ನಿಮ್ಮ ಮನೆಯಲ್ಲಿ ಇರಿಸಿರುವ ವಸ್ತು ನಿಮ್ಮ ಮನೆಯ ಶಾಂತಿ ಕದಡಲು ಕಾರಣವಾಗುತ್ತವೆ. ಹಾಗಾದರೇ ಯಾವುದು ಆ ವಸ್ತು ನಿಮ್ಮ ಮನೆಯಲ್ಲಿ ಎಲ್ಲಿ ಇಟ್ಟಿದ್ದೀರಿ ಎಂಬುದು ನಿಮ್ಮನ್ನು ಕಾಡಬಹುದು. ಆ ವಸ್ತು ನಿಮ್ಮ ಮನೆಯ ಸದಸ್ಯರ ಮೇಲೆ ಯಾವ ರೀತಿಯಾಗಿ ಕೆಟ್ಟ ಪರಿಣಾಮ ಬೀರಬಹುದು ಎಂದು ತಿಳಿಯಬೇಕಾಗುವುದು ಅವಶ್ಯಕವಾಗಿದೆ. ಹೌದು ನಿಮ್ಮ ಮನೆಯಲ್ಲಿ ಕಬ್ಬಿಣದ ವಸ್ತುಗಳನ್ನು ಬಳಸಲೇಬೇಡಿ ಅದು ನಿಮ್ಮ ಮನೆಯ ಸದಸ್ಯರ ಅನಾರೋಗ್ಯಕ್ಕೆ, ಸತಿ ಪತಿ ಕಲಹಕ್ಕೆ ಸುಲಭಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಜ್ಯೋತಿಷ್ಯರು ತಿಳಿಸುತ್ತಾರೆ. ಅಷ್ಟಕ್ಕೂ ನೀವು ಮನೆಯಲ್ಲಿ ಬಳಸುವ ಕಬ್ಬಿಣದ ವಸ್ತುಗಳು ಯಾವುವು ಅಂತ ಗೊತ್ತಾ ಮನೆಗಳಲ್ಲಿ ಬಳಸುವ ಕಬ್ಬಿಣದ ಮಂಚ, ಕಬ್ಬಿಣದ ಚೇರು, ಕಬ್ಬಿಣದ ತೊಟ್ಟಿಲು ಮನೆಯ ಕಲಹಕ್ಕೆ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಯಾರ ಮನೆಯಲ್ಲಿ ಕಬ್ಬಿಣದ ಮಂಚ ಬಳಸುತ್ತಿದ್ದೀರೋ ಅವರ ಮನೆಯ ಹಿರಿಯರು ಆ ಮಂಚದ ಮೇಲೆ ಮಲಗುತ್ತಾರೋ ಅಂತಹ ಹಿರಿಯರು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಾರೆ. ಇನ್ನು ಮನೆಯಲ್ಲಿ ದಂಪತಿ ಕಲಹಗಳು ದಿನನಿತ್ಯ ಏರ್ಪಡುವಂತಹ ಅವಕಾಶಗಳಿರುತ್ತವೆ. ಯಾವುದಾದರೊಂದು ಸಣ್ಣ ಪುಟ್ಟ ಮಾತಿಗೂ ವಿಪರೀತ ಕೋಪ ಉಂಟಾಗಿ, ವಾದ ವಿವಾದ ನಡೆದು ದಾಂಪತ್ಯದಲ್ಲಿ ಪ್ರೇಮ ಅನುರಾಗ ದೂರದ ಮಾತಾಗಿ ಉಳಿಯುತ್ತದೆ. ಆದ್ದರಿಂದ ಮನೆಯಲ್ಲಿ ಕಬ್ಬಿಣದ ವಸ್ತುಗಳನ್ನು ಬಳಕೆ ಮಾಡುವುದು ಒಳಿತಲ್ಲ ಇನ್ನು ಮನೆಯ ಎಳೆ ವಯಸ್ಸಿನ ಮಕ್ಕಳನ್ನು ಕಬ್ಬಿಣದ ತೊಟ್ಟಿಲಿನಲ್ಲಿ ಹಾಕಿ ತೂಗುವುದು ಕೂಡ ಮಗುವಿನ ಭವಿಷ್ಯದ ದೃಷ್ಠಿಯಿಂದ ಒಳಿತಲ್ಲ ಎಂದು ಹಿರಿಯರು ಸಲಹೆ ಸೂಚನೆ ನೀಡುತ್ತಾರೆ. ಆದ್ದರಿಂದ ಸಾಧ್ಯವಾದಷ್ಟು ಮನೆಯಲ್ಲಿ ಕಬ್ಬಿಣದ ವಸ್ತುಗಳ ಬಳಕೆಯನ್ನು ನಿಲ್ಲಿಸುವುದು ಸೂಕ್ತ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ.