ನೀವು ಕೋವಿಡ್19 ಪರೀಕ್ಷೆಗೆ ಒಳಪಟ್ಟಿದ್ದರೆ ದಯವಿಟ್ಟು ಈ ನಿಯಮಗಳನ್ನು ತಪ್ಪದೇ ಪಾಲಿಸಿ

ದಿನೇದಿನೇ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ಪತ್ತೆ ಪರೀಕ್ಷೆಯನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ. ಒಂದು ವೇಳೆ ನೀವು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರೆ ಅವಶ್ಯವಾಗಿ ಪಾಲಿಸಲೇಬೇಕಾದ ನಿಯಮಗಳನ್ನು ಕರ್ನಾಟಕ ರಾಜ್ಯ ಆರೋಗ್ಯ ಸಂಸ್ಥೆಯ ಇತ್ತೀಚಿಗೆ ಪ್ರಕಟಪಡಿಸಿದೆ. ಹೌದು ವ್ಯಾಪಕವಾಗಿ ಹರಡುತ್ತಿರುವ ಸೋಂಕಿಗೆ ನಾವು ಅಂತ್ಯ ಹಾಡಬೇಕಾದರೆ ಇದನ್ನು ಪಾಲಿಸುವುದು ಅವಶ್ಯವಾಗಿದೆ. ಬನ್ನಿ ಹಾಗಿದ್ದರೆ ಈ ಕೋರೋನಾ ಪರೀಕ್ಷೆಗೆ ಒಳಪಟ್ಟವರು ಯಾವ ನಿಯಮಗಳನ್ನು ಅವಶ್ಯವಾಗಿ ಪಾಲಿಸಲೇಬೇಕೆಂದು ತಿಳಿಯೋಣ. ನಿಮ್ಮ ಕೊರೋನಾ ಪರೀಕ್ಷೆಯ ಫಲಿತಾಂಶ ತಿಳಿಯುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರಿ, ಯಾವುದೇ ವ್ಯಕ್ತಿ ಇರಲಿ, ಅವರ ಜೊತೆ ಅವಶ್ಯವಾಗಿ ಅಂತರವನ್ನು ಕಾಪಾಡಿಕೊಳ್ಳಿ.

ನಿಮ್ಮ ಫಲಿತಾಂಶವನ್ನು ವೈಯಕ್ತಿಕವಾಗಿ ನಿಮಗೆ ದೂರವಾಣಿಯ ಮೂಲಕ ತಿಳಿಸಲಾಗುವುದು ಹಾಗಾಗಿ ಯಾವುದೇ ಗೊಂದಲಗಳ ಅವಶ್ಯಕತೆ ಇಲ್ಲ. ಒಂದು ವೇಳೆ ಸೋಂಕು ಇರುವುದು ಧೃಡಪಟ್ಟಲ್ಲಿ ಹೆದರುವ ಅವಶ್ಯಕತೆ ಇಲ್ಲ ಬದಲಾಗಿ ಮನೆಯಲ್ಲಿಯೇ ಸೂಕ್ತ ವೈದ್ಯಕೀಯ ಸಲಹೆಗಳನ್ನು ಪಾಲಿಸುವುದರಿಂದ ಗುಣಮುಖರಾಗುತ್ತೀರಿ. ಸೋಂಕಿನ ಲಕ್ಷಣಗಳು ತೀವ್ರವಾಗಿದ್ದರೆ ಕೋವಿಡ್ ಮೆಡಿಕೇರ್ ಸೆಂಟರ್ ಗೆ ದಾಖಲಾಗಲು ತ್ವರಿತ ವ್ಯವಸ್ಥೆ ಕಲ್ಪಿಸಲಾಗುವುದು. ಮಾಸ್ಕ ಧರಿಸುವುದನ್ನು ಅವಶ್ಯವಾಗಿ ಮಾಡಲೇಬೇಕು. ರಾಜ್ಯ ಆರೋಗ್ಯ ಸಂಸ್ಥೆಯ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಈ ಸೋಂಕು ನಿಮಗೆ ಯಾವುದೇ ರೀತಿಯ ಅಪಾಯವನ್ನು ಮಾಡುವುದಿಲ್ಲ.

%d bloggers like this: