ನಿಮ್ಮ ಮನೆಯಲ್ಲಿ ಬೀರು ಅಥವಾ ಅಲ್ಮೇರ ಈ ದಿಕ್ಕಿಗೆ ಇದ್ರೆ ಮಾತ್ರ ಅಲ್ಲಿ ಲಕ್ಷ್ಮಿದೇವಿ ನೆಲೆಸುವಳು

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬೀರು ಅಥವಾ ಅಲ್ಮರಾ ಇದ್ದೆ ಇರುತ್ತದೆ. ಇದು ಪ್ರತಿಯೊಬ್ಬರ ಮನೆಯಲ್ಲಿ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಆದರೆ ಈ ಬೀರುವನ್ನು ಎಲ್ಲಿ ಇಡಬೇಕು ಯಾವ ದಿಕ್ಕಿಗೆ ಮುಖಮಾಡಿ ಇಡಬೇಕು ಎಂಬುದು ಪ್ರಾಮುಖ್ಯತೆ ಒಳಗೊಂಡಿದೆ. ಹೌದು ಈ ಅಲ್ಮರಾದಲ್ಲಿ ಅಂದರೆ ಬೀರುವಿನಲ್ಲಿ ಲಕ್ಷ್ಮಿಯನ್ನು ಅಂದರೆ ಮನೆಯಲ್ಲಿನ ಸಕಲ ಬಹುಮುಖ್ಯವಾದ ಆಸ್ತಿ ಕಾಗದ ಪತ್ರಗಳು, ಹಣ, ಒಡವೆ ಬಂಗಾರಗಳನ್ನು ಇಟ್ಟಿರುತ್ತೇವೆ ಇವು ಸುಭಧ್ರತೆಯಿಂದ ಇರಲಿ ಎಂದು ಆದರೆ ಕೆಲವೊಮ್ಮೆ ಈ ಸಂಪತ್ತುಗಳು ಅನಿರೀಕ್ಷಿತವಾಗಿ ವಾಸ್ತುದೋಷದಿಂದ ಈ ಸಂಪತ್ತುಗಳೆಲ್ಲಾ ಕರಗಬಹುದು ಎಂದು ವಾಸ್ತು ತಜ್ಞರು ತಿಳಿಸುತ್ತಾರೆ.

ಹಾಗಾದರೆ ಈ ಅಲ್ಮರಾ ಯಾವ ದಿಕ್ಕಿನಲ್ಲಿ ಇಡಬೇಕು ಅಂದರೆ ಬೀರುವನ್ನು ನಾವು ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಇಟ್ಟಿರುತ್ತೇವೆ. ಅದನ್ನು ಯಾವಾಗಲೂ ನೈರುತ್ಯ ದಿಕ್ಕಿನಲ್ಲಿ ಇಟ್ಟಿರಬೇಕು ಅಂದರೆ ದಕ್ಷಿಣ ಮತ್ತು ಪೂರ್ವದ ದಿಕ್ಕಿನ ನಡುವೆ ನೈರುತ್ಯ ಭಾಗದಲ್ಲಿ ಬೀರುವನ್ನು ಇಟ್ಟಿರಬೇಕು. ನೀವು ಬೀರುವಿನ ಬಾಗಿಲು ತೆಗೆದಾಗ ನೀವು ದಕ್ಷಿಣದ ದಿಕ್ಕಿನಲ್ಲಿ ನಿಂತಿರಬೇಕು ಬಾಗಿಲು ಉತ್ತರದ ದಿಕ್ಕನ್ನ ನೋಡುವಂತಿರಬೇಕು ಎಂದು ವಾಸ್ತುಶಾಸ್ಥ್ರ ಹೇಳುತ್ತದೆ.

ಮತ್ತೆ ಈ ಬೀರುವಿನ ಬಾಗಿಲು ತೆರೆದಾಗ ಯಾವುದೆ ರೀತಿಯ ದುರ್ಗಂಧ ಉದಾಹರಣೆಗೆ ಜಿಳ್ಳೆಉಂಡೆ ಬಟ್ಟೆಯ ವಾಸನೆಯಂತಹ ದುರ್ಗಂಧ ಬರಬಾರದು ಹಾಗಾಗಿ ಸುಗಂಧ ದ್ರವ್ಯಗಳನ್ನು ಅದರಲ್ಲಿ ಇಟ್ಟಿರಬೇಕು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಒಂದು ಬೆಳ್ಳಿಯ ಬಟ್ಟಲು ಅಥವಾ ತಾಮ್ರದ ಬಟ್ಟಲಿನಲ್ಲಿ ಪಚ್ಚಕರ್ಪೂರ ಸುಗಂಧ ದ್ರವ್ಯ ಶ್ರೀಗಂಧವನ್ನು ಇಟ್ಟರೆ ಉತ್ತಮವಾಗಿರುತ್ತದೆ. ಇನ್ನು ಬೀರುವಿನಲ್ಲಿ ಈ ಒಂದು ಕೆಲಸವನ್ನು ಮಾಡಲೇಬೇಕು, ಹೌದು ಬೀರುವಿನ ಮೇಲೆ ದೇವರ ಚಿತ್ರಪಟ ಅಂಟಿಸುವ ಬದಲು ಶುಭ ಲಾಭ ಎಂದು ಬರೆದು ಸ್ವಸ್ತಿಕ್ ಚಿತ್ರ ಬಿಡಿಸಿದರೆ ಒಳಿತಾಗುತ್ತದೆ.

ಹಾಗೂ ಒಂದು ಬಿಳಿಯ ಕಾಗದದ ಮೇಲೆ ಅರಿಶಿನದಲ್ಲಿ ಕುಬೇರನ ರಂಗೋಲಿ ಚಿತ್ರ ಬಿಡಿಸಿ ಕಾಗದದ ನಾಲ್ಕೂ ಮೂಲೆಯಲ್ಲಿ ಅರಿಶಿನ ಇಟ್ಟು ಪೂಜೆ ಮಾಡಬೇಕು ಇದರಿಂದಾಗಿ ಮನೆಯಲ್ಲಿ ಹಣಕಾಸು ವೃದ್ದಿಯಾಗಿ ಮನೆಗಳಲ್ಲಿ ಸಿರಿ ಸಂಪತ್ತು ವೃದ್ದಿಯಾಗಿ ಬಂಗಾರ ಐಶ್ವರ್ಯ ದುಪ್ಪಟ್ಟಾಗಿ ನೆಲನಿಂತು ಲಕ್ಷ್ಮಿಯು ನಿಮ್ಮ ಮನೆಯಲ್ಲಿ ಸ್ಥಿರವಾಗಿ ನಿಲ್ಲುತ್ತಾಳೆ ಎಂದು ವಾಸ್ತುತಜ್ಞರು ತಿಳಿಸುತ್ತಾರೆ..

%d bloggers like this: