ನಿನ್ನ ನಟನೆಯನ್ನು ವರ್ಣಿಸಲು ಪದಗಳು ಸಾಕಾಗುವುದಿಲ್ಲ, ಆಲಿಯಾ ಅವರ ಚಿತ್ರ ನೋಡಿ ಖುಷ್ ಆದ ದಕ್ಷಿಣ ಭಾರತದ ಸ್ಟಾರ್ ನಟಿ

ಸದ್ಯಕ್ಕೆ ಬಾಲಿವುಡ್ ಟಾಪ್ ಹೀರೋಯಿನ್ ಗಳ ಲಿಸ್ಟ್ ನಲ್ಲಿ ಆಲಿಯಾ ಭಟ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಏಕೆಂದರೆ ಬ್ಯಾಕ್ ಟು ಬ್ಯಾಕ್ ಭರ್ಜರಿ ಹಿಟ್ ಚಿತ್ರಗಳನ್ನು ನೀಡುತ್ತಿರುವ ಅಲಿಯಾ ಭಟ್ ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ತಾವು ನಟಿಸಿರುವ ಎಲ್ಲಾ ಪಾತ್ರಗಳಿಗೂ ತಮ್ಮ ಹಂಡ್ರೆಡ್ ಪರ್ಸೆಂಟ್ ನೀಡುವ ಈ ನಟಿ ನಿರ್ದೇಶಕರ ಫೇವರೆಟ್. ಎಂತಹುದೇ ಪಾತ್ರವನ್ನು ಕೂಡ ಸರಳವಾಗಿ ನಿಭಾಯಿಸುವ ಜಾಣ್ಮೆ ಆಲಿಯಾ ಭಟ್ ಅವರಿಗಿದೆ. ಸದ್ಯಕ್ಕೆ ಆಲಿಯಾ ಭಟ್ ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಆಲಿಯಾ ಭಟ್ ನಟನೆಯ ಬಹು ನಿರೀಕ್ಷಿತ ಚಿತ್ರ ಗಂಗೂಬಾಯಿ ಕಾಠಿಯಾವಾಡಿ ಸಿನೆಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರ ನೋಡಿದವರೆಲ್ಲಾ ಗಂಗೂಬಾಯಿ ಆಗಿ ನಟಿಸಿರುವ ಆಲಿಯಾ ಅವರ ನಟನೆಗೆ ಮೂಕವಿಸ್ಮಿತರಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನ ಹಾಗೂ ಆಲಿಯಾ ಭಟ್ ಅವರ ನಟನೆ ಎಂದರೆ ಕೇಳಬೇಕೆ, ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಚಿತ್ರ ಭರ್ಜರಿ ಸಕ್ಸಸ್ ಕಾಣಲೇಬೇಕು ಎಂಬುದು ವಿಮರ್ಶಕರ ಅಭಿಪ್ರಾಯವಾಗಿತ್ತು. ಆದರೆ ಈ ಚಿತ್ರ ಆರಂಭದಿಂದಲೇ ವಿವಾದಕ್ಕೆ ಸಿಲುಕಿತ್ತು. ಗಂಗೂಬಾಯಿ ಎಂಬ ಹೆಣ್ಣು ಮಗಳ ನಿಜವಾದ ಕಥೆಯಾಧಾರಿತವಾಗಿರುವ ಈ ಸಿನಿಮಾ ಬಿಡುಗಡೆಗೂ ಮೊದಲೇ ಕೋರ್ಟ್ ಮೆಟ್ಟಿಲೇರಿತ್ತು. ಹಲವು ದಿನಗಳ ಕಾಲ ಕೋರ್ಟ್ ಕಟಕಟೆಯಲ್ಲಿದ್ದ ಈ ಚಿತ್ರದ ಟೈಟಲ್ ನ್ನು ಬದಲಾವಣೆ ಮಾಡಲು ಸುಪ್ರೀಂ ಕೋರ್ಟ್ ಸಲಹೆ ನೀಡಿತ್ತು. ಇಷ್ಟೆಲ್ಲಾ ವಿವಾದಗಳನ್ನು ಸೃಷ್ಟಿ ಮಾಡಿದ ಈ ಚಿತ್ರದ ಟೈಟಲ್ ನಿಂದ ಚಿತ್ರ ಬಿಡುಗಡೆಯಾಗುವುದು ಅನುಮಾನವಾಗಿತ್ತು.

ಕೊನೆಗೂ ಈ ಸಿನೆಮಾ ತೆರೆಕಂಡು ಉತ್ತಮ ಪ್ರತಿಕ್ರಿಯೆ ಎಲ್ಲರಿಂದ ವ್ಯಕ್ತವಾಗುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಮತ್ತು ಆಲಿಯಾ ಭಟ್ ಅವರ ನಟನೆಯನ್ನು ಹಾಡಿಹೊಗಳಿದ್ದಾರೆ. ಇನ್ನು ಈ ಚಿತ್ರ ನೋಡಿದ ಹಲವಾರು ಸೆಲೆಬ್ರಿಟಿಗಳು ಆಲಿಯಾ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವಾಗಲೂ ನಟ ಅಥವಾ ನಟಿಯ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಟ್ರೊಲ್ಗೆ ಒಳಗಾಗುವ ನಟಿ ಕಂಗನಾ ಕೂಡ ಆಲಿಯಾ ಅವರ ನಟನೆಗೆ ಶಭಾಷಗಿರಿ ನೀಡಿದ್ದಾರೆ. ಇನ್ನು ಗಂಗೂಬಾಯಿ ಕಾಠಿಯವಾಡಿ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಮೊದಲ ದಿನ ಗಂಗೂಬಾಯಿಯ ಕಲೆಕ್ಷನ್ 10.50 ಕೋಟಿ, ಎರಡನೇ ದಿನ ಸುಮಾರು 13ಕೋಟಿ ಕಲೆಕ್ಷನ್ ಆಗಿದೆ. ಎರಡು ದಿನಕ್ಕೆ ಒಟ್ಟಾರೆ 23ಕೋಟಿ ಕಲೆಕ್ಷನ್ ಆಗಿದ್ದು.

ಈ ವಾರ ಮುಗಿಯುವುದರೊಳಗೆ 40 ಕೋಟಿ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಗಂಗೂಬಾಯಿ ಸಿನಿಮಾ ನೂರು ಕೋಟಿ ಗಳಿಕೆ ದಾಟಿದರೆ ಮಾರ್ಚ್ 25ರಿಲೀಸ್ ಆಗುತ್ತಿರುವ ತ್ರಿಬಲ್ ಆರ್ ಚಿತ್ರದಲ್ಲಿ ನಟಿ ಆಲಿಯಾ ಭಟ್ ಅವರ ಬೇಡಿಕೆ ಹೆಚ್ಚಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಮಂತ ಅವರು ತಮ್ಮ ವಿವಾಹದ ಬಳಿಕ ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯುಟರ್ನ್, ಶಾಕುಂತಲಮ್ ಹೀಗೆ ಹಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಸಮಂತ ನಟಿಸುತ್ತಿದ್ದಾರೆ. ಗಂಗೂಬಾಯಿ ಕಾಠಿಯಾವಾಡಿ ಚಿತ್ರವು ಕೂಡ ಮಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ಸಮಂತ ಅವರಿಗೆ ತುಂಬಾ ಇಷ್ಟವಾಗಿದೆ.

ಗಂಗೂಬಾಯಿ ಕಾಠಿಯಾವಾಡಿ ಚಿತ್ರ ವೀಕ್ಷಿಸಿರುವ ಸಮಂತ ಅವರು ನಟಿ ಆಲಿಯಾ ಭಟ್ ಅವರ ನಟನೆ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನವನ್ನು ಮೆಚ್ಚಿಕೊಂಡಿದ್ದಾರೆ. ಮಾಸ್ಟರ್ ಪೀಸ್ ಎಂದು ಕರೆಯುವ ಮೂಲಕ ಸಮಂತ ಅವರು ಅವರ ನಟನೆಯನ್ನು ಹೊಗಳಿದ್ದಾರೆ. ಇದರ ಬಗ್ಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಬರೆದುಕೊಂಡಿರುವ ಸಮಂತ ಅವರು ಮಾಸ್ಟರ್ ಪೀಸ್ ನಿನ್ನ ಅಭಿನಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಸಿನಿಮಾದಲ್ಲಿ ಅಲಿಯ ಭಟ್ ಹೇಳಿದ ಪ್ರತಿಯೊಂದು ಡೈಲಾಗ್ ಮತ್ತು ಎಕ್ಸ್ಪ್ರೆಶನ್ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೋತ್ತಿದೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

%d bloggers like this: