ನಿಮ್ಮ ಜೀವನ ವೃದ್ಧಿಯಾಗಲು ಕಾಮಾಕ್ಷಿ ದೀಪವನ್ನು ಹೀಗೆ ಬೆಳಗಿ, ಅಖಂಡ ಐಶ್ವರ್ಯ, ಯಶಸ್ಸು ಸಿಗುವುದು

ನಮ್ಮ ಹಿಂದೂ ಪುರಾಣದ ಪ್ರಕಾರ ಕಂಚಿ ಕಾಮಾಕ್ಷಿ ದೇವಿಯು ಮುಕ್ಕೋಟಿ ದೇವರುಗಳ ಶಕ್ತಿ ಪ್ರಧಾನತೆ ಎಂದು ಹೇಳಲಾಗುತ್ತದೆ, ಇನ್ನು ಈ ಕಂಚಿ ಕಾಮಾಕ್ಷಿ ದೇವಾಲಯ ಇತರ ದೇವಸ್ಥಾನಗಳಿಗಿಂತ ಭಿನ್ನವಾಗಿರುತ್ತದೆ. ಹೇಗೆ ಭಿನ್ನ ಅಂತ ನೋಡುವುದಾದರೆ ಸೂರ್ಯೋದಯದ ನಂತರ ಹಲವು ದೇವಾಲಯಗಳು ತೆರೆದು ಇಳಿಸಂಜೆಯ ನಂತರ ದೆವಾಲಯಗಳು ಮುಚ್ಚುತ್ತವೆ. ಆದರೆ ಈ ಕಂಚಿ ಕಾಮಾಕ್ಷಿ ದೇವಾಲಯವು ಸೂರ್ಯೋದಯಕ್ಕೂ ಮುಂಚೆ ಬಾಗಿಲು ತೆರೆದು ಪೂಜಾ ಕೈಂಕರ್ಯಗಳನ್ನು ನಡೆಸುತ್ತವೆ. ಇನ್ನು ಸಂಜೆಯ ಸಮಯದ ನಂತರ ಎಲ್ಲಾ ದೇವಾಲಯಗಳು ಮುಚ್ಚಿದ ನಂತರವೇ ಈ ಕಂಚಿ ಕಾಮಾಕ್ಷಿ ದೇವಾಲಯದ ಬಾಗಿಲು ಮುಚ್ಚುವಂತದ್ದು.

ಇನ್ನು ಕಾಮಾಕ್ಷಿಯ ದೇವಿಯ ಕೃಪೆಗೆ ಪಾತ್ರರಾಗಲು ಅಖಂಡ ಸೌಭಾಗ್ಯ, ಅನಂತ ಐಶ್ವರ್ಯ ವೃದ್ದಿಯಾಗಲು ಗಜಲಕ್ಷ್ಮಿ ದೀಪವನ್ನು ಬೆಳಗಬೇಕು. ಕಂಚಿ ಕಾಮಾಕ್ಷಿದೇವಿಯ ಬಿಂಬ ಈ ದೀಪದ ಮೇಲೆ ಬೀಳುವಂತದ್ದು. ಈ ಗಜಲಕ್ಷ್ಮಿ ದೀಪವು ನಂಬಿಕೆ, ವಿಶ್ವಾಸವನ್ನು ಸೂಚಿಸುತ್ತದೆ. ಕಾಮಾಕ್ಷಿ ದೇವಿಯನ್ನು ಆರಾಧಿಸುತ್ತಾ ವ್ರತ, ನಿಯಮ ಆಚರಿಸುವುದರಿಂದ ನಿಮ್ಮ ಎಲ್ಲಾ ಮನೋಭಿಲಾಷೆಗಳು ಶೀಘ್ರವಾಗಿ ನೆರೆವೇರುತ್ತವೆ‌. ಗಜಲಕ್ಷ್ಮಿ ದೀಪವನ್ನು ಬೆಳಗುವುದರ ರೀತಿ ಹೀಗಿರಬೇಕು. ಎರಡು ಎಳೆಯ ಬತ್ತಿಯನ್ನ ಎಣೆದು ತುಪ್ಪ ಅಥವಾ ಎಳ್ಳೆಣ್ಣೆಯನ್ನು ಬಳಸುವಂತದ್ದು ಅದಕ್ಕೂ ಮುನ್ನ ಅದನ್ನು ಅರಿಶಿನ, ಕುಂಕುಮ ಹೂವಿನೊಂದಿಗೆ ಅಲಂಕರಿಸಬೇಕು.

ದೀಪವನ್ನು ದಕ್ಷಿಣಮುಖವಾಗಿ ತೋರಬಾರದು ದೀಪವು ಸದಾ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ದೀಪವನ್ನು ಇಟ್ಟು ಪೂಜಿಸಬೇಕು. ಆ ದೀಪವನ್ನು ನೆಲದ ಮೇಲೆ ಇಟ್ಟು ಬೆಳಗಬಾರದು ಯಾವುದಾದರೊಂದು ತಟ್ಟೆ ಅಥವಾ ಮಣೆಯ ಮೇಲಿಟ್ಟು ದೀಪ ಬೆಳಗಬೇಕು. ಇದರಿಂದ ಗಜಲಕ್ಷ್ಮಿ ದೀಪ ಹೇಗೆ ಪ್ರಶಾಂತವಾಗಿ ಬೆಳಗುವುದೋ ಅದೇ ರೀತಿ ಮನೆಯು ಕೂಡ ನಕರಾತ್ಮಕತೆಯಿಂದ ದೂರವಾಗಿ ಸದಾ ಸಕರಾತ್ಮಕ ವಾತಾವರಣ ನಿರ್ಮಾಣ ಏರ್ಪಡುತ್ತದೆ. ಇನ್ನು ಈ ದೀಪವನ್ನು ಮಂಗಳವಾರ ಮತ್ತು ಶುಕ್ರವಾರ ಶುಭ್ರಗೊಳಿಸಬೇಕೆಂದು ತೆಗೆಯಬಾರದು. ಯಾವಗಲೂ ಪೂಜೆಯು ಸೂರ್ಯೋದಯ ಸಮಯ ಹಾಗೂ ಇಳಿ ಸಂಜೆಯ ಸಮಯದಲ್ಲಿ ನಡೆಯಬೇಕು ಎಂದು ಹಿರಿಯರು ಸುಚಿಸುತ್ತಾರೆ.

%d bloggers like this: