ನಂಬಿಕೆ ಅನ್ನುವುದು ಅವರವರ ಭಕ್ತಿಗೆ, ಭಾವನೆಗೆ ಸಂಬಂಧಪಟ್ಟದ್ದು, ಯಾರನ್ನಾಗಲೀ ಬಲವಂತದಿಂದ ಒಪ್ಪಿಸಲು ಆಗುವುದಿಲ್ಲ ಅದು ಅವರವರ ವೈಯಕ್ತಿಕ ವಿಚಾರವಾಗಿದೆ. ಹಾಗೆ ಸಮಾಜದಲ್ಲಿ ಕೆಲವರು ದೇವರು, ಪೂಜೆ ಪುನಸ್ಕಾರ, ಆಚಾರ ವಿಚಾರ, ಸಂಪ್ರದಾಯ ಹೀಗೆ ಸಂಪೂರ್ಣ ದೈವಭಕ್ತರಾಗಿದ್ದು ಆಸ್ತಿಕರಾಗಿರುತ್ತಾರೆ. ಆದರೆ ಇನ್ನೊಂದಷ್ಟು ಜನರು ಇದಕ್ಕೆ ಸಂಪೂರ್ಣ ತದ್ವಿರುದ್ದ ಇವರು ಕಾಯಕವೇ ಕೈಲಾಸ ಎಂದು ಮಾಡುವ ಕಾಯಕದಲ್ಲಿ ದೇವರನ್ನು ಹುಡುಕುತ್ತಾರೆ ನಾಸ್ತಿಕರಾಗಿರುತ್ತಾರೆ. ಆದರೆ ಈ ಮನುಷ್ಯನಿಗೆ ಈ ಗ್ರಹಗತಿ, ದೋಷ ಅಂದಾಕ್ಷಣ ಎದುರುವುದು ಅಷ್ಟೇ ಸತ್ಯ ಇವುಗಳ ಪರಿಹಾರಕ್ಕಾಗಿ ಯಜ್ಞಯಾಗದಿ ಮತ್ಥು ಶಾಂತಿ ಹೋಮ, ಹವನಗಳನ್ನು ಮಾಡಿಸಿ ಸಮಾಧಾನಕಾರವಾಗಿದೆ ಅಂದಮೇಲೆ ತುಸು ಎಚ್ಚರಿಕೆಯಿಂದ ಇರುತ್ತಾರೆ.

ನೀವು ಗಮನಿಸಿ ಕೆಲವು ವ್ಯಾಪಾರಸ್ಥರು ನೀರಿನ ಲೋಟದೊಳಗೆ ಒಂದು ನಿಂಬೆ ಹಣ್ಣನ್ನು ಇಟ್ಟಿರುತ್ತಾರೆ ಕಾರಣ ವ್ಯಾಪಾರ ವಹಿವಾಟು ಯಾವುದೇ ತೊಂದರೆಯಿಲ್ಲದೆ ಸರಾಗವಾಗಿ ನಡೆಯಲಿ ಎಂದು ಹಾಗೇ ತಾಮ್ರದ ಚೆಂಬಿನಿಂದ ನೀರು ಕುಡಿಯುವ ಅಭ್ಯಾಸ ಮಾಡುವುದು ದೇಹದ ಆರೋಗ್ಯ ಒಳಿತಿಗಾಗಿ ಮತ್ತು ಇದೇ ರೀತಿ ತಾಮ್ರದ ಚೆಂಬಿನಲ್ಲಿ ನೀರನ್ನು ತಾವು ಮಲಗುವ ಮಂಚದ ಕೆಳಗೆ ಇಟ್ಟರೆ ಸೂರ್ಯದೇವನ ಅನುಗ್ರಹ ಆಗುತ್ತದೆ ಎಂಬ ಕಾರಣಕ್ಕಾಗಿ ಈ ರೀತಿ ಮಾಡುತ್ತಾರೆ. ಇದೇ ರೀತಿಯಾಗಿ ಮನೆಯಲ್ಲಿ ಮೀನು ಸಾಕುವುದು ಮನೆಯ ನಕರಾತ್ಮಕ ಸಂಗತಿಯಿಂದ ಹೆಚ್ಚು ಸಕರಾತ್ಮಕವಾದ ಸಂಗತಿಗಳಿಂದ ಕೂಡಿರಲಿ ಎಂಬುದು ಉದ್ದೇಶವಾಗಿರುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿ ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆಯಾಗಿದೆ.