ನಿಮಗೆ ಲಕ್ಷ್ಮಿಯ ಕೃಪಾಕಟಾಕ್ಷ ಇರುವುದು ಗೊತ್ತಾಗುವುದಕ್ಕೆ ಒಂದಷ್ಟು ಸೂಚನೆಗಳು, ಕನಸುಗಳು ನಿಮ್ಮನ್ನು ಜಾಗೃತಗೊಳಿಸುತ್ತವೆ. ಹೌದು ಲಕ್ಷ್ಮಿಯು ನಿಮಗೆ ಒಲಿಯುವ ಮುನ್ನ ಒಂದಷ್ಟು ಸೂಚನೆ ಸಂಕೇತಗಳನ್ನು ನಿಮಗೆ ನೀಡುತ್ತಾಳೆ ಆದರೆ ಇದು ನಿಮ್ಮ ಗಮನಕ್ಕೆ ಬಂದಿರುವುದಿಲ್ಲ. ಇನ್ನು ಶ್ರೀ ಲಕ್ಷ್ಮಿಯು ಚಂಚಲೆ ಒಂದೇ ಕಡೆ ಸ್ಥಿರವಾಗಿ ನೆಲೆಸಿರುವುದಿಲ್ಲ ಯಾರು ತನ್ನನ್ನು ಶ್ರದ್ದಾಭಕ್ತಿಯಿಂದ ಕೈ ಬಾಯಿ ಶುದ್ದತೆ ಅಂದರೆ ಅವಾಚ್ಯ ಶಬ್ದ ಬಳಕೆ ಮಾಡದೇ, ಕೆಟ್ಟ ಪಾಪ ಕರ್ಮಗಳಲ್ಲಿ ತೊಡಗದೇ ಶುದ್ದವಾದ ಮಾತಿನ ವ್ಯಕ್ತಿತ್ವ ರೂಢಿಸಿಕೊಂಡಿರುತ್ತಾರೋ ಅಂತಹವರ ಮನೆಯಲ್ಲಿ ಮಾತ್ರ ಲಕ್ಷ್ಮಿಯು ಶಾಶ್ವತವಾಗಿ ನೆಲೆಸುತ್ತಾಳೆ.

ಲಕ್ಷ್ಮಿಯ ಕೃಪೆ ನಿಮಗಿರುವುದಕ್ಕೆ ನಿಮಗೊಂದಷ್ಟು ವಿವಿಧ ರೂಪದಲ್ಲಿ ಸೂಚನೆಗಳನ್ನು ನೀಡುತ್ತಾಳೆ. ಹೌದು ನಿಮಗೇನಾದರು ಗೂಬೆ ಕಾಣಿಸಿಕೊಂಡರೆ ಅದು ಮನೆಯ ಹೊರಗಡೆ ಮಾತ್ರ ಕಂಡರೆ ಅದು ನಿಮಗೆ ಶುಭಕರ ಅಂತಾನೇ ಅರ್ಥ. ಗೂಬೆಯು ಲಕ್ಷ್ಮಿಯ ವಾಹನ ಅದನ್ನು ನೀವು ಮನೆಯ ಒಳಗೆ ಕಂಡರೆ ಅದು ಅಪಶಕುನ ಆದಲೆ ಹೊರಗೆ ಕಂಡರೆ ಅದು ನಿಮಗೆ ಲಕ್ಷ್ಮಿಯ ಕೃಪೆಯ ಸೂಚನೆಯನ್ನು ನೀಡುವಂತದ್ದು ಎನ್ನಲಾಗುತ್ತದೆ. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ ಧನಲಾಭ ಆಗುವ ದಿನಗಳು ನಿಮ್ಮದಾಗುತ್ತವೆ. ಇನ್ನು ನಿಮ್ಮ ಕನಸಿನಲ್ಲಿ ಹಸಿರು ಮರಗಿಡ, ತೋಟಗಳು ಕಾಣಿಸಿಕೊಂಡರೆ ನಿಮಗೆ ಅದು ಮುಂದಿನ ದಿನಗಳಲ್ಲಿ ಧನಾಗಮನ ಆಗುವ ಶುಭಸೂಚನೆಯಾಗಿದೆ.

ಇನ್ನು ನೀವು ಯಾವುದಾದರೂ ಶುಭಕಾರ್ಯಕ್ಕೆ ಅಥವಾ ಮನೆಯಿಂದ ಹೊರ ಹೋಗಬೇಕಾದಾಗ ನಿಮ್ಮ ಎದುರಿಗೆ ಕಸ ಗೂಡಿಸುವ ದೃಶ್ಯ, ಪೊರಕೆಯ ಹಿಡಿ ನಿಮ್ಮೆದುರಿಗೆ ಕಂಡರೆ ಅದೂ ಸಹ ಶುಭಕರವಾಗಿದೆ. ಪೊರಕೆಯು ಸಾಕ್ಷಾತ್ ಲಕ್ಷ್ಮಿಯ ಸ್ವರೂಪ ಆದ್ದರಿಂದಲೇ ಅದನ್ನು ನಾವು ಕಾಲಿನಿಂದ ಸ್ಪರ್ಶಿಸಿದ ಕೂಡಲೇ ನಮಸ್ಕರಿಸುತ್ತೇವೆ. ಇನ್ನು ಲಕ್ಷ್ಮಿಯ ಕಟಾಕ್ಷದ ಸೂಚನೆ ಎಂಬಂತೆ ಬೆಳಿಗ್ಗೆ ಎದ್ದು ಯಾವುದಾದರೂ ಸಂದರ್ಭದಲ್ಲಿ ಕಬ್ಬು ಕಾಣಿಸಿಕೊಂಡರೆ ಇದೂ ಕೂಡ ಶುಭಸೂಚನೆ ಮತ್ತು ಬೆಳಿಗ್ಗೆಯ ಸಮಯದಲ್ಲಿ ನೀವು ಏಳುವ ಸಮಯದಲ್ಲಿ ಯಾರಾದರು ಶಂಖ ಊದುವ ಶಬ್ದ ಕೇಳಿಸಿಕೊಂಡರೆ ಅವರಿಗೆ ಆ ದಿನವೆಲ್ಲಾ ಶುಭಕರ ವಿಚಾರಗಳು ಮತ್ತು ಬರುವ ದಿನಗಳಲ್ಲಿ ಧನಾಗಮನ ನಿರಿಕ್ಷೆ ಮೀರಿ ಬರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.