ನಿಮ್ಮ ಮನೆಯಲ್ಲಿ ಎಂದೂ ಈ ತರಹದ ಫೋಟೋಗಳನ್ನು ಹಾಕುವ ತಪ್ಪು ಮಾಡಬೇಡಿ

ಜ್ಯೋತಿಷ್ಯಶಾಸ್ತ್ರ ಜೀವನದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬುದರ ಬಗ್ಗೆ ಒಂದು ಪರಿಕಲ್ಪನೆಯನ್ನು ನೀಡುತ್ತದೆ. ನಾವು ಮಾಡುವ ಕೆಲವೊಂದು ಸಣ್ಣಪುಟ್ಟ ತಪ್ಪುಗಳು ನಮ್ಮ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ. ಅದೇ ರೀತಿ ಮನೆಯಲ್ಲಿ ಹಾಕುವಂತಹ ಫೋಟೋಗಳು ಕೂಡ ಪ್ರಭಾವ ಬೀರಬಲ್ಲವು. ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕುಟುಂಬದ ಜೊತೆಗೆ ಅಥವಾ ಸ್ನೇಹಿತರೊಡನೆ ಕಳೆದ ಮಧುರ ಕ್ಷಣಗಳು ಫೋಟೋಗಳನ್ನು ಕ್ಲಿಕ್ಕಿಸಿ ಮನೆಯಲ್ಲಿ ಹಾಕಲಾಗಿರುತ್ತದೆ, ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಿಧದ ಫೋಟೋಗಳನ್ನು ಮನೆಯಲ್ಲಿ ಹಾಕಬಾರದು.

ಕೆಲವು ಮನೆಗಳಲ್ಲಿ ಮೂರೇ ಜನರಿರುವಂತಹ ಒಂದು ಕುಟುಂಬ ಇರುತ್ತದೆ ಅಂದರೆ ಒಂದೇ ಮಗು ಇರುವ ವಿಭಕ್ತ ಕುಟುಂಬ ಇರುತ್ತದೆ. ಇಂತಹ ಕುಟುಂಬ ಅಂದರೆ ತಂದೆ ತಾಯಿ ಮಗು ನಿಂತಿರುವ ಒಟ್ಟಿಗೆ ತೆಗೆಸಿಕೊಂಡ ಫೋಟೋ ಅನ್ನು ಹಾಕಬಾರದು. ಅಲ್ಲದೆ ಮೂರು ಸ್ನೇಹಿತರು ಒಟ್ಟಿಗೆ ನಿಂತಿರುವ ಫೋಟೋವನ್ನು ಕೂಡ ಮನೆಯಲ್ಲಿ ಹಾಕಬಾರದು. ಇದರಿಂದ ಸ್ನೇಹಿತರ ನಡುವೆ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇರುತ್ತದೆ ಎಂದು ವಾಸ್ತು ಹೇಳುತ್ತದೆ. ಒಂದು ವೇಳೆ ಹಾಕಲೇಬೇಕು ಎಂದಿದೆ ಅಂತಾದರೆ ಮೂವರು ತ್ರಿಕೋನಾಕಾರದಲ್ಲಿ ನಿಂತು ಅಥವಾ ಕುಳಿತು ತೆಗೆಸಿಕೊಂಡು ಹಾಕಿ. ಅದರಲ್ಲೂ ಮನೆ ಹಾಲ್ನಲ್ಲಿ ಎದುರಿನ ಗೋಡೆಗೆ ಎಂದು ಈ ತರದ ಫೋಟೋಗಳನ್ನು ಹಾಕಲೇಬೇಡಿ.

%d bloggers like this: