ನಿಮ್ಮ ಮುಖ ನಿಮಗೆ ಯಾವ ವಿಟಮಿನ್ ಕೊರತೆ ಇದೆ ಎಂದು ತಿಳಿಸುತ್ತದೆ

ಕೆಲವೊಮ್ಮೆ ನಮ್ಮ ಪ್ರೋಟೀನ್ ಮತ್ತು ವಿಟಮಿನ್ ಅಂಶಗಳ ಗಳ ಕೊರತೆಯಿಂದ ನಮ್ಮ ದೇಹದಲ್ಲಿ ಒಂದಷ್ಟು ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ. ಆದರೆ, ಆ ಬದಲಾವಣೆಗಳು ಯಾವ ವಿಟಮಿನ್ ಕೊರತೆಯಿಂದ ನಮ್ಮ ದೇಹದಲ್ಲಿ ಬದಲಾವಣೆಯಾಗುತ್ತಿದೆ ಎಂಬುದು ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ. ನಮ್ಮ ಮುಖ ನಮ್ಮ ಮನಸ್ಸಿನ ಕನ್ನಡಿ ಎಂದು ಹೇಳುತ್ತಾರೆ ಅದೇ ರೀತಿ ನಮ್ಮ ಮುಖದ ಲಕ್ಷಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದಷ್ಟು ವಿಟಮಿನ್ ಕೊರತೆಗಳ ಬಗ್ಗೆ ತಿಳಿದುಕೊಳ್ಳಬಹುದು. ಉದಾಹರಣೆಗೆ ತುಟಿಗಳ ಬಣ್ಣ ಕಪ್ಪಾಗಿ ಕಾಣಲು ಆರಂಭಿಸಿದರೆ ಬಣ್ಣರಹಿತ ತುಟಿಯ ಕಂಡು ಬಂದರೆ, ನಮ್ಮ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗಿದೆ ಎಂಬುದನ್ನು ತಿಳಿಯಬಹುದು.

ಆದ್ದರಿಂದ ನಮ್ಮ ದೇಹದಲ್ಲಿ ಕಬ್ಬಿಣಾಂಶ ಹೆಚ್ಚಾಗವುದಕ್ಕೆ ಆದಷ್ಟು ನಮ್ಮ ಆಹಾರಶೈಲಿಯ ಕ್ರಮದಲ್ಲಿ ಮೊಟ್ಟೆ ಲಿವರ್, ನುಗ್ಗೆ ಸೊಪ್ಪು ಮತ್ತು ಪಾಲಕ್ ಸೊಪ್ಪು ಗಳನ್ನು ಸೇವಿಸಿದರೆ ನಮ್ಮ ದೇಹಕ್ಕೆ ಕಬ್ಬಿಣಾಂಶವು ದೊರೆಯುತ್ತದೆ. ಹಲ್ಲುಜ್ಜುವಾಗ ಒಸಡುಗಳ ನಡವೆ ರಕ್ತಸ್ರಾವ ಉಂಟಾದರೆ ನಮ್ಮ ದೇಹದಲ್ಲಿ ವಿಟಮಿನ್ ಸಿ ಕೊರತೆ ಕಂಡುಬರುತ್ತಿದೆ. ವಿಟಮಿನ್ ‘ಸಿ’ ಕೊರತೆಯನ್ನು ನಿವಾರಿಸಲು ವಿಟಮಿನ್ ‘ಸಿ’ ಇರುವ ಕಲ್ಲಂಗಡಿ, ಸ್ಟ್ರಾಬೇರಿ, ಸೇಬಿನಂತಹ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸುವುದರಿಂದ ವಿಟಮಿನ್ ‘ಸಿ’ ನಮ್ಮ ದೇಹಕ್ಕೆ ಪೂರೈಕೆಯಾಗುತ್ತದೆ. ಇನ್ನು ಕಣ್ಣುಗಳು ಊದಿಕೊಂಡಂತೆ, ಕೈತೋಳುಗಳು ದಪ್ಪವಾಗಿ ಊದುವ ಲಕ್ಷಣಗಳು ಕಂಡುಬಂದರೆ ದೇಹದಲ್ಲಿ ಅಯೋಡಿನ್ ಕೊರತೆಯಿದೆ ಎಂಬುದನ್ನು ತಿಳಿಯಬಹುದು.

ಡೈರಿ ಉತ್ಪನ್ನಗಳು ಸೇವಿಸುವುದರ ಜೊತೆಗೆ ಸೇವಿಸುವ ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳುವುದು ಉತ್ತಮವಾಗಿರುತ್ತದೆ. ಅದಲ್ಲದೆ ಅರೆ ನಿದ್ರಾವಸ್ಥೆ, ಹೆಚ್ಚು ಮೊಬೈಲ್ ಬಳಕೆ, ಟಿವಿ ನೋಡುವಂತಹ ಅಭ್ಯಾಸಗಳಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಒಳಿತಾಗಿದೆ. ಇನ್ನು ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದರೆ ನಿಮ್ಮ ದೇಹದಲ್ಲಿ ವಿಟಮಿನ್ ‘ಡಿ’ ಕೊರತೆ ಕಂಡುಬರುತ್ತಿದೆ ಎಂಧರ್ಥ. ಇದರಿಂದ ಆರ್ಬೀಸಿಯು ದೇಹದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಇದರ ಪರಿಣಾಮ ಬಿಲುರುಬಿನ್ ಅಂಶ ನಿಮ್ಮ ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ.

ಇದು ದೇಹದಿಂದ ಹೊರ ಹೋಗುವುದರಿಂದ ನಿಮ್ಮ ಚರ್ಮದ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ, ಅದಕ್ಕಾಗಿ ನೀವು ಸೇವಿಸುವ ಆಹಾರದಲ್ಲಿ ಮೀನು, ಮೊಟ್ಟೆ, ಕೆಂಪು ಮಾಂಸವನ್ನು ಸೇವಿಸುವುದರಿಂದ ವಿಟಮಿನ್ ಬಿ12 ಅಂಶ ಹೆಚ್ಚಾಗುತ್ತದೆ. ತಲೆಯಲ್ಲಿ ಹೊಟ್ಟಿನ ಸಮಸ್ಯೆ ಹೆಚ್ಚಾಗಿ ಕಂಡುಬಂದು ಕೂದಲು ಉದುರುವ ಸಮಸ್ಯೆ ಹೆಚ್ಚಾದರೆ ನಿಮ್ಮ ದೇಹದಲ್ಲಿ ಬಯೋಟಿನ್ ವಿಟಮಿನ್ ಕೊರತೆ ಇರುತ್ತದೆ. ಇದು ಕಡಿಮೆಯಾಗುವುದಕ್ಕೆ ಅನಾವಶ್ಯಕವಾಗಿ ಸಿಕ್ಕ ಮಾತ್ರೆಗಳನ್ನು ಸೇವಿಸುವುದು ಇದಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಆದ್ದರಿಂದ ನಿಮ್ಮ ಸಣ್ಣಪುಟ್ಟ ಸಮಸ್ಯೆಗಳಿಗೆ ಮಾತ್ರೆಯ ಸೇವನೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಹಾನಿಕರ ಎಂದು ವೈದ್ಯರು ತಿಳಿಸುತ್ತಾರೆ. ಹೀಗೆ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ ನಿಮ್ಮಲ್ಲಿರುವ ವಿಟಮಿನ್ ಕೊರತೆಯನ್ನು ತಿಳಿಯಬಹುದು.

%d bloggers like this: