ನಿಮಗೆ ಈ ಕನಸುಗಳು ಬಿದ್ದರೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಎಂದರ್ಥ

ನಿಮಗೆ ಬೀಳುವ ಕನಸು ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸಬಹುದು. ಆದರೆ ಬೀಳುವ ಕನಸುಗಳು ಯಾವ ರೀತಿಯಲ್ಲಿ ಇರುತ್ತವೆ ಎಂಬುದು ಮುಖ್ಯವಾಗಿರುತ್ತದೆ. ಸಾಮಾನ್ಯವಾಗಾ ಎಲ್ಲರಿಗೂ ಕನಸುಗಳು ಬೀಳುತ್ತವೆ. ಈ ಕನಸುಗಳು ಕೆಲವರಿಗೆ ಮಾನಸಿಕ ವೈಫಲ್ಯವನ್ನು ತಂದೊಡ್ಡುತ್ತದೆ. ಪ್ರತಿಯೊಂದು ಕನಸಿಗೂ ಒಂದೊಂದು ರೀತಿಯ ಮಹತ್ವವಿರುತ್ತದೆ. ಬೀಳುವ ಕನಸುಗಳು ಕೆಲವರಿಗೆ ಒಳ್ಳೆಯದಾದರೆ ಕೆಲವರಿಗೆ ಕೆಟ್ಟಾಗಿರುತ್ತದೆ. ಕನಸುಗಳು ಶುಭಸೂಚನೆ ನೀಡುವ ಬಗ್ಗೆ ತಿಳಿಯುವುದಾದರೆ ದೇವರ ವಿಗ್ರಹಗಳು ಕನಸಿನಲ್ಲಿ ಬಂದರೆ ನಿಮಗೆ ಭಗವಂತನ ಕೃಪಾಕಟಾಕ್ಷ ಅನುಗ್ರಹಿಸಿದೆ ಎಂದು ಅರ್ಥವಾಗಿದೆ. ಇದರಿಂದ ನಿಮಗೆ ಅಷ್ಟ ಐಶ್ವರ್ಯ ದೊರೆಯುತ್ತದೆ.

ನಿಮ್ಮ ಮಕ್ಕಳಿಗೆ ಕನಸಿನಲ್ಲಿ ಸಾಕ್ಷಾತ್ ಲಕ್ಷ್ಮಿಯು ನಿಮ್ಮ ಮನೆಯನ್ನು ಪ್ರವೇಶ ಮಾಡುವ ರೀತಿಯಲ್ಲಿ ಕಾಣಿಸಿಕೊಂಡರೆ ನಿಮಗೆ ಧನಾಗಮನ ಆಗುವ ಸೂಚನೆಯಾಗಿರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳಿಗೆ ಕನಸಿನಲ್ಲಿ ಬನ್ನಿ ಮರವು ಕಾಣಿಸಿಕೊಂಡರೆ ಅವರು ಉನ್ನತ ಪದವಿ ಪಡೆಯುವ ಸಾಧ್ಯತೆ ಇರುತ್ತದೆ. ತಮ್ಮ ವೃತ್ತಿಯಲ್ಲಿ ಜಯಶೀಲರಾಗುತ್ತಾರೆ.

ಇನ್ನು ನಿಮ್ಮ ಕನಸಿನಲ್ಲಿ ಹರಿಯುವ ನೀರು, ಸಮುದ್ರ, ನದಿಯಂತಹ ನೀರಿನ ಮೂಲಗಳನ್ನು ಕಂಡರೆ ನಿಮಗೆ ಐಶ್ವರ್ಯ ಲಭಿಸುತ್ತದೆ. ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ದೊರೆಯುತ್ತದೆ. ನಿಮ್ಮೆಲ್ಲಾ ಇಷ್ಟಾರ್ಥಗಳು ನೆರೆವೇರುತ್ತವೆ ಎಂಧರ್ಥ.

ಜೊತೆಗೆ ಬಿಳಿ ಕುದುರೆ, ಅದರ ಮೇಲೆ ನೀವು ಸವಾರಿ ಮಾಡಿದ ರೀತಿ ಕನಸು ಕಂಡರೆ ನಿಮ್ಮ ಜೀವನದಲ್ಲಿ ನೀವು ಕಂಡಿದ್ದ ವಿದೇಶಿ ಪ್ರವಾಸದ ಕನಸು ಈಡೇರುತ್ತದೆ. ಅದಲ್ಲದೆ ನಿಮಗೆ ಸೂರ್ಯೋದಯ ಮತ್ತು ನೀವು ಸೂರ್ಯ ನಮಸ್ಕಾರ ಮಾಡುವ ಹಾಗೇ ಕನಸು ಕಂಡರೇ ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿ, ನೆನೆಗುದಿಗೆ ಬಿದ್ದಿದ್ದ ಎಷ್ಟೋ ಕೆಲಸಗಳು ಮುಂದುವರಿಯುವಂತದ್ದಾಗುತ್ತದೆ. ಅದರ ಜೊತೆಗೆ ನೀವು ವಿಜಯಶಾಲಿಯಾಗಿ ನಿಮ್ಮ ಬದುಕು ಬೆಳಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: