ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಮನೆಯಲ್ಲಿ ಹಿರಿಯರಿದ್ದರೆ ಏನು ಮಾಡಬೇಕು ಏನು ಮಾಡಬಾರದು ಎಂಬುದು ಸ್ವಲ್ಪಮಟ್ಟಿಗಾದರೂ ಅರ್ಥವಾಗಿರುತ್ತದೆ. ನಮ್ಮಿಂದಾಗುವ ಸಣ್ಣ ತಪ್ಪುಗಳು ನಮ್ಮ ಜೀವನಕ್ಕೆ ದರಿದ್ರ ವಾಗಬಹುದು. ಹೌದು ಅನೇಕರಿಗೆ ಮಲಗುವ ತಲೆದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಡುವ ಅಭ್ಯಾಸವಾಗಿ ಬಿಟ್ಟಿರುತ್ತದೆ. ಆದರೆ ಹೀಗೆ ಮಾಡುವುದು ಸರಿಯಲ್ಲ ಎಂದು ವಾಸ್ತ ಶಾಸ್ತ್ರ ಖಡಾಖಂಡಿತವಾಗಿ ಹೇಳುತ್ತದೆ. ಅವು ಯಾವ ವಸ್ತುಗಳು ಎಂದು ತಿಳಿದುಕೊಳ್ಳಿ. ಯಾವುದೇ ಕಾರಣಕ್ಕೂ ಹುಡುಗರಾಗಲಿ ಹುಡುಗಿಯರು ಆಗಲಿ ನಿಮ್ಮ ಪರ್ಸನ್ನು ತಲೆದಿಂಬಿನ ಕೆಳಗೆ ಇಡಲೇ ಬೇಡಿ. ಇದರಿಂದ ಆರ್ಥಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.
ಎರಡನೆಯದಾಗಿ ಚಿನ್ನದ ಆಭರಣಗಳು. ಹೌದು ಹಿಂದೂ ಸಂಪ್ರದಾಯದಲ್ಲಿ ಆಭರಣಗಳು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇಂತಹ ಆಭರಣಗಳನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ನಮ್ಮ ಜೀವನಕ್ಕೆ ದಾರಿದ್ರ್ಯ ಬರಬಹುದು. ಮೂರನೆಯದಾಗಿ ಪುಸ್ತಕಗಳು, ಹೌದು ಸರಸ್ವತಿ ಸಮಾನವಾದ ಪುಸ್ತಕಗಳನ್ನು ಎಂದಿಗೂ ತಲೆಯಕೆಳಗಿ ಇಡಬೇಡಿ. ಬಹಳಷ್ಟು ಜನರಿಗೆ ರಾತ್ರಿ ಮಲಗುವ ಮುನ್ನ ಓದಿ ಮಲಗುವ ಅಭ್ಯಾಸವಿರುತ್ತದೆ. ಆದರೆ ಮಲಗುವ ಮುಂಚೆ ಪುಸ್ತಕವನ್ನು ಪಕ್ಕದಲ್ಲಿರುವ ಟೇಬಲ್ನಲ್ಲಿ ಇಡಬೇಕೆ ಹೊರತು ತಲೆದಿಂಬಿನ ಕೆಳಗೆ ಅಲ್ಲ. ಕೊನೆಯದಾಗಿ ಮನೆಯ ಕೀಲಿ ಕೈ. ಹೌದು ಕೀಲಿಕೈಯನ್ನು ಅನೇಕರು ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ಹಾಳಾಗುವ ಸಾಧ್ಯತೆ ಇರುತ್ತದೆ ಎಂದು ವಾಸ್ತು ಹೇಳುತ್ತದೆ.