ನಿವೃತ್ತಿಯಾಗಿ ಇಪ್ಪತ್ತು ವರ್ಷಗಳೇ ಕಳೆದರೂ ಇವನೇ ವಿಶ್ವದ ಶ್ರೀಮಂತ ಅಥ್ಲೀಟ

ಪ್ರತಿಭೆ ಎಂಬುದು ಒಂದಿದ್ದರೆ ಸಾಕು ಹೆಸರು ಗೌರವ ಜೊತೆಗೆ ದುಡ್ಡು ಕೂಡ ಮನೆಯ ಬಾಗಿಲಿಗೆ ಬಂದು ನಿಲ್ಲುತ್ತದೆ. ಅದರಲ್ಲೂ ವಿಶ್ವದಲ್ಲಿ ಹಲವು ದೇಶಗಳನ್ನು ಇಷ್ಟಪಡುವ ಕ್ರೀಡೆಗಳಲ್ಲಿ ಮಿಂಚಿದರೆ ಸಾಕು ಅದರ ಮಟ್ಟ ತುಂಬಾ ಎತ್ತರದ್ದಾರುತ್ತದೆ. ಹೌದು ವಿಶ್ವದಲ್ಲಿ ಕೆಲವು ಕ್ರೀಡಾಪಟುಗಳ ಆಸ್ತಿಯ ಮೌಲ್ಯವನ್ನು ಕೇಳಿದರೆ ನೀವು ನಿಜಕ್ಕೂ ಗಾಬರಿಯಾಗುತ್ತೀರಿ. ಆದರೆ ಇಲ್ಲೊಬ್ಬ ವಿಶ್ವ ಶ್ರೇಷ್ಠ ಆಟಗಾರ ನಿವೃತ್ತಿಯಾಗಿ ಬರೋಬ್ಬರಿ ಎರಡು ದಶಕಗಳೇ ಕಳೆದಿವೆ. ಆದರೂ ಕೂಡ ಇತ್ತೀಚೆಗೆ ಬಿಡುಗಡೆಯಾದ ವಿಶ್ವ ಶ್ರೀಮಂತ ಅಥ್ಲೀಟ್ ಗಳ ಪಟ್ಟಿಯಲ್ಲಿ ಅವರೇ ಮೊದಲ ಸ್ಥಾನದಲ್ಲಿದ್ದಾರೆ. ಹೌದು ಅವರು ಬೇರೆ ಯಾರೂ ಅಲ್ಲ ಅಮೆರಿಕದ ಖ್ಯಾತ ಬಾಸ್ಕೆಟ್ ಬಾಲ್ ದಂತಕತೆ ಮೈಕಲ್ ಜೋರ್ಡನ್.

ಹೌದು ಮೈಕಲ್ ಜೋರ್ಡನ್ ನಿವೃತ್ತಿಯನ್ನು ಪಡೆದು 20 ವರ್ಷಗಳು ಕಳೆದರೂ ಅವರು ಇನ್ನು ಕೂಡ ವಿಶ್ವದ ಶ್ರೀಮಂತ ಆಟಗಾರರಾಗಿದ್ದಾರೆ. ಅವರ ಆಸ್ತಿಯ ಒಟ್ಟು ಮೌಲ್ಯ ಮೌಲ್ಯ 1.6 ಬಿಲಿಯನ್ ಅಮೆರಿಕನ್ ಡಾಲರ್. ಅಂದರೆ ಬರೋಬ್ಬರಿ ಹನ್ನೊಂದು ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು. ಸದ್ಯದ ಆಟಗಾರರಲ್ಲಿ ವಿಶ್ವದಲ್ಲಿ ಶ್ರೇಷ್ಠ ಕ್ರೀಡಾಪಟುಗಳು ರೊನಾಲ್ಡೋ, ಮೆಸ್ಸಿ, ಮೇವೆದರ್, ರೋಜರ್ ಫೆಡೆರರ್ ನಂತಹ ಆಟಗಾರರು ಕೋಟಿಕೋಟಿ ಗಳಿಸುತ್ತಿದ್ದರು ಜೋರ್ಡನ್ ಹತ್ತಿರ ಬರಲು ಕೂಡ ಸಾಧ್ಯವಾಗಿಲ್ಲ. ಬಾಸ್ಕೆಟ್ ಬಾಲ್ ಆಟದಲ್ಲಿ ಮೈಕಲ್ ಜೋರ್ಡನ್ ಅವರು ಅಮೆರಿಕ ದೇಶದ ಜೊತೆಗೆ ಚಿಕಾಗೋ ಬುಲ್ಸ್ ಮತ್ತು ವಾಷಿಂಗ್ಟನ್ ವಿಜರ್ಡ್ಸ್ ಎಂಬ ತಂಡಗಳನ್ನು ಪ್ರತಿನಿಧಿಸಿದ್ದರು. 19 ವರ್ಷಗಳ ಕಾಲ ಬಾಸ್ಕೆಟ್ ಬಾಲ್ ಜಗತ್ತಿಗೆ ಏಕಮೇವ ಚಕ್ರಾಧಿಪತಿ ಆಗಿ ಮೆರೆದಿದ್ದರು.

%d bloggers like this: