ನಿನ್ನೆ ವಾಟ್ಸಾಪ್ ಅಲ್ಲಿ ಕಾಣಿಸಿಕೊಂಡ ಸ್ಟೇಟಸ್ ಏನು, ಯಾಕೆ ಅಂತ ಸರಳವಾಗಿ ತಿಳಿಸಿದ್ದೇವೆ ನೋಡಿ

ವಾಟ್ಸಪ್ ತನ್ನ ಬಳಕೆದಾರರಲ್ಲಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದೆ! ಹೌದು ಜಗತ್ತಿನಾದ್ಯಂತ ಬಳಕೆದಾರರು ಇತರರ ನಡುವೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವುದು, ಅಡಿಯೋ, ವೀಡಿಯೋ ಫೈಲ್ ಗಳನ್ನು ವಿನಿಮಯ ಮಾಡಿಕೊಳ್ಳಲು ಪರಿಚಯವಾದ ಉಚಿತ ಸಾಫ್ಟ್ ವೇರ್ ಈ ವಾಟ್ಸಪ್. ಯಾಹೂ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಾನ್ ಕೂಮ್ ಮತ್ತು ಬ್ರೈನ್ ಆಕ್ಟನ್ ಎಂಬ ವ್ಯಕ್ತಿಗಳಿಂದ 2009ರಲ್ಲಿ ಪರಿಚಯವಾದ ಈ ವಾಟ್ಸಪ್, ತನ್ನ ವೈಶಿಷ್ಟ್ಯತೆಯ ಸೇವೆಗಳ ಮುಖಾಂತರ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆಯಿತು. ಇತ್ತೀಚೆಗೆ ವಾಟ್ಸಪ್ ಹಲವು ವರ್ಷಗಳ ನಂತರ ತನ್ನ ನೀತಿ, ನಿಯಮಗಳಲ್ಲಿ ಬದಲಾವಣೆ ಮಾಡುವುದಾಗಿ ಬಳಕೆದಾರರಿಗೆ ತಿಳಿಸಿ, ಅದರಿಂದ ಜಗತ್ತಿನಾದ್ಯಂತ ವಾಟ್ಸಪ್ ಬಳಕೆದಾರರು ಅಸಮಾಧಾನಗೊಂಡು ಆಕ್ರೋಶ ವ್ಯಕ್ತಪಡಿಸಿದರು.

ಹೌದು ವಾಟ್ಸಪ್ ಫೆಬ್ರವರಿ 8ರಿಂದ ನೂತನ ವೈಯಕ್ತಿಕ ಮಾಹಿತಿ ನಿಯಮ ಅನ್ವಯವಾಗುವಂತೆ ನೂತನ ನಿಯಮ ತರುತ್ತಿದೆ, ಅದಕ್ಕೆ ಕಡ್ಡಾಯವಾಗಿ ಬಳಕೆದಾರರು ಒಪ್ಪಿಗೆ ನೀಡಬೇಕು. ಇಲ್ಲವಾದಲ್ಲಿ ಅಂತಹ ಬಳಕೆದಾರರ ವಾಟ್ಸಪ್ ಖಾತೆಯನ್ನು ನಿಷ್ಕ್ರಿಯ ಗೊಳಿಸಲಾಗುತ್ತದೆ ಎಂದು ವಾಟ್ಸಪ್ ತಿಳಿಸಿತ್ತು. ಇದೇ ಹಿನ್ನೆಲೆಯಲ್ಲಿ ವಾಟ್ಸಪ್ ಅಸಂಖ್ಯಾತ ಬಳಕೆದಾರರು ಈ ನಿರ್ಧಾರದ ಬಗ್ಗೆ ಕೆಂಡಕಾರಿದ್ದರು. ಈ ಹೊಸ ನಿಯಮದಿಂದಾಗಿ ನಮ್ಮ ವೈಯಕ್ತಿಕ ಮಾಹಿತಿ ಸೋರಿಕೆ ಆಗುತ್ತವೆ ಎಂದು ಅಸಂಖ್ಯಾತ ಬಳಕೆದಾರರು ವಾಟ್ಸಪ್ ಅನ್ನು ಅನ್ ಇನ್ ಸ್ಟಾಲ್ ಮಾಡಿ, ಸಿಗ್ನಲ್ ಮತ್ತು ಟೆಲಿಗ್ರಾಮ್ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಂಡಿದ್ದರು. ಇದರಿಂದ ಎಚ್ಚೆತ್ತ ವಾಟ್ಸಪ್ ಸಂಸ್ಥೆ ತನ್ನ ನಿರ್ಧಾರವನ್ನು ನಿನ್ನೆ ವಾಪಸ್ ಪಡೆದು, ನಾವು ಫೆಬ್ರವರಿಯಿಂದ ಹೊಸ ನಿಯಮವನ್ನು ಜಾರಿಗೆ ತರುತ್ತಿಲ್ಲ, ಜೊತೆಗೆ ನಾವು ಯಾವುದೇ ಬಳಕೆದಾರರ ವಾಟ್ಸಪ್ ಖಾತೆಯನ್ನು ನಿಷ್ಕ್ರೀಯ ಗೊಳಿಸುವುದಿಲ್ಲ ಎಂದು ತಿಳಿಸಿದೆ.

ಇನ್ನು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಫೇಸ್ ಬುಕ್ ನೊಂದಿಗೆ ಹಂಚಿಕೆ ಮಾಡಿಕೊಳ್ಳುತ್ತೇವೆ ಎಂಬುದು ಅಪ್ಪಟ ಸುಳ್ಳು ಸುದ್ದಿಯಾಗಿದೆ. ಈ ವಿಚಾರದ ಬಗ್ಗೆ ನಾವು ಮೇ 15ರ ನಂತರ ಚಿಂತನೆ ನಡೆಸುತ್ತೇವೆ ಎನ್ನುವುದರ ಜೊತೆಗೆ ತನ್ನ ಬಳಕೆದಾರರ ವಿಶ್ವಾಸವನ್ನು ಮತ್ತೆ ಗಳಿಸಲು ವಾಟ್ಸಪ್ ಹೊಸದೊಂದು ಅಪ್ಡೇಟ್ಸ್ ನೀಡಿದೆ. ಹೌದು ಈ ಹೊಸ ಅಪ್ಡೇಟ್ಸ್ ಅಲ್ಲಿ ಪ್ರತಿಯೊಬ್ಬ ಬಳಕೆದಾರರ ವಾಟ್ಸಪ್ ನಲ್ಲಿ ವಾಟ್ಸಪ್ ತನ್ನ ಸ್ಟೇಟಸ್ ಸೃಷ್ಠಿಸಿಕೊಂಡು ಅದರಲ್ಲಿ ನಾಲ್ಕು ರೀತಿಯ ವಿಚಾರವನ್ನು ತಿಳಿಸುತ್ತಿದೆ. ಮೊದಲನೇಯದಾಗಿ ಬಳಕೆದಾರರ ಕಾಂಟ್ಯಾಕ್ಟ್ ಸೇರಿ ಇನ್ನಿತರ ಯಾವುದೇ ಮಾಹಿತಿಯನ್ನು ನಾವು ಫೇಸ್ ಬುಕ್ ಜೊತೆಗೆ ಹಂಚಿಕೊಳ್ಳುವುದಿಲ್ಲ.

ನಿಮ್ಮ ಖಾಸಗಿ ಬದುಕನ್ನು ನಾವು ಗೌರವಿಸುತ್ತೇವೆ ಮತ್ತು ಅದಕ್ಕೆ ಬೆಲೆ ಕೊಡುತ್ತೇವೆ, ನಿಮ್ಮ ವೈಯಕ್ತಿಕ ಸಂಭಾಷಣೆಗಳು ಆರಂಭದಿಂದ ಅಂತಿಮವರೆಗೆ ಎನ್ ಕ್ರಿಪ್ಟ್ ಮಾಡಲಾಗಿರುವುದರಿಂದ ಅದನ್ನು ವಾಟ್ಸಪ್ ಓದಲಾಗದು ಮತ್ತು ಕೇಳಲಾಗದು. ನೀವು ಹಂಚಿಕೆ ಮಾಡಲಾದ ಸ್ಥಳವನ್ನು ಕೂಡ ವಾಟ್ಸಪ್ ನೋಡಲಾಗದು, ನಿಮ್ಮ ಸಂಪರ್ಕ ಸಂಖ್ಯೆಗಳನ್ನು ವಾಟ್ಸಪ್ ಫೇಸ್ ಬುಕ್ ನೊಂದಿಗೆ ಯಾವುದೇ ರೀತಿಯಲ್ಲಿ ಹಂಚಿಕೆ ಮಾಡುವುದಿಲ್ಲ, ನಾವು ಸಂಪೂರ್ಣವಾಗಿ ನಿಮ್ಮ ಗೌಪ್ಯತೆಯನ್ನು ಕಾಪಾಡುತ್ತೇವೆ ಎಂದು ಈ ರೀತಿಯಾದ ನಾಲ್ಕು ಸ್ಟೇಟಸ್ ಅನ್ನು ಹಂಚಿಕೊಂಡಿದೆ. ವಾಟ್ಸಪ್ ತನ್ನ ಸ್ಟೇಟಸ್ ಮುಖಾಂತರ ನಮ್ಮನ್ನು ನಂಬಿ ಪ್ಲೀಸ್, ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಪರಿ ಪರಿಯಾಗಿ ಬೇಡಿಕೊಂಡು ಮತ್ತೆ ತನ್ನ ಬಳಕೆದಾರರ ವಿಶ್ವಾಸರ್ಹತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ತಮ್ಮ ವಾಟ್ಸಾಪ್ ಅಲ್ಲಿ ನಾವು ಮಾಡುವ ಖಾಸಗಿ ಮೆಸೇಜುಗಳು ಸೋರಿಕೆಯಾಗುತ್ತವೆ ಎಂದು ಭಯ ಬಿದ್ದಿದ್ದ ಬಳಕೆದಾರರಿಗೆ ಸ್ವಲ್ಪ ನಿರಾಳ ಆಗಿದ್ದು ಕಾದುನೋಡಬೇಕಾಗಿದೆ. ಈ ವಾಟ್ಸಾಪ್ ಹೊಸ ಪಾಲಿಸಿ ಬಗ್ಗೆ ಇನ್ನು ಸರಳವಾಗಿ ಹೇಳಬೇಕಂದರೆ, ನೀವು ನಿಮ್ಮ ಸ್ನೇಹಿತನೊಂದಿಗೆ ವಾಟ್ಸಾಪ್ ಅಲ್ಲಿ ಒಂದು ಬೈಕ್ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮಾತನಾಡಿದರೆ ಸಾಕು! ನೀವು ಫೇಸ್ಬುಕ್ ತೆಗೆದ ತಕ್ಷಣ ಬೈಕ್ ಜಾಹಿರಾತುಗಳು ಕಾಣಿಸಿಕೊಳ್ಳುತ್ತವೆ. ಇದರರ್ಥ ನೀವು ನಿಮ್ಮ ಗೆಳೆಯನೊಂದಿಗೆ ಮಾತನಾಡಿದ ಸುದ್ದಿ ಗುಪ್ತಾವಾಗಿರುವುದಿಲ್ಲ. ಈಗ ವಾಟ್ಸಾಪ್ ಸಂಸ್ಥೆ ನಿಮ್ಮ ಸಂದೇಶಗಳು ಗುಪ್ತವಾಗಿರುತ್ತವೆ ಎಂದು ಹೇಳಿ ಸ್ವಲ್ಪ ನಿರಾಳ ತಂದಿದೆ.

%d bloggers like this: