ನಿಮಗೆ ಏನಾದರೂ ಸಮಸ್ಯೆ ಆದರೆ ನನಗೆ ನೋವಾಗುತ್ತದೆ, ನಟ ಯಶ್ ಮನವಿ

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಮೂಲಕ ರಾಕಿಬಾಯ್ ಹೆಸರಿನಿಂದ ನ್ಯಾಷನಲ್ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ, ಇದೀಗ ನಟ ಯಶ್ ಅವರು ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಟಾರ್ ನಟರ ಹುಟ್ಟು ಹಬ್ಬ ಅಂದಾಕ್ಷಣ ಅವರ ಅಭಿಮಾನಿಗಳಿಗೂ ಕೂಡ ಅಂದು ಹಬ್ಬದ ಸಡಗರವಾಗಿರುತ್ತದೆ. ತಮ್ಮ ನೆಚ್ಚಿನ ನಟನನ್ನು ನೋಡಲು ಅವರ ಹುಟ್ಟು ಹಬ್ಬದಂದು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಅವರ ಹುಟ್ಟು ಹಬ್ಬಕ್ಕೆ ಉಡುಗೊರೆ ನೀಡಿ ಶುಭಾಶಯ ಕೋರುತ್ತಾರೆ. ಅದೇ ರೀತಿ ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ ವಿರುವುದರಿಂದ ಅಸಂಖ್ಯಾತ ಅವರ ಅಭಿಮಾನಿಗಳು ಮನೆ ಬಳಿ ಬಂದು ವಿಶ್ ಮಾಡುತ್ತಿದ್ದರು.

ಆದರೆಈ ವರ್ಷ ಕೊವಿಡ್19 ಇರುವ ಕಾರಣ ಯಾರೂ ಕೂಡ ಮನೆಯ ಬಳಿ ಬರಬೇಡಿ ನೀವು ಇದ್ದಲಿಯೇ ನನಗೆ ವಿಶ್ ಮಾಡಿ ಆಶಿರ್ವದಿಸಿ ನೀವು ಬಂದು ಇಲ್ಲಿ ನಿಮಗೆ ಏನಾದರು ಸಮಸ್ಯೆ ಆದರೆ ನನಗೆ ನೋವಾಗುತ್ತದೆ ಎಂದು ತಮ್ಮ ಅಭಿಮಾನಿಗಳಲ್ಲಿ ನಟ ಯಶ್ ಮನವಿ ಮಾಡಿದ್ದಾರೆ.

ಇನ್ನು ಜನವರಿ 8ರಂದು ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್2 ಚಿತ್ರದ ಟೀಸರ್ ಬಿಡುಗಡೆ ಯಾಗಲಿದೆ ಎಂದು ಚಿತ್ರತಂಡ ತಿಳಿಸಿದ್ದಾರೆ. ಈ ಟೀಸರ್ ಗಾಗಿ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಎದುರು ನೋಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಕೆಜಿಎಫ್2 ಚಿತ್ರದ ನ್ಯುಸ್ ಪೇಪರ್ ಪೋಸ್ಟರ್ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಕಳೆದ ವರ್ಷ ಅಂಬರೀಶ್ ನಿಧನರಾದ ಕಾರಣ ನಟ ಯಶ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರಲಿಲ್ಲ, ಆಗ ಯಶ್ ನೋಡಲಾಗಲಿಲ್ಲ ಎಂಬ ಬೇಜಾರಿಂದ ಅಭಿಮಾನಿ ರವಿ ಎಂಬಾತ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದರು ಆಸ್ಪತ್ರೆಗೆ ಕರೆದೊಯ್ದರು ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದರು. ಇದು ಯಶ್ ಅವರಿಗೆ ಅತೀವ ನೋವನ್ನುಂಟು ಮಾಡಿತ್ತು ಹಾಗೂ ಯಶ್ ಅವರು ಮರೆಯಲಾಗದ ವರ್ಷವಾಗಿ ಉಳಿದಿದೆ ಎಂದು ಹೇಳಬಹುದು.

%d bloggers like this: