ನಿಮ್ಮ ಬೆರಳುಗಳ ಗಾತ್ರಗಳು ನಿಮ್ಮ ಭವಿಷ್ಯವನ್ನು ಹೇಳುತ್ತವೆ

ಸಾಮಾನ್ಯವಾಗಿ ಭವಿಷ್ಯ ನೋಡುವವರು ನಿಮ್ಮ ಮುಖ ನೋಡಿಯೋ, ಹಸ್ತ ನೋಡಿಯೋ ನಿಮ್ಮ ಭವಿಷ್ಯ ನುಡಿಯುತ್ತಾರೆ. ಆದರೆ ನಿಮ್ಮ ಕೈಬೆರಳುಗಳನ್ನು ನೋಡಿ ನಿಮ್ಮ ವ್ಯಕ್ತಿತ್ವ ಹೀಗಿರುತ್ತದೆ ಎಂದು ಹೇಳುವುದು ಕೂಡ ಉಂಟು. ನಿಮ್ಮ ಬೆರಳುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ. ಒಂದು ಉದ್ದವಾಗಿದ್ದರೆ ಮತ್ತೊಂದು ಗಿಡ್ಡವಾಗಿರುತ್ತದೆ, ಮತ್ತೆರಡು ಸಮಾನಾಗಿಯೂ ಇರಬಹುದು. ಈ ತೋರುಬೆರಳು ಮತ್ತು ಉಂಗುರ ಬೆರಳು ಎರಡು ಸಮನಾಗಿರುವ ವ್ಯಕ್ತಿಗಳು ಯಾವುದೇ ಸಮಸ್ಯೆಗೆ ಸಿಲುಕುವವರಲ್ಲ ಸದಾ ಹಸನ್ಮುಖಿಯಾಗಿ ಸಂತೋಷದಿಂದ ಜೀವನ ನಡೆಸುವ ವ್ಯಕ್ತಿಗಳು, ಇವರು ಯಾರ ವಿಷಯಗಳಿಗೂ ತಲೆ ಹಾಕುವುದಿಲ್ಲ ತಾವಾಯಿತು ತಮ್ಮ ಕೆಲಸವಾಯಿತು ಎಂದು ಜೀವಿಸುವವರು.

ಆದರೆ ಇವರ ತಂಟೆಗೆ ಹೋದವರಿಗೆ ಮಾತ್ರ ನೀರಿಳಿಸುವುದು ಖಂಡಿತಾ ಇನ್ನು ಇವರ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ತಮ್ಮ ಸಂಗಾತಿಯನ್ನು ಯಾವುದೇ ಕುಂದುಕೊರತೆಯಿಲ್ಲದ ರೀತಿಯಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಕುಟುಂಬವನ್ನು ಸರಿದೂಗಿಸುವಲ್ಲಿಯೂ ಇವರು ಯಶಸ್ವಿಯಾಗಿರುತ್ತಾರೆ. ಆದರೆ ಈ ಉಂಗುರ ಬೆರಳಿಗಿಂತ ತೋರುಬೆರಳು ಉದ್ದ ವಿರುವ ವ್ಯಕ್ತಿಗಳ ಸ್ವಭಾವವೇ ಬೇರೆ ಇವರು ನೋಡಲು ಹೆಚ್ಚು ಆಕರ್ಷಿತರಾಗಿರುತ್ತಾರೆ, ಇತರರನ್ನು ಹೆಚ್ಚು ಸಂತೋಷದಿಂದ ಇರಲು ಇಷ್ಟಪಡುತ್ತಾರೆ ಆದ್ದರಾಂದಲೇ ಅವರು ಎಲ್ಲರ ಜೊತೆ ಇರುವಾಗಿ ಹಾಸ್ಯಪ್ರಜ್ಞೆ ಮೆರೆಯುತ್ತಾರೆ.

ಇವರಿಗೆ ದುಡುಕಿನ ಸ್ವಭಾವವಿದ್ದರೂ ಅವರಿಗೆ ತಮ್ಮ ಮೇಲೆ ಅಪಾರ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಈ ಅಪಾರ ಆತ್ಮವಿಶ್ವಾಸವೇ ಇವರಿಗೆ ಅಹಂಕಾರಯಿದೆ ಎಂಬಂತೆ ಇತತರರಿಗೆ ಕಾಣಿಸುತ್ತದೆ. ಜೊತೆಗೆ ಇವರು ಅನ್ಯರಿಗೆ ಸಹಾಯ ಮಾಡುವ ಉದಾತ್ತ ಗುಣ ಹೊಂದಿರುತ್ತಾರೆ, ಕೆಲವೊಮ್ಮೆ ಸದಾ ಒಂಟಿಯಾಗಿರಲು ಇಚ್ಚಿಸುತ್ತಾರೆ ಇವರು ಆಧ್ಯಾತ್ಮಿಕತೆಗೆ ಹೊರಳುವುದೂ ಉಂಟು ಇನ್ನು ತೋರುಬೆರಳು ಉದ್ದವಿರುವವರು ಇಂಜಿನಿಯರ್ ಕ್ಷೇತ್ರದಲ್ಲಿ ಹೆಚ್ಚು ಸಫಲರಾಗುತ್ತಾರೆ ಎಂದು ನಿಪುಣರು ತಿಳಿಸುತ್ತಾರೆ. ಹೀಗೆ ಮುಖದ ಹಾವಭಾವ, ಹಸ್ತ ರೇಖೆ ನೋಡುವುದರ ಮೂಲಕ ಭವಿಷ್ಯ ಹೇಳುವುದರ ಜೊತೆಗೆ ಕೈ ಬೆರಳುಗಳಿಂದಲೂ ಸಹ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ.

%d bloggers like this: