ಜಾಕತ ಭವಿಷ್ಯ ಎಂಬುದು ಮುಖಲಕ್ಷಣ ನೋಡಿ,ಜಾತಕ ನೋಡಿ ಭವಿಷ್ಯ ಹೇಳುವ ವಿಧಾನ ಒಂದಾದರೆ ನಿಮ್ಮ ಹಸ್ತ ರೇಖೆಗಳನ್ನು ಪರಾಮರ್ಶಿಸಿ ಭವಿಷ್ಯ ನುಡಿಯುವುದು ಮತ್ತೊಂದು ವಿಧಾನವಾಗಿದೆ. ನಿಮ್ಮ ಹಸ್ತರೇಖೆಯಲ್ಲಿರುವ ಗೆರೆಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಅದರಲ್ಲು ಈ ಧನ ರೇಖೆಯು ನಿಮ್ಮ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತಿಳಿಸುವಂತಾಗಿದೆ, ಹಸ್ತ ಸಾಮುದ್ರಿಕ ಶಾಸ್ತ್ರದ ಬಗ್ಗೆ ಈಗಾಗಲೇ ಹಲವಾರು ಸಂಶೋಧನೆಗಳು ನಡೆದಿವೆ. ಹಸ್ತದಲ್ಲಿ ಮೂಡಿರುವ ರೇಖೆಗಳ ಹಿಂದೆ ಹಲವು ವಿಶೇಷತೆಗಳು ಕಂಡು ಬರುತ್ತವೆ. ಒಬ್ಬ ವ್ಯಕ್ತಿಯ ಹಸ್ತದ ರೇಖೆಯ ರೀತಿ ಮತ್ತೊಬ್ಬರ ಹಸ್ತದಲ್ಲಿ ಇರುವುದಿಲ್ಲ.

ಹಸ್ತ ರೇಖೆಗಳಲ್ಲಿ ಪ್ರಮುಖವಾಗಿ ಧನ ರೇಖೆಯು ಸದಾ ರವಿಪರ್ವದ ಕಡೆ ತಿರುಗಿರುತ್ತದೆ. ಇನ್ನೊಂದು ಶನಿಪರ್ವ ಶನಿಯು ಕರ್ಮಕಾರಕ ವಾಗಿದ್ದು ಈ ಧನರೇಖೆಯು ಹಸ್ತದ ಮಧ್ಯಭಾಗದಲ್ಲಿ ಹಾದು ಹೋಗಿರುತ್ತದೆ, ಹಸ್ತದ ಕೆಳಭಾಗದಿಂದ ಬೆರಳಿನ ಅಡಿಯನ್ನು ಸ್ಪರ್ಶಿಸುತ್ತವೆ. ಧನರೇಖೆಯು ತುಂಬಾ ಮುಖ್ಯವಾಗಿದ್ದು ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಅವರು ಎಷ್ಟು ಸಂಪಾದನೆ ಮಾಡಬಲ್ಲರು ಆರ್ಥಿಕ ಮೂಲಗಳು ಯಾವ ರೀತಿಯದ್ದಾಗಿರುತ್ತದೆ, ಯಾವ ದಾರಿಯಲ್ಲಿ ಸಂಪಾದನೆ ಮಾಡುತ್ತಾನೆ ಎಂಬ ಅವರ ಆರ್ಥಿಕ ಪ್ರಗತಿಯ ಬಗ್ಗೆ ಈ ಹಸ್ತ ಮುದ್ರಿಕೆಯಲ್ಲಿ ರೇಖೆಯ ಮೂಲಕ ತಿಳಿಯ ಬಹುದಾಗಿದೆ.

ನಿಮ್ಮ ಅಂಗೈಯು ನಿಮ್ಮ ವ್ಯಕ್ತಿತ್ವವನ್ನು ಕೂಡ ತಿಳಿಸುತ್ತದೆ. ಯಾವ ವ್ಯಕ್ತಿಗೆ ಧನರೇಖೆಯು ನೀಳವಾಗಿ ಉದ್ದವಾಗಿರುತ್ತದೆಯೋ ಅವನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅದರ ಜೊತೆಗೆ ಮಧ್ಯದಲ್ಲಿ ಅಡ್ಡಲಾಗಿ ಹಾದು ಹೋಗಿರುವ ರೇಖೆಯ ಮೇಲ್ಭಾಗದಲ್ಲಿ ನೇರವಾಗಿ ಹಾದುಹೋಗುವ ಧನರೇಖೆಯನ್ನು ಊರ್ದ್ವಾ ರೇಖೆ ಎನ್ನುವರು ಇದೇ ಪ್ರಮುಖವಾದದ್ದು ಧನರೇಖೆಯ ಮಹತ್ವದ ರೇಖೆಯಾಗಿದೆ. ಧನ ರೇಖೆಯ ಅಕ್ಕ ಪಕ್ಕದಲ್ಲಿ ರೇಖೆಗಳು ಹೆಚ್ಚು ಅಡ್ಡ ಬಂದಿದ್ದರೆ ಅಂತಹವರಿಗೆ ಧನ ಹಾನಿ ಉಂಟಾಗುತ್ತದೆ ಎಂದು ಅರ್ಥವಾಗಿದೆ.

ಉರ್ದ್ವಾ ರೇಖೆಗೆ ಬಲಭಾಗದಲ್ಲಿ ರೇಖೆಯು ಕವಲೊಡೆದರೆ ಅವರಿಗೆ ಹಣದ ಜೊತೆಗೆ ಹೆಸರು ಕೀರ್ತಿ ಪ್ರಾಪ್ತಿಯಾಗುತ್ತದೆ ಎಂದು ಹೇಳಬಹುದಾಗಿದೆ. ಇನ್ನು ಧನ ರೇಖೆಗಳು ಗುರುಪರ್ವದ ಕಡೆ ತಿರುಗಿದರೆ ಅವರು ಸರಿಯಾದ ಮಾರ್ಗದಲ್ಲಿ ಅಂದರೆ ನ್ಯಾಯಯುತ ಮಾರ್ಗದಲ್ಲಿ ಮಾತ್ರ ಸಝಪಾಧನೆ ಮಾಡುತ್ತಾರೆ ಎನ್ನಬಹುದಾಗಿದೆ. ಧನ ರೇಖೆಯ ಮೇಲ್ಭಾಗದಲ್ಲಿ ತ್ರಿಭುಜ ಆಕಾರ ಹೊಂದಿದ್ದರೆ ಅಂತಹ ವ್ಯಕ್ತಿಗಳು ಗೃಹ ನಿರ್ಮಾಣ ಮಾಡುವ ಯೋಗ ಹೊಂದಿರುತ್ತಾರೆ. ಸಮನಾಂತರ ಬಾಕ್ಸ್ ರೀತಿ ಚಿಹ್ನೆ ಹೊಂದಿದ್ದರೆ ಅವರಿಗೆ ಅದೃಷ್ಟ ಅವರ ಜೊತೆಗಿದೆ ಎಂದು ತಿಳಿಯಬಹುದು ಮತ್ತು ಅವರು ಎಂತಹ ಕೆಟ್ಟ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಧೈರ್ಯದಿಂದ ಸಮಸ್ಯೆ ಸವಾಲುಗಳ ವಿರುದ್ದ ಹೋರಾಡುತ್ತಾರೆ ಗೆಲ್ಲುತ್ತಾರೆ ಎಂದು ಈ ಹಸ್ತ ಮುದ್ರಿಕೆಯಲ್ಲಿ ತಿಳಿಸುತ್ತಾರೆ.