ನಿಮ್ಮ ಕನಸಲ್ಲಿ ಇವುಗಳನ್ನು ಕಂಡರೆ ಏನರ್ಥ ಗೊತ್ತೇ

ಹೌದು ಕನಸು ಅಂದಾಕ್ಷಣ ನಿದ್ದೆಯಲ್ಲಿ ಬರುವ ಎಲ್ಲಾ ಕನಸುಗಳು ನನಸಾಗುವುದಿಲ್ಲ ಆ ಕನಸಿನ ಸಮಯಕ್ಕೂ ಒಂದು ಮಹತ್ವದ ಮೌಲ್ಯವಿದೆ. ಈ ವಿಚಾರ ಎಲ್ಲರಿಗೂ ತಿಳಿದಿರುವುದಿಲ್ಲ ರಾತ್ರಿ ಮಲಗಿದ್ದಾಗ ಬೀಳುವ ಕನಸುಗಳು ನಿಮ್ಮ ಭವಿಷ್ಯದಲ್ಲಿ ನಿಜವಾಗುವುದಿಲ್ಲ ನಿಮಗಿದು ತಿಳಿದಿರಲಿ ಮುಂಜಾನೆ 3.30 ನಂತರ ಬೀಳುವ ಕನಸು ಮಾತ್ರ ನಿಮ್ಮ ಜೀವನದ ಹಾದಿಯನ್ನು ಬದಲಾಯಿಸಬಹುದು. ಕನಸುಗಳಲ್ಲಿ ಶುಭವೂ ಇರಬಹುದು ಅಶುಭವೂ ಇರಬಹುದು ಅವು ಸಾಕಷ್ಟು ನಿಜವಾಗುವುದು ಮುಂಜಾವಿನಲ್ಲಿ ಬೀಳುವ ಕನಸಿನಲ್ಲಿ ಹಾಗದರೆ ಯಾವ ರೀತಿಯ ಕನಸುಗಳು ಒಳಿತು, ಕೆಡುಕು ಎಂಬುದನ್ನು ಸೂಚಿಸುತ್ತವೆ ಎಂಬುದನ್ನು ಗಮನಿಸುವುದಾದರೆ ನಿಮಗೆ ಬೆಳಿಗ್ಗೆಯ ಸಮಯದಲ್ಲಿ ಪುಣ್ಯಕ್ಷೇತ್ರಗಳ ಭೇಟಿ, ಅಲ್ಲಿನ ವಿಗ್ರಹಗಳ ಪೂಜೆ ಪುನಸ್ಕಾರಗಳು ನೆರೆವೇರುತ್ತಿದ್ದ ದೃಶ್ಯಗಳು ಕಂಡರೆ ನಿಮಗೆ ಶುಭಸೂಚನೆಯ ಸಂಕೇತ ಇದೇ ರೀತಿಯಾಗಿ ತಂದೆ ತಾಯಿಯ ಮುಖಚಹರೆ ಕಾಣುವುದು, ಮಗು ನಿಮ್ಮ ನೋಡಿ ನಗುತ್ತಿರುವುದು, ನೀವೊಬ್ಬರೆ ಏಕಾಂತವಾಗಿ ಉದ್ಯಾನವನದಲ್ಲಿ ತಿರುಗಾಡುವ ರೀತಿಯಾಗಿ ಕನಸು ಬಿದ್ದರೆ ಇವು ಸಕರಾತ್ಮಕ ಸುದ್ದಿಗಳು ಮತ್ತು ನಿಮಗೆ ಸಂಪತ್ತು, ಅಧಿಕಾರ ಸಮೃದ್ದಿಯ ಜೀವನ ನಿಮ್ಮದಾಗುವ ಶುಭ ಸೂಚನೆ ಎನ್ನಬಹುದಾಗಿದೆ.

ಹಾಗೆ ದೇವತೆಯ ರೂಪತಾಳಿ ಹೆಣ್ಣುಮಗಳೊಬ್ಬಳು ನಿಮ್ಮ ಕನಸಿನಲ್ಲಿ ಬಂದರೆ ಅದು ನಿಮಗೆ ಅದೃಷ್ಟದ ಸೂಚಕ ಎಂದು ಜ್ಯೋತಿಷ್ಯಕಾರರು ನುಡಿಯುತ್ತಾರೆ. ಕೆಲವು ವ್ಯಕ್ತಿಗಳಿಗೆ ಮುಂಜಾವಿನಲ್ಲಿ ತಾವು ವೇಧ ಮಂತ್ರ ಪಠಿಸುತ್ತಿರುವ ಹಾಗೇ ಕನಸು ಬಿದ್ದರೆ ಅವರಿಗೆ ಸಮಾಜದಲ್ಲಿ ಉನ್ನತ ಗೌರವ ಆತಿಥ್ಯ ದೊರಕುವ ಸಂಭವವಿದೆ ಎಂಬುದು ನಂಬಿಕೆಯಾಗಿದೆ. ಇನ್ನು ಈ ಕನಸುಗಳು ಅಶುಭ ಸೂಚನೆ ಯಾವ ರೀತಿಯಾಗಿರುತ್ತದೆ ಎಂಬುದನ್ನು ತಿಳಿಯುವುದಾದರೆ ನಕ್ಷತ್ರಗಳು ನಾಶವಾಗುವಂತದ್ದು, ವೈದ್ಯರ ಭೇಟಿಯಾಗುವ ರೀತಿ,ಅಪಘಾತ ನಡೆಯುವ ರೀತಿಯಾಗಿ ಕನಸು ಬಿದ್ದರೆ ಅದು ಆರೋಗ್ಯ ಸಮಸ್ಯೆ ಕಾಡುವ ಸೂಚನೆಯಾಗಿದೆ. ಇದರ ಜೊತೆಗೆ ತಲೆಗೆ ಎಣ್ಣೆ ಹಚ್ಚಿಸಿಕೊಳ್ಳುವ ಹಾಗೆ ಕಂಡರೆ ಪ್ರಾಣಭಯದ ಭೀತಿ ಇರುವಂತದ್ದು ಎಂಬುದು ಇದಕ್ಕೆ ಪರಿಹಾರವಾಗಿ ಮೃತ್ಯುಂಜಯ ಹೋಮ ಮಾಡಿಸುವುದರ ಮೂಲಕ ಆತಂಕ ಭಯದ ಸಮಸ್ಯೆಯಿಂದ ದೂರವಾಗಬಹುದು ಎಂದು ತಿಳಿಸುತ್ತಾರೆ. ನಿಮ್ಮ ಕನಸಿನಲ್ಲಿ ಅರಳೀಮರ, ಕಲ್ಪವೃಕ್ಷ ಕಂಡರೆ ಆಶಾದಾಯಕ ಜೀವನ ನಿಮ್ಮದಾಗಿರುತ್ತದೆ ಒಟ್ಟಾರೆಯಾಗಿ ಬೀಳುವ ಕನಸೆಲ್ಲಾ ನಿಜವಾಗುವುದಿಲ್ಲ ಅವುಗಳು ನಿಮ್ಮ ಮನಸ್ಥಿತಿಯ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಮತ್ತೊಂದು ವಾದವನ್ನು ಸಹ ಮಾಡುವವರಿದ್ದಾರೆ ಎಲ್ಲವೂ ಅವರವರ ನಂಬಿಕೆ.

%d bloggers like this: