ಸ್ನಾನಕ್ಕೆ ಬಳಸುವ ಸೋಪನ್ನು ಮನೆಯಲ್ಲಿ ತಯಾರಿಸಬಹುದೇ, ಅದು ಸಾಧ್ಯವೇ ಅದರಿಂದ ನಮ್ಮ ಮುಖ ಬೆಳ್ಳಗಾಗಲು ಸಾಧ್ಯವೇ ಎಂಬ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹೌದು. ನಿಜ ಅನೇಕರು ತಮ್ಮ ತ್ವಚೆಯನ್ನು ಸುಂದರವಾಗಿ ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಬಣ್ಣದ ಬ್ರಾಂಡೆಡ್ ಸ್ನಾನದ ಸೋಪುಗಳನ್ನು ಬಳಕೆ ಮಾಡುತ್ತಾರೆ. ಹೌದು ಇವು ದೇಹದ ಮೇಲಿನ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ ಆದರೆ ಸೌಂದರ್ಯಕ್ಕೆ ಪರಿಪೂರ್ಣವಾಗಿ ಪರಿಣಾಮಕಾರಿಯಲ್ಲ. ಅದೇ ನೀವು ಈಗ ನಾವು ಹೇಳುವ ಸೋಪನ್ನು ಬಳಸಿದರೆ ದುಡ್ಡಿನ ಉಳಿತಾಯದ ಜೊತೆಗೆ ನಿಮ್ಮ ಮುಖದ ಬಣ್ಣ ಕಾಂತಿಯುತವಾಗುತ್ತ ಹೋಗುತ್ತದೆ. ಹಾಗಿದ್ದರೆ ಈ ಸೋಪು ತಯಾರಿಸುವ ವಿಧಾನವನ್ನು ನೋಡಿ.
ಒಂದು ಪಾತ್ರೆಗೆ 1 ಚಮಚ ಮುಲ್ತಾನಿ ಮಿಟ್ಟಿ ಒಂದು ಚಮಚ ಗಂಧದಗಪುಡಿ ಒಂದು ಚಮಚ ಅಕ್ಕಿ ಹಿಟ್ಟು 1 ಚಮಚ ಕಡಲೆ ಹಿಟ್ಟು ಅರ್ಧ ಚಮಚದಷ್ಟು ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಬಿಸಿ ಮಾಡಿಕೊಂಡು ಹಾಕಿ. ನಂತರ ಸೋಪಿನ ಬೇಸ್ ಅನ್ನು ಬಿಸಿ ಮಾಡಿಕೊಂಡು ಮಿಶ್ರಣಕ್ಕೆ ಹಾಕಿ. ಮತ್ತೆ ಒಂದು ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ತದನಂತರ ನಿಮಗೆ ಯಾವ ಆಕಾರದ ಸೋಪು ಬೇಕೊ ಆ ಆಕಾರದ ಪಾತ್ರೆಗೆ ಒಳಭಾಗಕ್ಕೆ ಸುತ್ತಲೂ ವ್ಯಾಸಲಿನ್ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆ ಬಿಡಿ. ಈಗ ತಯಾರಿ ಮಾಡಿಕೊಂಡ ಮಿಶ್ರವನ್ನು ಪಾತ್ರೆಗೆ ಹಾಕಿ. ಮನೆಯಲ್ಲಿ ಸುಲಭವಾಗಿ ತಯಾರಿಸಲ್ಪಡುವ ಈ ಸೋಪನ್ನು ಒಮ್ಮೆ ಬಳಸಿ ನೋಡಿ