ನಿಮ್ಮ ಕನಸಿನಲ್ಲಿ ಇವುಗಳು ಕಂಡರೆ ನಿಮಗೆ ಶುಭ ಸೂಚನೆ ಸಿಕ್ಕಂತೆ

ರಾತ್ರಿಯ ಹೊತ್ತಿನಲ್ಲಿ ನಿಮಗೆ ಬೀಳುವ ಕನಸಿನಿಂದ ನೀವು ಭಯ ಪಡಬೇಕಾಗಿಲ್ಲ, ಕೆಲವರಿಗೆ ರಾತ್ರಿಯ ಕನಸು ಅಂತಹ ಪರಿಣಾಮವೇನೂ ಬೀರುವುದಿಲ್ಲ, ಜೊತೆಗೆ ಅದು ನಿಜ ಕೂಡ ಆಗುವುದಿಲ್ಲ ಎಂದು ನಂಬುತ್ತಾರೆ. ಆದರೆ ಇದೇ ಕನಸುಗಳು ಬೆಳಿಗ್ಗೆಯ ಸಮಯದಲ್ಲಿ ಬಿದ್ದಾಗ ಕೆಲವರಿಗೆ ಅಳುಕು ಉಂಟಾಗುತ್ತದೆ. ಅದು ಒಳಿತಾಗಿರಲಿ ಅಥವಾ ಕೆಡುಕಾಗಿರಲಿ ಒಟ್ಟಿನಲ್ಲಿ ಮನದಲ್ಲಿ ಒಂದು ರೀತಿಯ ಭಯ ಅಳುಕು ಕಾಡುತ್ತದೆ. ಏನೋ ಬೀಳುವ ಕನಸೆಲ್ಲಾ ನಿಜವಾಗುವುದಿಲ್ಲ ಆದರೆ ಆ ಕನಸಿನ ಸೂಚನೆಗಳು ಏನು ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು. ಬೀಳುವ ಕನಸುಗಳು ಶುಭ ಮತ್ತು ಅಶುಭಫಲ ಸೂಚಿಸುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರೀತಿಯ ಸ್ವಪ್ನಗಳು ಶುಭ ಮತ್ತು ಅಶುಭದ ಸಂಕೇತಗಳು ಎಂಬುದನ್ನು ತಿಳಿದುಕೊಳ್ಳುವುದು ಹೆಚ್ಚು ಉಪಯುಕ್ತ ಅನಿಸಬಹುದು. ಕೆಲವರಿಗೆ ಬೀಳುವ ಕನಸುಗಳು ಕೆಟ್ಟದಾಗಿರಬಹುದು ಅದಕ್ಕೆ ಅವರು ತಕ್ಷಣ ನಿದ್ದೆಯ ಮಂಪರಿನಲ್ಲಿ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುವ ಸ್ವಭಾವವುಳ್ಳವರಾಗಿದ್ದರೆ ಅವರು ಕೊಂಚ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ.

ಕೆಲವರಿಗೆ ಎತ್ತು, ಆನೆ, ಅಂಬಾರಿ ಬೆಟ್ಟ ಗುಡ್ಡಗಳು, ಪರಿಸರ ವಾತಾವರಣ, ಬಿಳಿಯ ವಸ್ತ್ರಗಳು, ಹರಿಯುವ ನದಿ, ಬಿಲ್ವಪತ್ರೆ, ಸುಗಂಧದ್ರವ್ಯ ಪುಷ್ಪಗಳು, ಪುಣ್ಯಕ್ಷೇತ್ರಗಳು, ವಿಭೂತಿ, ಕುಂಕುಮ, ಅರಿಶಿನ ಹೀಗೆ ಈ ರೀತಿಯಾದ ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಅದು ಶುಭ ಸೂಚಕ ಎಂದು ಕರೆಯಬಹುದಾಗಿದೆ. ಇನ್ನು ಕನಸಿನಲ್ಲಿ ಕಾಲವಾಗಿರುವ ತಂದೆ ತಾಯಿಗಳು ಕಾಣಿಸಿಕೊಂಡು ಅವರು ಏನಾದರು ವಿಚಾರವನ್ನು ಹೇಳಿದರೆ ಅದು ನಡೆಯುತ್ತದೆ ಎಂಬ ನಂಬಿಕೆಯಿದೆ. ಗುರು ಹಿರಿಯರು ಕನಸಿನಲ್ಲಿ ಕಂಡರೆ ಅದು ನಿಮಗೆ ಶುಭ ಸಂಕೇತ ಎಂದು ಭಾವಿಸಬೇಕಾಗುತ್ತದೆ. ಬ್ರಾಹ್ಮಣ ವ್ಯಕ್ತಿಕನಸಿನಲ್ಲಿ ಕಾಣಬಾರದು, ಅವರು ನಿಮ್ಮ ಗುರುಗಳ ಆಗಿದ್ದರೆ ಏನೂ ತೊಂದರೆ ಇಲ್ಲ, ತಾಂಬೂಲ, ಬಿಳಿಕುದುರೆ ಕಂಡರೆ ಧನಲಾಭ ಎಂದು ತಿಳಿಯಬಹುದಾಗಿದೆ.

%d bloggers like this: