ಕೆಲವೇ ದಿನಗಳ ಹಿಂದೆ ಸ್ಯಾನಿಟೈಸರ್ ಎಂಬುದು ಬಹುತೇಕ ಜನರಿಗೆ ತಿಳಿದೇ ಇರಲಿಲ್ಲ. ಆದರೆ ಈಗ ಹಳ್ಳಿಯ ಅನಕ್ಷರಸ್ಥ ಜನರು ಕೂಡ ಇದರ ಬಳಕೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಹೌದು ಇಡೀ ಜಗತ್ತು ಕೊರೋನಾ ವಿರುದ್ಧ ಹೋರಾಡಲು ಈ ಸ್ಯಾನಿಟೈಸರ್ ಬಹಳ ಸಹಕಾರಿಯಾಗುತ್ತಿದೆ. ಆದರೆ ಸ್ಯಾನಿಟೈಸರ್ ಗೆ ಸಂಬಂಧಿಸಿದ ನಿಮಗೆ ಗೊತ್ತಿಲ್ಲದ ಕೆಲವು ವಿಷಯಗಳ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ ದಯವಿಟ್ಟು ಓದಿ. ಈ ಸ್ಯಾನಿಟೈಸರ್ಗಳಲ್ಲಿ ಶೇಕಡ 70ರಷ್ಟು ಆಲ್ಕೋಹಾಲ್ ಅಂಶವಿದ್ದು ಅದರಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ಗಳನ್ನು ನಾಶಮಾಡುವ ಶಕ್ತಿ ಇರುತ್ತದೆ.
ಆದರೆ ಇದನ್ನು ಹಾಕಿಕೊಂಡವರು ಅದು ಸಂಪೂರ್ಣವಾಗಿ ಆರುವವರೆಗೂ ಕೈಯನ್ನು ಉಜ್ಜಬೇಕು. ಒಂದು ವೇಳೆ ನೀವು ಸಹ ಇದನ್ನು ಬಳಸಿ ಸರಿಯಾಗಿ ಕೈಯನ್ನು ಉಜ್ಜಿಕೊಳ್ಳದೆ ಊಟ ಮಾಡಿದರೆ ಅದಕ್ಕಿಂತ ಅಪಾಯಕಾರಿ ಮತ್ತೊಂದಿಲ್ಲ. ಹೌದು ಇದು ಕೇವಲ ಬಾಹ್ಯ ಬಳಕೆಗೆ ಮಾತ್ರ ಯೋಗ್ಯವಾಗಿದ್ದು ಒಂದು ವೇಳೆ ದೇಹದ ಒಳಕ್ಕೆ ಸೇರಿಕೊಂಡರೆ ತುಂಬಾ ಅಡ್ಡಪರಿಣಾಮಗಳು ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವಶ್ಯಕತೆ ಇದ್ದಾಗ ಮಾತ್ರ ಸ್ಯಾನಿಟೈಸರ್ ಅನ್ನು ಬಳಸಿ. ಆದಷ್ಟು ಸೋಪಿನಿಂದ ಕೈ ತೊಳೆಯುವುದು ಉತ್ತಮ. ಅದರಲ್ಲೂ ಊಟಕ್ಕೆ ಕೂಡೋ ಮುಂಚೆ ಸ್ಯಾನಿಟೈಸರ್ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡಿ.