ನಿನ್ನೆಯ ಟೆಸ್ಟ್ ಗೆದ್ದಿದ್ದಕ್ಕೆ ಇಡೀ ಭಾರತ ಕುಣಿದು ಕುಪ್ಪಳಿಸಿದ್ದು ಈ ಒಂದು ಕಾರಣಕ್ಕಾಗಿ

ಗಬ್ಬಾದಲ್ಲಿ ಭಾರತತಂಡದ ಯುವ ಪಡೆ ಆಟ ನೋಡಿ ತಬ್ಬಿಬ್ಬಾದ ಕಾಂಗರೂ ಪಡೆ! ಆಸೀಸ್ನ 32 ವರ್ಷಗಳ ನಿರಂತರ ನಾಗಾಲೋಟಕ್ಕೆ ಫುಲ್ ಸ್ಟಾಪ್. ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ನಾಲ್ಕನೇಯ ಪಂದ್ಯದಲ್ಲಿ ಭಾರತ ಟೆಸ್ಟ್ ಸರಣಿಯನ್ನ ತನ್ನ ವಶಮಾಡಿಕೊಳ್ಳುವ ಮೂಲಕ ಚರಿತ್ರೆ ಸೃಷ್ಠಿ ಮಾಡಿದೆ. ಕ್ರಿಕೆಟ್ ನಲ್ಲಿ ಬಲಿಷ್ಠ ತಂಡವಾದ ಆಸೀಸ್ ಪಡೆಯು ಕಳೆದ ಮೂರು ದಶಕಗಳಿಂದ ಗಬ್ಬಾ ಕ್ರೀಡಾಂಗಣದಲ್ಲಿ ಸೋತಿದ್ದೆ ಇಲ್ಲ, ನಿರಂತರವಾಗಿ ಗೆದ್ದುಕೊಂಡು ಆಸೀಸ್ ಗಬ್ಬಾ ಸ್ಟೇಡಿಯಂ ಕೋಟೆ ನಮ್ಮದೇ ಎಂದು ಬಿಂಬಿಸಿಕೊಂಡಿತ್ತು, ಆದರೆ ಆ ಕೋಟೆಯನ್ನು ಇಂದು ಭಾರತ ತಂಡದ ಯುವ ಆಟಗಾರರು ಭೇದಿಸಿ ಅಮೋಘ ವಿಜಯ ಸಾಧಿಸಿದ್ದಾರೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ್ದು ಈ ಪಂದ್ಯಗಳಲ್ಲಿ ಅನುಭವ ಇರುವ ಆಟಗಾರರು ಆಟವಾಡಿಲ್ಲ, ಇದು ಸಿರಾಜ್, ನಟರಾಜನ್ ಶುಬ್ಮನ್ ಗಿಲ್, ರಿಷಭ್ ಪಂತ್ ನಂತಹ ಯಂಗ್ಸ್ಟರ್ ಗಳಿಗೆ ವರದಾನವಾಗಿದೆ. ಸಿಕ್ಕ ಅವಕಾಶ ವನ್ನು ಸರಿಯಾಗಿ ಬಳಸಿಕೊಂಡ ಈ ಯುವ ಆಟಗಾರರು ಬ್ಯಾಟಿಂಗ್ ನಲ್ಲಿ ರನ್ ಬ್ಲಾಸ್ಟ್ ಮಾಡಿದ್ದಾರೆ.

ನಾಲ್ಕು ಪಂದ್ಯಗಳ ಪೈಕಿ ಒಂದು ಪಂದ್ಯ ಗೆದ್ದು ಆಸೀಸ್ ಸರಣಿಯಿಂದ ಪರಾಭವಗೊಂಡರೆ, ಭಾರತ ಎರಡು ಪಂದ್ಯಗೆದ್ದು ಟೆಸ್ಟ್ ಸರಣಿಯನ್ನು 2:1 ರಲ್ಲಿ ತನ್ನ ವಶಮಾಡಿಕೊಂಡು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ವೇಗಿ ಬೌಲರ್ ಮೊಹಮ್ಮದ್ ಸಿರಾಜ್ ನನ್ನು ಚೈಲ್ಡ್ ಮನೆ ಸೇರ್ಕೋ ಎಂಬಂತೆ ಅಪಹಾಸ್ಯ ಮಾಡಿದ ಆಸೀಸ್ ತಂಡಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಬೌಲಿಂಗ್ ಮಾಡಿ ಸಿರಾಜ್ ಸೇಡು ತೀರಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಭಾರತದ ಯುವ ಪಡೆ ಈ ಟೆಸ್ಟ್ ಸರಣಿ ಗೆದ್ದಿರುವುದಕ್ಕೆ ಇಡೀ ದೇಶವೇ ಹಾಡಿ ಹೊಗಳುತ್ತಿದೆ. ಪ್ರಧಾನಿ ಮೋದಿಯವರು ಸರಣಿಯುದ್ದಕ್ಕೂ ಭಾರತ ತಂಡ ತೋರಿದ ಉತ್ಸಾಹ, ಛಲ ಶಕ್ತಿ ಅಮೋಘವಾದ್ದು, ಈ ಗೆಲುವನ್ನು ನಾವು ಸಂಭ್ರಮಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಬಾಲಿವುಡ್ ದಿಗ್ಗಜರು ಈ ಗೆಲುವನ್ನು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದಾರೆ. ವಾಹ್ ಎಂತ ಅದ್ಭುತ ಆಟ ಭಾರತ ತಂಡದ ಬಗ್ಗೆ ನನಗೆ ಹೆಮ್ಮೆಎನಿಸುತ್ತಿದೆ ಎಂದು ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ನಟಿ ಪ್ರೀತಿ ಜಿಂಟಾ ಸಹ ಮೂರು ದಶಕಗಳಿಂದ ತನ್ನ ತವರಿನಲ್ಲಿ ಯಾರಿಗೂ ಗೆಲುವಿಗೆ ಅವಕಾಶ ಕೊಡದ ಆಸೀಸ್ ತಂಡಕ್ಕೆ ಭಾರತ ಬಿಸಿಮುಟ್ಟಿಸಿದೆ. ಇದರಿಂದ ಭಾರತ ತಂಡ ಮತ್ತೆ ನಂಬರ್ ಒನ್ ಸ್ದಾನಕ್ಕೇರಿದೆ ಇದರಿಂದ ನನಗೆ ಸಂತೋಷವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ದೇಹಕ್ಕೆ ಗಾಯಮಾಡುವ ಬಾಲ್ ಗಳು, ವ್ಯಕ್ತಿನೋಡಿ ಜನಾಂಗೀಯ ನಿಂದನೆ ಮಾಡಿದ ನೋವುಗಳು ಇದರ ನಡುವೆ ಈ ಐತಿಹಾಸಿಕ ಗೆಲುವು ಅದ್ಭುತ, ಭಾರತವನ್ನು ಕೀಳರಿಮೆಯಿಂದ ಇಂದೆಂದೂ ನೋಡಬಾರದು ಎಂದು ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಅಡಿಲೇಡ್ ನಲ್ಲಿ ನಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ತೋರಿದೆಲ್ಲರು ಈ ಗೆಲುವನ್ನು ನೋಡಿ.ನನ್ನ ಯುವ ಆಟಗಾರರೆಲ್ಲರಿಗೂ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಈ ಟೆಸ್ಪ್ ಸರಣಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಅಜಿಂಕ್ಯೆ ರಹಾನೆ ಸಮರ್ಥವಾಗಿ ನಿಭಾಯಿಸಿ ಅನನುಭವಿ ಆಟಗಾರರನ್ನು ಬಳಸಿಕೊಂಡ ರೀತಿ ನಿಜಕ್ಕೂ ಪ್ರಶಂಸನೀಯ, ಸಿಕ್ಕ ಅವಕಾಶವನ್ನು ಬಳಸಿಕೊಂಡ ಯಂಗ್ಸ್ಟರ್ ಗಳಾದ ಸಿರಾಜ್, ರಿಷಬ್ ಪಂತ್, ಶುಬ್ಮನ್ ಗಿಲ್ ತಮ್ಮ ಸಾಮರ್ಥ್ಯ ಏನೆಂಬುದನ್ನು ಪ್ರದರ್ಶನ ಮಾಡಿದ್ದಾರೆ. ಸಿರಾಜ್ ತನ್ನ ತಂದೆಯ ಸಾವಿನ ನೋವಿನಲ್ಲೂ ಸಹ ಈ ಟೆಸ್ಟ್ ಸರಣಿಯಲ್ಲಿ 13 ವಿಕೆಟ್ ಗಳಿಸುವ ಮೂಲಕ ಅತ್ಯುತ್ತಮ ಬೌಲರ್ ಎಂಬ ಖ್ಯಾತಿಗಳಿಸಿದ್ದಾರೆ. ಪಂದ್ಯ ಶ್ರೆಷ್ಠ ರಿಷಭ್ ಪಂಥ್, ಸರಣಿ ಶ್ರೇಷ್ಠ ಪುರಸ್ಕಾರಕ್ಕೆ ಪ್ಯಾಟ್ ಕಮಿನ್ಸ್ ಆಯ್ಕೆ ಅಗಿದ್ದಾರೆ.

ಭಾರತದ ಈ ಐತಿಹಾಸಿಕ ಗೆಲುವಿನಿಂದಾಗಿ ಭಾರತ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.ಈ ಟೆಸ್ಟ್ ಐತಿಹಾಸಿಕ ಗೆಲುವಾಗಲು ಮತ್ತು ವಿಶ್ವಕಪ್ ಗೆದ್ದಿದ್ದಷ್ಟೇ ಸಂಭ್ರಮ ಮನೆ ಮಾಡಲು ಹಲವು ಕಾರಣಗಳಿವೆ, ಗಾಯದ ಸಮಸ್ಯೆಯಿಂದ ಹಿರಿಯ ಅನುಭವ ಹೊಂದಿದ ಆಟಗಾರರ ಗೈರು, ಜನಾಂಗೀಯ ನಿಂದನೆ, ಗಬ್ಬಾ ಸ್ಟೇಡಿಯಂನಲ್ಲಿ ಬರೋಬ್ಬರಿ 32 ವರ್ಷಗಳ ನಂತರ ಭಾರತ ಗೆದ್ದಿರುವುದು ಈ ಎಲ್ಲಾ ಅಂಶಗಳಿಂದ ಭಾರತ ಈ ಟೆಸ್ಟ್ ಸರಣಿ ಗೆದ್ದಿರುವುದಕ್ಕೆ ಸಂಭ್ರಮಾಚರಣಿ ಮನೆ ಮಾಡಿದೆ. ಆಸ್ಟೇಲಿಯಾ ಆಟಗಾರರು ಮೈದಾನದಲ್ಲೇ ಭಾರತ ತಂಡದ ಆಟಗಾರರನ್ನು ಅಣಕಿಸಿದ್ದರು ಅದಕ್ಕಾಗಿ ಈ ಪಂದ್ಯ ಭಾರತಕ್ಕೆ ಗೆಲ್ಲಲೇಬೇಕಾಗಿತ್ತು, ಹಾಗೆಯೇ ಗೆದ್ದು ಆಸ್ಟ್ರೇಲಿಯಾ ತಂಡದ ಸೊಕ್ಕನ್ನು ಮುರಿದರು.

%d bloggers like this: