ನಿರ್ಮಾಪಕ ರಾಮು ಅವರ ಕನಸನ್ನು ನನಸು ಮಾಡಲು ಸಜ್ಜಾದ ಪತ್ನಿ ಮಾಲಾಶ್ರಿ ಅವರು

ಚಂದನವನದ ಕನಸಿನ ರಾಣಿ ಮಾಲಾಶ್ರೀ ಪುತ್ರಿಗೆ ತನ್ನ ಮಗನ ಚಿತ್ರಕ್ಕೆ ಹೀರೋಯಿನ್ ಆಫರ್ ಕೊಟ್ಟ ಕ್ರೇಜಿ಼ಸ್ಟಾರ್, ಕನ್ನಡ ಚಿತ್ರರಂಗದ ಅನೇಕ ದಿಗ್ಗಜ ನಟ-ನಟಿಯರ ಮಕ್ಕಳು ಸ್ಯಾಂಡಲ್ ವುಡ್ಗೆ ಎಂಟ್ರಿ ಯಾಗಿದ್ದಾರೆ‌. ಅವರಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರು ಯಶಸ್ಸು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅಂತೆಯೇ ಕನಸುಗಾರ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ಇಬ್ಬರು ಮಕ್ಕಳು ಮನೋರಂಜನ್ ಮತ್ತು ವಿಕ್ರಂ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ‌. ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಹೆಸರಾದ ನಿರ್ಮಾಪಕ ರಾಮು ಅವರು ನಮ್ಮನ್ನಗಲಿದ್ದಾರೆ. ಅವರ ನಿಧನ ಹೊಂದುವ ಮುನ್ನ ಅರ್ಜುನ್ ಗೌಡ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಈ ಚಿತ್ರದಲ್ಲಿ ನಾಯಕ ನಟರಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌. ಪ್ರಜ್ವಲ್ ದೇವರಾಜ್ ಅವರಿಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ನಿರ್ಮಾಪಕ ರಾಮು ಅವರ ನಿಧನದಿಂದಾಗಿ ಈ ಅರ್ಜುನ್ ಗೌಡ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳು ನಿಂತಿದ್ದವು‌. ತದ ನಂತರ ಈ ಅರ್ಜುನ್ ಗೌಡ ಚಿತ್ರದ ಬಿಡುಗಡೆಯ ಜವಾಬ್ದಾರಿಯನ್ನು ರಾಮು ಅವರ ಧರ್ಮಪತ್ನಿ ನಟಿ ಮಾಲಾಶ್ರೀ ಅವರು ತೆಗೆದುಕೊಂಡು ಅದ್ದೂರಿಯಾಗಿ ರಾಜ್ಯದ್ಯಂತ ಕಳೆದ ಡಿಸೆಂಬರ್ 31 ರಂದ ರಿಲೀಸ್ ಆಗಿ ಯಶಸ್ವಿಯಾಗಿ ಸಾಗುತ್ತಿದೆ. ಇದಕ್ಕೂ ಮುನ್ನ ಅರ್ಜುನ್ ಗೌಡ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವೊಂದನ್ನ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರವಿ ಚಂದ್ರನ್, ಉಪೇಂದ್ರ, ಗಣೇಶ್, ಸಾಧುಕೋಕಿಲ ಸೇರಿದಂತೆ ಚಿತ್ರದ ನಾಯಕ ಪ್ರಜ್ವಲ್ ಮತ್ತು ನಾಯಕಿ ಪ್ರಿಯಾಂಕಾ ತಿಮ್ಮೇಶ್ ಸೇರಿದಂತೆ ಚಿತ್ರರಂಗ ಅನೇಕ ಹಿರಿಯ ಕಲಾವಿದರು, ಗಣ್ಯರು ಪಾಲ್ಗೊಂಡಿದ್ದರು‌. ಈ ಕಾರ್ಯಕ್ರಮದಲ್ಲಿ ದಿವಂಗತ ನಿರ್ಮಾಪಕ ರಾಮು ಅವರನ್ನ ನೆನೆದು ಮಾಲಾಶ್ರೀ ಅವರಿಗೆ ಎಲ್ಲರು ಧೈರ್ಯ ಹೇಳಿ ಆತ್ಮವಿಶ್ವಾಸ ತುಂಬಿದರು‌. ಇದೇ ಸಂಧರ್ಭದಲ್ಲಿ ಮಾಲಾಶ್ರೀ ತಮ್ಮ ಪತಿ ರಾಮು ಅವರ ಕನಸನ್ನ ಬಹಿರಂಗಗೊಳಿಸಿದರು‌.

ನಿರ್ಮಾಪಕ ರಾಮು ಅವರಿಗೆ ತಮ್ಮಿಬ್ಬರ ಮಕ್ಕಳನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಆಸೆ ಇತ್ತಂತೆ. ಹಾಗಾಗಿಯೇ ಅವರು ತಮ್ಮ ಮಗ ಆರ್ಯನ್ ಮತ್ತು ಮಗಳು ಅನನ್ಯ ಇಬ್ರುನ್ನು ಬಣ್ಣದ ಲೋಕಕ್ಕೆ ಎಂಟ್ರಿ ಮಾಡಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದರಂತೆ. ಇನ್ನು ನಟಿ ಮಾಲಾಶ್ರೀ ಅವರು ನಂಜುಂಡಿ ಕಲ್ಯಾಣ ಚಿತ್ರದಲ್ಲಿ ಇರುವಂತೆ ಪುತ್ರಿ ಅನನ್ಯ ಕೂಡ ಹಾಗೇ ಇದ್ದಾರೆ ನನ್ನ ಮಗನ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸು ಎಂದು ರವಿಚಂದ್ರನ್ ಅವರು ವೇದಿಕೆಯ ಮೇಲೆಯೇ ಅನನ್ಯಾಗೆ ಆಫರ್ ನೀಡಿದರು.

%d bloggers like this: