ನಿಮ್ಮ ಕೈಯಲ್ಲಿ ಈ ಒಂದು ಚಿತ್ರವಿದ್ದರೆ ನಿಮ್ಮ ಯಶಸ್ಸು ಯಾರು ಊಹಿಸಲಾಗದು

ಹಸ್ತ ಮುದ್ರಿಕೆಗಳ ವ್ಯಕ್ತಿಯ ಜೀವನದಲ್ಲಿ ಆಗುವ ಏರುಪೇರುಗಳ ಜೊತೆಗೆ ಅವರ ಪ್ರಗತಿಯ ಭವಿಷ್ಯವನ್ನು ಕೂಡ ಹೇಳಬಲ್ಲದು, ಹಸ್ತಗಳಲ್ಲಿ ಇರುವ ರೇಖೆಗಳು ಹಲವಾರು ವಿಚಾರಗಳ ವಿಶೇಷವಾದ ಮಾಹಿತಿಯನ್ನು ನೀಡುತ್ತವೆ. ಅದು ವಿಧ್ಯೆ ಉದ್ಯೋಗ ಹಣಕಾಸು ವೃತ್ತಿ ಕುಟುಂಬ ಮತ್ತು ಆರೋಗ್ಯ ಹೀಗೆ ಹಲವಾರು ವಿಷಯಗಳ ಬಗ್ಗೆ ವಿವಿಧ ರೀತಿಯ ದೃಷ್ಠಿಕೋನದಲ್ಲಿ ಮಹತ್ವ ಪಡೆದುಕೊಂಡಿವೆ. ಹಸ್ತದಲ್ಲಿರುವ ಒಂದೊಂದು ರೇಖೆಗಳು ಸಹ ಒಂದೊಂದು ಗ್ರಹಗತಿಗಳ ಬಗ್ಗೆ ಸೂಚನೆ ನೀಡುತ್ತದೆ.ಕೆಲವರ ಹಸ್ತದಲ್ಲಿ ರೇಖೆಗಳು ಚಿತ್ರದ ರೂಪ ಪಡೆದರೆ ಇನ್ನು ಕೆಲವರಲ್ಲಿ ಅಕ್ಷರ ರೂಪ ಪಡೆದಿರುತ್ತವೆ.

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸಹ ಅವರ ಹಸ್ತದಲ್ಲಿರುವ ರೇಖೆಗಳು ಇಂಗ್ಲೀಷ್ ಅಕ್ಷರ ಹೋಲುವ ರೂಪದಲ್ಲಿರುತ್ತದೆ.ಅವುಗಳಲ್ಲಿ ವಿಶೇಷವಾಗಿ ಕಾಣುವ ಈ ರೇಖೆ ಚಿಹ್ನೆಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸಬಹುದಾಗಿದೆ. ಇಂಗ್ಲೀಷ್ ಅಕ್ಷರದ ಎಚ್ H ರೂಪದಲ್ಲಿ ರೇಖೆಗಳು ಮೂಡಿದ್ದರೆ ಇಂತಹ ವ್ಯಕ್ತಿಗಳು ಇವರ ಜೀವನದಲ್ಲಿ ನಲವತ್ತು ವರ್ಷದ ನಂತರ ಯಶಸ್ಸನ್ನು ಕಾಣುತ್ತಾರೆ. ಇವರಿಗೆ ಜೀವನಪೂರ್ತಿ ಅಂದರೆ ನಲವತ್ತು ಸಂವತ್ಸರ ತುಂಬುವವರೆಗೂ ಸಂಕಷ್ಠ ಶ್ರಮದ ಸಮಯ ವಾಗಿರುತ್ತದೆ. ಇಂತಹ ವ್ಯಕ್ತಿಗಳು ಕಷ್ಟ ಪಟ್ಟು ದುಡಿಯುವಂತಹ ಶ್ರಮಜೀವಿ ಗಳಾಗಿರುತ್ತಾರೆ.

ಆದರೆ ಇವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು ನಲವತ್ತು ವರ್ಷಗಳ ನಂತರವೇ, ಆದ್ದರಿಂದ ಇವರು ನಿಧಾನವೇ ಪ್ರಧಾನ ಎಂಬಂತೆ ತಮ್ಮ ಕೆಲಸ ಕಾರ್ಯದಲ್ಲಿ ನಿರಂತರ ಪ್ರಯತ್ನ ಪಡುತ್ತಿದ್ದರೆ ನಲವತ್ತು ವರ್ಷಗಳ ನಂತರ ಒಮ್ಮೆಲೆ ಅಷ್ಟೂ ಯಶಸ್ಸು ಕೀರ್ತಿ ಆರ್ಥಿಕ ಬೆಳವಣಿಗೆಯಲ್ಲಿ ನಿರೀಕ್ಷೆಗೂ ಮೀರಿ ಬೆಳೆಯುತ್ತಾರೆ. ಇಂತಹ ವ್ಯಕ್ತಿಗಳು ಹೆಚ್ಚು ಉದಾರ ಮನೋಭಾವ ಹೊಂದಿದ್ದು,ಭಾವನಾತ್ಮಕ ಜೀವಿಯಾಗಿರುತ್ತಾರೆ.ತನ್ನ ಬಂಧು ಮಿತ್ರರಿಗೆ ಸದಾ ಸಹಾಯ ಮಾಡಲು ಸಿದ್ದರಿರುತ್ತಾರೆ.ಆದ್ದರಿಂದಲೇ ಇವರು ಅನೇಕ ಸಮಸ್ಯೆಗಳನ್ನು ತಮ್ಮ ಮೈ ಮೇಲೆ ಎಳೆದುಕೊಂಡು ತೊಂದರೆ ಅನುಭವಿಸುತ್ತಾರೆ.

ಇನ್ನು ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಹ ಕಠಿಣ ಪರಿಶ್ರಮ ಪಟ್ಟು ಸಮಾಜದಲ್ಲಿ ಉನ್ನತವಾದ ಸ್ಥಾನ ಮಾನ ಗೌರವವನ್ನು ಸಂಪಾದಿಸುತ್ತಾರೆ. ಇವರು ಅತ್ಯಂತ ಸೂಕ್ಷ್ಮ ಮನಸ್ಸಿನವರಾಗಿದ್ದು ಬುದ್ದಿವಂತಿಕೆಯಿಂದ ವ್ಯವಹರಿಸುತ್ತಾರೆ, ಇವರು ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಎಚ್ಚರಿಕೆ ವಹಿಸಿದರು ನಂಬಿಕೆಯಿಂದ ಎಡುವುದು ಸಹ ಇವರ ನ್ಯುನತೆಯಾಗಿದೆ. ಒಟ್ಟಾರೆಯಾಗಿ ಈ ಎಚ್ ಅಕ್ಷರ ರೇಖೆಯಿರುವ ವ್ಯಕ್ತಿಗಳು ನಲವತ್ತು ವರ್ಷಗಳು ಕಳೆಯುವವರೆಗೂ ಕೆಲಸ ಕಾರ್ಯದಲ್ಲಿ ತೊಡಗಿಕೊಂಡು ಸಮಚಿತ್ತವಾಗಿ ತಾಳ್ಮೆಯಿಂದ ನಕರಾತ್ಮಕತೆಗೆ ಒಳಗಾಗದೆ ಇದ್ದಲ್ಲಿ ತದನಂತರ ಇವರಿಗೆ ಕುಬೇರರಾಗುವ ಯೋಗವು ಸಹ ಇದೆ ಸಂಖ್ಯಾಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: