ನಿರೀಕ್ಷೆಗಳನ್ನು ಇಮ್ಮಡಿಗೊಳಿಸಿದ ಹೊಸ ಚಿತ್ರ, ಹೊಯ್ಸಳನಾಗಿ ಬರುತ್ತಿದ್ದಾರೆ ಡಾಲಿ ಧನಂಜಯ ಅವರು

ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ನಾಯಕ ನಟರಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟ ಧನಂಜಯ್ ಅವರು ಯಶಸ್ಸಿಗಾಗಿ ಅನೇಕ ಏಳು ಬೀಳು, ಅವಮಾನ ಅನುಭವಿಸಿಕೊಂಡು ಇಂದು ತಮ್ಮ ಪ್ರತಿಭೆಯ ಮೂಲಕ ನಟ ರಾಕ್ಷಸನಾಗಿ ಸ್ಯಾಂಡಲ್ ವುಡ್ ಬೇಡಿಕೆಯ ನಟಯಾಗಿ ಮಿಂಚುತ್ತಿದ್ದಾರೆ. ಆರಂಭದಲ್ಲಿ ನಟಿಸಿದ ಬಹುತೇಕ ಸಿನಿಮಾಗಳು ಯಶಸ್ಸು ಕಾಣದೆ ಸೋಲುಂಡಾಗ ಎದೆ ಗುಂದದೆ ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಇಂದು ತಮ್ಮ ಸಿನಿ ವೃತ್ತಿ ಬದುಕಿನಲ್ಲಿ ಯಶಸ್ವಿ ನಾಯಕ ನಟರಾಗಿ ಸಾಗುತ್ತಿದ್ದಾರೆ. ನಟ ಧನಂಜಯ್ ಅವರು ಕಳೆದ ವರ್ಷ 2021ರಲ್ಲಿ ನಟಿಸಿದ ಯುವರತ್ನ, ಸಲಗ, ರತ್ನನ್ ಪ್ರಪಂಚ, ಬಡವ ರಾಸ್ಕಲ್ ಹೀಗೆ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ.

ಇದೀಗ ನಟ ಧನಂಜಯ್ ಅವರ ಅಭಿನಯದ ಇಪ್ಪತ್ತೈದನೇ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದ ಶೀರ್ಷಿಕೆ ಹೊಯ್ಸಳ. ಈಗಾಗಲೇ ದುನಿಯಾ ವಿಜಯ್ ಅವರು ನಟಿಸಿ, ನಿರ್ದೇಶನ ಮಾಡಿದ ಸಲಗ ಚಿತ್ರದಲ್ಲಿ ಧನಂಜಯ್ ಸಾಮ್ರಾಟ್ ಎಂಬ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಈ ಹೊಯ್ಸಳ ಚಿತ್ರದ ಪೋಸ್ಟರ್ ನಲ್ಲಿಯೂ ಕೂಡ ಧನಂಜಯ್ ಅವರು ಪೊಲೀಸ್ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಖಾಕಿ ತೊಟ್ಟಿರುವ ಪೋಸ್ಟರ್ ಸಖತ್ ಮಾಸ್ ಆಗಿದೆ.

ಇನ್ನು ಈ ಹೊಯ್ಸಳ ಚಿತ್ರವನ್ನು ಹೊಂಬಾಳೆ ಫಿಲಂಸ್ ಅರ್ಪಿಸುತ್ತಿದ್ದು, ಯೋಗಿ ಜಿ.ರಾಜ್ ಮತ್ತು ಕಾರ್ತಿಕ್ ಬಂಡವಾಳ ಹೂಡುತ್ತಿದ್ದಾರೆ. ಇನ್ನು ಡಾಲಿ ಧನಂಜಯ್ ಅವರ 25ನೇ ಸಿನಿಮಾಗೆ ವಿಜಯ್.ಎನ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಥಮನ್ ರಾಗ ಸಂಯೋಜನೆ ಮಾಡಲಿದ್ದಾರಂತೆ. ಈ ಸಿನಿಮಾ ಧನಂಜಯ್ ಅವರ 25ಸಿನಿಮಾ ಆಗಿರುವುದರಿಂದ ಹೊಯ್ಸಳ ಚಿತ್ರದ ಬಗ್ಗೆ ಧನಂಜಯ್ ಅವರಿಗೂ ಕೂಡ ನಿರೀಕ್ಷೆ ಇದೆಯಂತೆ. ಇತ್ತ ಧನಂಜಯ್ ಅವರು ನಟಿಸುವುದರ ಜೊತೆಗೆ ಮೊಟ್ಟ ಮೊದಲ ಬಾರಿಗೆ ತಾವೇ ಬಂಡವಾಳ ಹೂಡಿದ ಬಡವ ರಾಸ್ಕಲ್ ಸಿನಿಮಾ ಉತ್ತಮ ಮೆಚ್ಚುಗೆ ಪಡೆದುಕೊಂಡು ಉತ್ತಮ ಗಳಿಕೆ ಮಾಡಿದೆ.

%d bloggers like this: