ಮನೆಯೇ ಮಂತ್ರಾಲಯ ಮನೆಯೇ ದೇವಾಲಯ ಅನ್ನುವುದುಂಟು ಆದರೆ ಕೆಲವರು ಮನೆಯನ್ನು ಹಾಗೇ ಇಟ್ಟುಕೊಂಡಿರುವುದಿಲ್ಲ. ಸ್ವಚ್ಛತೆಯಿಲ್ಲದೆ, ಎಲ್ಲೆಂದರಲ್ಲಿ ಬಿದ್ದಿರುವ ಚಾಪೆ, ದಿಂಬುಗಳು, ಉದುರಿದ ಕೂದಲುಗಳು ಹಾಸಿಗೆ, ಸೋಪಾ ಮೇಲೆ ಹರಡಿ ಬಿದ್ದಿರುತ್ತವೆ. ರಾತ್ರಿಯ ಊಟವಾದ ನಂತರ ಅಂದಿನ ಪಾತ್ರೆಯನ್ನು ತೊಳೆಯದೆ ಸಿಂಕ್ ಗಳಲ್ಲಿ ಹಾಗೇ ತುಂಬುವುದು ಹೀಗೆ ಒಂದಷ್ಟು ಆಲಸ್ಯತನದಿಂದಾಗಿ ಮನೆಯಲ್ಲಿ ದರಿದ್ರತೆ ಉಂಟಾಗುತ್ತದೆ. ಆದರೆ ಈ ದರದ್ರತೆ ಮನೆಯಲ್ಲಿ ಅಂಟಿರುವುದು ಅಷ್ಟಾಗಿ ಎಲ್ಲರಿಗೂ ಗೊತ್ತಾಗುವುದಿಲ್ಲ. ಇದಕ್ಕೆ ಕೆಲವು ಸೂಚನೆಗಳಿರುತ್ತವೆ ಮನೆಯ ಯಜಮಾನ ಅಂದರೆ ಮನೆಯ ಹಿರಿಯರು, ಜವಬ್ದಾರಿ ಹೊತ್ತ ಪುರುಷರು ಹೆಚ್ಚು ಕ್ರಿಯಾಶೀಲರಾಗದೆ ಸದಾ ಗೊಂದಲದಲ್ಲಿ ಇರುತ್ತಾರೆ.

ಯಾವುದೇ ಕೆಲಸಕ್ಕೂ ಆತುರ ಪಟ್ಟು ಅದರಿಂದ ಆದ ತಪ್ಪುಗಳಿಗೆ ಪಶ್ಚಾತಾಪ ಪಡುವುದು, ಮನೆಯ ಮಕ್ಕಳು ತಂದೆ-ತಾಯಿ ವಿರುದ್ದವಾಗಿ ನಡೆದುಕೊಳ್ಳುವುದು, ಪ್ರತಿ ನಿತ್ಯ ಅನಾವಶ್ಯಕವಾದ ವಿಚಾರಗಳ ಬಗ್ಗೆ ಜಗಳಗಳು ಏರ್ಪಡುವುದು ಹೀಗೆ ಕೆಲವು ಮನಃಶಾಂತಿ ಕೆಡುವಂತಹ ಘಟನೆಗಳು ಮನೆಯಲ್ಲಿ ನಿರಂತರವಾಗಿ ನಡೆಯುತ್ತಿರುತ್ತವೆ. ಇಂತಹ ಸಮಸ್ಯೆಗಳು ಬರುವುದು ದಾರಿದ್ರ್ಯತನದಿಂದ ಇದರಿಂದ ಮುಕ್ತಿಗೊಳ್ಳಬೇಕಾದರೆ ನೀವು ಪಾಲಿಸಬೇಕಾದವು ಇಷ್ಟೆ. ಆದಷ್ಟು ಮನೆಯ ಹೆಣ್ಣುಮಕ್ಕಳು ಬೇಗ ಏಳುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು. ಬೆಳಿಗ್ಗೆ ಎದ್ದ ತಕ್ಷಣ ಸ್ನಾನ, ದೇವರ ಮನೆ ಶುಚಿತ್ವ, ದೇವರ ಪೂಜೆ ಪುನಸ್ಕಾರ, ತುಳಸಿ ಪೂಜೆ ಹೀಗೆ ದೈವಸಂಕಲ್ಪ ಮಾಡಿ ಮನೆಯಲ್ಲಿ ದೇವರಿಗೆ ಕರ್ಪೂರ ಧೂಪ ಬೆಳಗಬೇಕು.



ವಾರದಲ್ಲಿ ಬರುವ ಸೋಮವಾರ, ಶುಕ್ರವಾರ ತಪ್ಪದೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಅರಿಶಿನದ ನೀರನ್ನು ಮನೆಯ ಎಲ್ಲಾ ಮೂಲೆಗೂ ಸ್ಪರ್ಶಿಸುವಂತೆ ಹಾಕಬೇಕು. ಹೀಗೆ ದೇವರ ಪೂಜೆಯ ಸಮಯದಲ್ಲಿ ಹೂವು, ಹಣ್ಣಿನ ಜೊತೆಗೆ ಕಲ್ಪವೃಕ್ಷ ವಾಗಿರುವ ತೆಂಗಿನ ಕಾಯಿಯನ್ನು ಒಡೆದು ದೇವರಿಗೆ ಅರ್ಪಿಸಬೇಕು ಇದರಿಂದ ಮನೆಯ ದಾರಿದ್ರ್ಯ ದೂರವಾಗಿ ಆರೋಗ್ಯ, ಸಂಪತ್ತು ಯಶಸ್ಸಿನಿಂದ ಮನೆಯಲ್ಲಿ ಸಂತೋಷದ ವಾತಾವರಣ ಏರ್ಪಡುತ್ತದೆ. ನಿಮ್ಮ ಅಂತರಂಗ ಶುದ್ದಿ, ಅಂತರಂಗ ಭಕ್ತಿಯಿಂದ ದೇವರ ಕೃಪೆಗೆ ಪಾತ್ರರಾಗಿ ನಿಮ್ಮ ಮೇಲೆ ದೇವರ ಅನುಗ್ರಹ ಸದಾ ಇರುತ್ತದೆ ಎಂದು ಹಿರಿಯರು ತಿಳಿಸುತ್ತಾರೆ.