ನು ಸ್ಪರ್ಶ ಮಾಡಿದರೆ ನಿಮಗೆ ನಿಮ್ಮ ಕ್ಷೇತ್ರದಲ್ಲಿ, ಉದ್ಯೋಗದಲ್ಲಿ ಉನ್ನತಿ ಸಾಧಿಸಬಹುದು ಎಂಬ ಸಂಕೇತವಾಗಿದೆ ಮತ್ತು ನಿಮಗೆ ಧನಪ್ರಾಪ್ತಿ ಲಭಿಸುತ್ತದೆ.

ಇದು ಆಶ್ಚರ್ಯ ವಾದರು ಕೆಲವೊಮ್ಮೆ ಕಾಗೆಯು ಭೂಮಿಯನ್ನು ಅಗೆಯುವಂತೆ ಮಣ್ಣನ್ನು ಕೆದುಕುತ್ತಿರುತ್ತದೆ ಇಂತಹ ಘಟನೆಗಳು ಕೂಡ ನಡೆಯುತ್ತದೆ, ಈ ದೃಶ್ಯ ನಿಮಗೆ ಕಂಡು ಬಂದರೆ ನಿಮಗದು ಶುಭ ಸಂಕೇತವಾಗಿರುತ್ತದೆ.

ಕಾಗೆಯು ತನ್ನ ಬಾಯಿಂದ ಬಟ್ಟೆಯ ಚೂರನ್ನು ಕುಟುಕುತ್ತಿರುವ ದೃಶ್ಯವು ಕೆಲವರಿಗೆ ಶುಭಸಂಕೇತ, ಆದರೆ ಕೆಲವರಿಗೆ ಇಲ್ಲಿ ಮರ್ಯಾದೆಯ ಪ್ರಶ್ನೆ ಕಾಡುತ್ತದೆ. ಅಂದರೆ ಅವರ ಗೌರವಕ್ಕೆ ದಕ್ಕೆ ಬರುವಂತಹ ಸಾಧ್ಯತೆ ಇರುತ್ತದೆ. ನೀವು ತೀರ್ಥಕ್ಷೇತ್ರ ಅಥವಾ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವಾಗ ಕಾಗೆಯು ರಾಗವಾಗಿ ಕೂಗುತ್ತಾ ನಿಮ್ಮ ಬಲಭಾಗಕ್ಕೆ ಹಾದುಹೋದರೆ ನಿಮಗೆ ಶುಭವಾಗುತ್ತದೆ. ನಿಮಗೆ ದೇವರ ದರ್ಶನ ಸುಗಮವಾಗಿ ಸುಲಲಿತವಾಗಿ ನಡೆಯಬಹುದು ಎಂಬ ಸೂಚನೆಯಾಗಿರುತ್ತದೆ.

ವಿಶೇಷವಾಗಿ ವೈಶಾಖ ಮಾಸದಲ್ಲಿ ಹಚ್ಚ ಹಸಿರಾಗಿರುವ ಮರದಲ್ಲಿ ಕಾಗೆಯು ಗೂಡು ಮಾಡಿ ತನ್ನ ಮರಿಗಳೊಂದಿಗೆ ವಾಸಿಸುತ್ತಿದ್ದರೆ ಆ ದಿನಗಳಲ್ಲಿ ಮಳೆಯಾಗುತ್ತದೆ ಎಂಬ ನಂಬಿಕೆಯು ಕೂಡ ಇದೆ.

ಎರಡು ಕಾಗೆಗಳು ಒಂದಕ್ಕೊಂದು ಆಹಾರ ತಿನ್ನಿಸುತ್ತಿರುವ ದೃಶ್ಯ ಕಂಡು ಬಂದರೆ ನಿಮಗೆ ಆ ದಿನ ಪೂರ್ತಿ ಒಳ್ಳೆಯದಾಗಿರುತ್ತದೆ, ಜೊತೆಗೆ ಕಾಗೆಯು ನಿಮ್ಮ ಮನೆ ಮುಂಭಾಗ ಕೂಗುತ್ತಿದ್ದರೆ ಅಂದು ನಿಮ್ಮ ಮನೆಗೆ ಅತಿಥಿಗಳು ಬರುತ್ತಾರೆ ಎಂಬ ಸೂಚನೆಯಾಗಿದೆ. ಹೀಗೆ ಕಾಗೆಯ ಕೂಗಿನ ಹಿಂದೆ ಹಲವಾರು ಶುಭ ಸೂಚನೆಗಳು ಕೂಡ ಇವೆ. ಕಾಗೆ ಕೂಗಿದಾಕ್ಷಣ ಕೇವಲ ಅಪಶಕುನ, ಸಾವಿನ ಸೂಚನೆಗಳೇ ಇರುವುದಿಲ್ಲ ಎಂದು ಶಕುನ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಕಾಗೆಗಳಿಗೆ ಆಹಾರ ಹಾಕುವುದರಿಂದ ನಿಮಗೆ ಧನಲಕ್ಷ್ಮಿಯ ಕೃಪೆಯಾಗುತ್ತದೆ.

%d bloggers like this: