ನಿಮ್ಮ ಮನೆಯ ಹಣಕಾಸಿನ ಸಮಸ್ಯೆಗೆ ನೀವು ಮನೆಗೆ ಹಚ್ಚುವ ಬಣ್ಣದಲ್ಲಿ ಪರಿಹಾರವಿದೆ

ನಮ್ಮ ಸನಾತನ ಹಿಂದೂ ಧರ್ಮದ ಋಷಿಮುನಿಗಳು ಮಾಡಿರುವ ಈ ಜ್ಯೋತಿಷ್ಯ ಶಾಸ್ತ್ರ ಮನುಷ್ಯನ ಕರ್ಮ, ಧರ್ಮ ಫಲಾಫಲ ಗಳನ್ನು ಆಧರಿಸಿ ಒಳಿತು ಕೆಡುಕುಗಳನ್ನು ಮಾಡುತ್ತದೆ. ನಿಮ್ಮಸಮಸ್ಯೆಗಳಿಗೆ ನೀವೇ ಕಾರಣಕರ್ತ ರಾಗಿರುತ್ತೀರಿ ನಿಮ್ಮ ಮನೆಗಳಲ್ಲಿ ನಕರಾತ್ಮಕ ಶಕ್ತಿ ಸಂಚರಿಸಲು ಪ್ರಮುಖವಾಗಿ ನಿಮ್ಮ ಮನೆಯ ಹೊರಗೋಡೆಯ ಬಣ್ಣವು ಸಹ ಪ್ರಭಾವ ಬೀರುತ್ತದೆ ಎಂದು ಖುಷಿಮುನಿಗಳು ಹೇಳಿದ್ದಾರೆ. ಹಣದ ತೊಂದರೆ ಯಾರಿಗಿಲ್ಲ ಪ್ರತಿಯೊಬ್ಬರಿಗೂ ಈ ಹಣ ಎಂಬುದು ಸಮಸ್ಯೆಯನ್ನು ಉಂಟುಮಾಡುತ್ತದೆ, ಅಗತ್ಯಇರುವ ವ್ಯಕ್ತಿಗಳಿಗೆ ದೊರಕದೆ ಆಲಸ್ಯತೋರುವ ವ್ಯಕ್ತಿಗಳಿಗೆ ಸದಾ ಜೊತೆಯಲ್ಲಿ ಇರುವ ಲಕ್ಷ್ಮಿ ಚಂಚಲೆ ಅನ್ನುವುದನ್ನು ಕೆಲವೊಮ್ಮೆಸುಳ್ಳುಮಾಡುತ್ತಾಳೆ ಎನ್ನುತ್ತಾರೆ.

ಏಕೆಂದರೆ ಬಡವರು ಬಡವರಾಗಿಯೇ ಉಳಿದು, ಶ್ರೀಮಂತರು ಮಾತ್ರ ಇನ್ನಷ್ಟು ಶ್ರೀಮಂತರಾಗುತ್ತಾರೆ ಇದಕ್ಕೆ ಕಾರಣವೇನು ಎಂಬುದಕ್ಕೆ ಋಷಿಗಳು ನೀಡುವ ಕಾರಣ ನಿಜಕ್ಕೂ ಆಶ್ಚರ್ಯಕರವಾಗಿದೆ.

ಹೌದು ಜಾತಕ ರಾಶಿಚಕ್ರಗಳಲ್ಲಿ ಇರುವ ಪೂರ್ವ ಕರ್ಮ ಫಲಗಳ ಅನುಗುಣವಾಗಿ ನಿಮ್ಮ ಭವಿಷ್ಯ ನಿರ್ಧರಿತವಾಗಿದ್ದರು ಕೂಡ ನಿಮ್ಮ ಮನೆಯ ಬಣ್ಣವು ಸಹ ನಿಮ್ಮ ಮನೆಯ ಅದೃಷ್ಟ ಯೋಗವನ್ನು ನಿಮ್ಮ ಮೇಲೆ ಬೀಳುವ ಜನರ ದೃಷ್ಠಿಯಿಂದ ನಿರ್ಧರಿಸಲಾಗಿದೆ. ಹಾಗಾದರೆಯಾವ ಬಣ್ಣವನ್ನು ಮನೆಯ ಹೊರಗೋಡೆಗೆ ಹೊಡೆಸ ಬೇಕು ಎಂಬುದನ್ನುತಿಳಿಯುವುದಾದರೆ ಮನೆಯ ಹೊರಗೋಡೆಗೆ ಸ್ಟ್ಯಾಂಡರ್ಡ್ ಪ್ಯುರ್ ಇಂಗ್ಲೀಷ್ ವೈಟ್ ಬಣ್ಣವನ್ನು ಹೊಡೆಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಯು ಶೇಕಡವಾರು 30% ದಿಂದ 40% ವರೆಗೆ ಪರಿಹಾರ ಅಡಗಿದೆ ಎಂದು ಋಷಿಮುನಿಗಳು ಸಲಹೆ ನೀಡುತ್ತಾರೆ.

ಬಿಳಿ ಅಂದರೆ ಶುಕ್ರ, ಶುಕ್ರ ಅಂದರೆ ಹಣ, ಲಕ್ಷ್ಮಿ ಆಕರ್ಷಕವಾಗಿ ನಿಮ್ಮಮನೆಗೆ ಸಂಚಾರ ಆಗುತ್ತಾಳೆ ಎಂದು ಹೇಳುತ್ತಾರೆ. ನಿಮ್ಮ ಮನೆಯ ಹೊರಗೋಡೆಯ ಬಣ್ಣ ಬಿಳಿಯದ್ದಾದರು ಸಹ ನಿಮಗೆ ಹಣಕಾಸಿನ ಭಾದೆ ಕಾಡುತ್ತಿದೆ ಅಂದರೆ ನಿಮಗೆ ಕರ್ಮದೋಷವಿದೆ ಎಂಧರ್ಥವಾಗಿದೆ. ಕೇವಲ ಪೂಜೆ ಪುನಸ್ಕಾರದಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದಿಲ್ಲ ನಿಮ್ಮ ಮಂತ್ರ ಪಠನೆಗೆ ಸೋತು ಭಗವಂತ ದಯೆ ಪಾಲಿಸಬೇಕು, ಅಂದರೆ ಮಂತ್ರಪಠನೆಯಿಂದ ಮಾತ್ರ ನಿಮ್ಮ ತಪಸ್ಸು ಸಾಧ್ಯವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: