ನಿಮಗೂ ಮಂಡಿ ನೋವು ಕಾಡುತ್ತಿದೆಯಾ, ಹೀಗೆ ಮಾಡಿ ಸಮಸ್ಯೆ ಬಗೆ ಹರಿಯಬಹುದು

ಅನಾರೋಗ್ಯ ಸಮಸ್ಯೆ ಅನ್ನೋದು ವಯಸ್ಸನ್ನ ನೋಡಿ ಬರುವುದಿಲ್ಲ. ರೋಗಗಳಿಗೆ, ದೈಹಿಕ ಕಾಯಿಲೆಗಳಿಗೆ ಯಾವುದೇ ರೀತಿಯ ವಯೋಮಿತಿ ಇರುವುದಿಲ್ಲ. ಯಾರಿಗೆ, ಯಾವಾಗ, ಹೇಗೆ ಸಮಸ್ಯೆ ಉಣ್ಭವಿಸಲಿದೆ ಎಂಬುದನ್ನ ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ. ಇಂದಿನ ದಿನಮಾನಗಳಲ್ಲಿ ಕೇವಲ ಹತ್ತು ವರ್ಷದ ಮಕ್ಕಳಿಗೂ ಕೂಡ ಬಿಪಿ ಶುಗರ್ ಬರುತ್ತಿದೆ. ಇಪ್ಪತ್ತೈದು ವರ್ಷದ ತರುಣರಿಗೆ ಬೆನ್ನು ನೋವು, ಮಂಡಿ ನೋವು ಸಮಸ್ಯೆ ಕಾಡುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ಇಂದಿನ ದಿನಮಾನಗಳ ಜೀವನ ಶೈಲಿ ಮತ್ತು ಕೆಲಸದ ಒತ್ತಡ, ಆಹಾರ ಕ್ರಮ ಎಂದು ವೈದ್ಯರು ಹೇಳುತ್ತಾರೆ. ದಶಕಗಳ ಹಿಂದೆಲ್ಲಾ ಮಂಡಿ ನೋವು ಸಮಸ್ಯೆ ಕಾಣಿಸಿಕೊಳ್ಳುವುದು ವಯಸ್ಸಾದವರಿಗೆ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಬಹುತೇಕ ಯುವಕರಿಗೂ ಕೂಡ ವಯೋವೃದ್ದರಿಗೆ ಬರುತ್ತಿದ್ದ ಎಲ್ಲಾ ದೈಹಿಕ ಸಮಸ್ಯೆಗಳು, ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.

ಇದು ಸಾಮಾನ್ಯ ಕೂಡ ಆಗಿವೆ. ಹೀಗೆ ಈ ಮೊಣಕಾಲು ಸಮಸ್ಯೆಯಿಂದ ನಿಲ್ಲಲು, ಓಡಾಡಲು ಅನೇಕರು ಭಾದೆ ಪಡುತ್ತಿರುತ್ತಾರೆ. ಅಂತಹವರಿಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಮನೆ ಮದ್ದುವೊಂದಿದೆ. ಹೌದು ನಿಮಗೆ ಮಂಡಿ ನೋವು ತುಂಬಾ ಸಮಸ್ಯೆ ನೀಡುತ್ತಿದೆ ಎಂದರೆ ನೀವು ಈ ಒಂದು ಕೆಲಸವನ್ನು ಮಾಡಿ. ನೀವು ಖಂಡಿತಾ ಮಂಡಿ ನೋವು ಸಮಸ್ಯೆಯಿಂದ ಮುಕ್ತರಾಗುತ್ತೀರಿ. ಅಂದಹಾಗೆ ನೀವು ಮಾಡಬೇಕಾದ್ದು ಏನಪ್ಪಾ ಅಂದರೆ ಮೆಂತೆ ಕಾಳಿಗೆ ಅರ್ಧ ಚಮಜ ಜೀರಿಗೆ ಮತ್ತು ಕಾಳು ಮೆಣಸನ್ನು ಪುಡಿ ಮಾಡಿ ಸೇರಿಸಬೇಕು. ನಂತರ ಅದನ್ನು ಒಂದು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಡಿ.

ಈ ಪುಡಿಯನ್ನ ಪ್ರತಿ ನಿತ್ಯ ಒಂದು ಲೋಟ ಬಿಸಿ ನೀರಿಗೆ ಮಿಶ್ರಣ ಮಾಡಿ ಕುಡಿಯುತ್ತಾ ಬಂದರೆ ಕ್ರಮೇಣ ನಿಮಗೆ ನಿಮ್ಮಮಂಡಿನೋವಿನ ಸಮಸ್ಯೆ ದೂರ ಆಗುತ್ತದೆ. ಇದರಲ್ಲಿ ಕಬ್ಬಿಣಾಂಶ ಇರುವುದರಿಂದ ಬಹುಬೇಗ ಮೊಣಕಾಲು ನೋವಿನ ಸಮಸ್ಯೆ ಮುಕ್ತವಾಗುತ್ತದೆ. ಅದರ ಜೊತೆಗೆ ಆದಷ್ಟು ಹಸಿರು ತರಕಾರಿ, ಹಣ್ಣು, ಮತ್ತು ಡ್ರೈ ಫ್ರೂಟ್ಸ್ ಸೇವನೆ ಮಾಡಿದರೆ ಮೂಳೆಗಳು ಗಟ್ಟಿಯಾಗಿ ಸಧೃಡವಾಗುತ್ತವೆ. ಯಾಕಂದ್ರೆ ಈ ಆಹಾರ ಪಧಾರ್ಥಗಳಲ್ಲಿ ಅತಿ ಹೆಚ್ಚು ಪ್ರೋಟಿನ್ ಅಂಶಗಳು ಇರುತ್ತವೆ. ಹಾಗಾಗಿ ಇಂದಿನ ಯುವಕರು ಆದಷ್ಟು ಮಸಾಲೆಯುಕ್ತ ಪಧಾರ್ಥ ಜಂಕ್ ಫುಡ್ ಗಳಿಂದ ದೂರವಿದ್ದು ಡ್ರೈಫ್ರೂಟ್ಸ್ ಮತ್ತು ಹಣ್ಣು, ತರಕಾರಿಗಳ ಸೇವನೆ ಮಾಡುವುದನ್ನ ರೂಢಿ ಮಾಡಿಕೊಂಡರೆ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ.

%d bloggers like this: