ನಿಮಗೆ ತಿಳಿದಿರಲಿ ನೀವು ಮಲಗುವ ದಿಕ್ಕು ನಿಮ್ಮ ಬದುಕಿನ ದಿಕ್ಕನ್ನು ಬದಲಾಯಿಸುವಂತದ್ದು ನೀವೇನಾದರು ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ ತಲೆಹಾಕಿ ಮಲಗುತ್ತಿದ್ದರೆ ನಿಮಗೆ ಅನಾರೋಗ್ಯ, ಆರ್ಥಿಕ ಸಮಸ್ಯೆ ಕಾಡುತ್ತದೆ. ಇಂತಹ ಸಮಸ್ಯೆಗಳು ನಿಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ನಿಮ್ಮನ್ನು ಹೈರಾಣಾಗಿಸುತ್ತವೆ. ನಮ್ಮ ಹದಿನೆಂಟು ಹಿಂದು ಪುರಾಣದ ಪ್ರಕಾರ ಅಂದರೆ ಮತ್ಸ್ಯಪುರಾಣ, ವಾಮನ ಪುರಾಣ, ವಾಯು ಪುರಾಣ, ಭಾಗವತ ಪುರಾಣ, ವಿಷ್ಣು ಪುರಾಣ ಹೀಗೆ ಈ ಹದಿನೆಂಟು ಪುರಾಣಗಳಲ್ಲಿ ವ್ಯಾಸರು ನೀವು ಮಲಗುವ ಪರಿಯು ನಿಮ್ಮ ಆರೋಗ್ಯ ಜೀವನ, ಆರ್ಥಿಕ ಜೀವನವನ್ನು ಹೇಗೆ ತಿಳಿಯಬಹುದು ಎಂಬುದನ್ನು ವಿವಿಧ ಸಂಕೇತವಾಗಿ ವ್ಯಾಖ್ಯಾನಿಸಿದ್ದಾರೆ.

ಹೌದು ವ್ಯಾಸರು ರಚಿಸಿರುವ ಮಾರ್ಕಂಡೇಯ ಪುರಾಣದಲ್ಲಿ ಮಾದಲಸ ಚರಿತ್ರೆಯಲ್ಲಿ ಈ ವಿಚಾರವಾಗಿ ತಿಳಿಸಿದ್ದಾರೆ. ಈ ಚರಿತ್ರೆಯಲ್ಲಿ ದತ್ತಾತ್ರೇಯ ಮಗನಾಗಿ ಬರುವ ಮಾದಲಸನಿಗೆ ಯಾವ ರೀತಿ ಮಲಗುವುದರಿಂದ ಯಾವರೀತಿ ಪಲಾಫಲಗಳಿವೆ ಎಂಬುದನ್ನು ಸವಿಸ್ತಾರವಾಗಿ ಚಿತ್ರಿಸಿ ತಿಳಿಸಿದ್ದಾರೆ. ನೀವು ಮಲಗುವ ರೀತಿ ನೀತಿ ನಿಮ್ಮ ಸಂಪತ್ತುವೃದ್ದಿ ಯನ್ನು ನಿರ್ಧರಿಸುತ್ತದೆ ಎಂದು ವಿವರಿಸಿದ್ದಾರೆ. ನೀವು ಪಶ್ಚಿಮ ಮತ್ತು ಉತ್ತರದಿಕ್ಕಿನಲ್ಲಿ ಮಲಗುತ್ತಿದ್ದರೆ ನಿಮಗದು ಅವಲಕ್ಷಣ ಬುದ್ದಿಯಾಗಿರುತ್ತದೆ. ಉತ್ತರ ದಿಕ್ಕು ಮತ್ತು ಪಶ್ಚಿಮ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ನಿಮ್ಮ ಮೇಧಾಶಕ್ತಿ ಕುಂದುತ್ತದೆ.

ಅಂದರೆ ಯಾವುದೇ ವಸ್ತುವನ್ನು ಇಟ್ಟಿದ ಜಾಗದಲ್ಲೇ ಮರೆತು ಕೊಟ್ಟ ವಸ್ತುವನ್ನು ಅಲ್ಲೇ ಮರೆತು ಹೋಗುವಂತಹ ಮರೆಗುಳಿ ಲಕ್ಷಣ ನಿಮ್ಮನ್ನು ಆವರಿಸುತ್ತದೆ. ಜೊತೆಗೆ ಅನಾರೋಗ್ಯ ಸಮಸ್ಯೆ ಕಾಡುವಂತದ್ದು ಸಾಲದ ಭಾಧೆಗೆ ಸಿಲುಕುವಂತಹ ಸಂಭವ ಹೆಚ್ಚು ಇರುತ್ತದೆ ಎಂದು ಮದಲಾಸ ಚರಿತ್ರೆಯಲ್ಲಿ ವ್ಯಾಸರು ಸವಿಸ್ತಾರವಾಗಿ ತಿಳಿಸಿದ್ದಾರೆ. ಹಾಗಾದರೆ ನೀವು ಯಾವ ದಿಕ್ಕಿನಲ್ಲಿ ತಲೆಹಾಕಿ ಮಲಗಬೇಕು ಎಂಬ ಪ್ರಶ್ನೆಗೂ ಉತ್ತರ ನೀಡಿದ್ದಾರೆ. ನೀವು ಆದಷ್ಟು ದಕ್ಷಿಣ ಭಾಗ ಅಥವಾ ಪೂರ್ವದ ದಿಕ್ಕಿನ ಕಡೆಗೆ ತಲೆ ಹಾಕಿ ಮಲಗುವುದಿರಿಂದ ಸದ್ಗುಣಗಳು ನಿಮ್ಮ ವ್ಯಕ್ತಿತ್ವ ರೂಪಿಸುತ್ತವೆ.

ಹೆಚ್ಚು ಬುದ್ದಿವಂತರಾಗಿ ಜ್ಞಾಪಕಶಕ್ತಿಯು ಕೂಡ ಹೆಚ್ಚಾಗುತ್ತದೆ. ಈ ರೀತಿ ನೀವು ಪೂರ್ವದಿಕ್ಕಿನಲ್ಲಿ ತಲೆಹಾಕಿ ಮಲಗುವುದಿರಿಂದ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ ಎಂದು ವ್ಯಾಸರು ತಮ್ಮ ಮಾರ್ಕಂಡೇಯ ಪುರಾಣದ ಮದಲಾಸ ಚರಿತ್ರೆಯಲ್ಲಿ ಉತ್ತರದಿಕ್ಕು ಮತ್ತು ಪಶ್ಚಿಮದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರ ಒಳಿತು ಕೆಡುಕುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ. ಈ ಹವ್ಯಾಸವನ್ನು ರೂಢಿಸಿಕೊಂಡರೆ ನಿಮಗೆ ಜೀವನದಲ್ಲಿ ಎಲ್ಲಾ ರೀತಿಯಾಗಿ ಆರ್ಥಿಕವಾಗಿ ಮತ್ತು ಆರೋಗ್ಯಭಾಗ್ಯ ಲಭಿಸುತ್ತದೆ ಇದನ್ನು ನೀವು ಎಲ್ಲೆಹೋದರೂ ಪಾಲಿಸಬೇಕಾಗಿರುತ್ತದೆ.