ಯಶಸ್ವಿ ನೂರು ಸಂಚಿಕೆ ಪೂರೈಸಿ ಸಂಭ್ರಮಾಚರಣೆಯಲ್ಲಿದೆ ನಟ ಚಂದನ್ ಕುಮಾರ್ ನಾಯಕತ್ವದ ಮರಳಿ ಮನಸ್ಸಾಗಿದೆ ಧಾರಾವಾಹಿ ತಂಡ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಮರಳಿ ಮನಸ್ಸಾಗಿದೆ ಧಾರಾವಾಹಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹೌದು ಇತ್ತೀಚೆಗೆ ಕನ್ನಡದ ಅನೇಕ ಧಾರಾವಾಹಿಗಳು ಕನ್ನಡ ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾಗಿವೆ. ಒಂದೆಡೆ ಕನ್ನಡಕ್ಕೆ ಬೇರೆ ಭಾಷೆಯ ಧಾರಾವಾಹಿಗಳು ಡಬ್ ಆಗಿ ಕನ್ನಡದ ಪ್ರಸಿದ್ದ ವಾಹಿನಿಗಳಲ್ಲಿಯೇ ಪ್ರಸಾರ ಆಗುತ್ತಿವೆ. ಇದರ ಪೈಪೋಟಿ ನಡುವೆಯೂ ಕೂಡ ಕನ್ನಡ ಧಾರಾವಾಹಿಗಳು ಕಥೆ, ಮೇಕಿಂಗ್ ಹೀಗೆ ಎಲ್ಲದರಲ್ಲಿಯೂ ಅದ್ದೂರಿಯಾಗಿ ಮೂಡಿ ಬರುವ ಮೂಲಕ ಯಶಸ್ವಿಯಾಗಿ ಮೂಡಿ ಬರುತ್ತಿವೆ.

ಆ ಸಾಲಿನ ಧಾರಾವಾಹಿಗೆ ಇದೀಗ ಮರಳಿ ಮನಸ್ಸಾಗಿದೆ ತ್ರಿಕೋನ ಪ್ರೇಮ ಕಥೆಯ ಧಾರಾವಾಹಿ ಸಹ ಸೇರಿಕೊಂಡಿದೆ. ಕಥಾ ನಾಯಕ ವಿಕ್ರಾಂತ್ ನಾಯಕ್ ಚಂದನ್ ಪ್ರೀತಿಸಿದ ಹುಡುಗಿಯನ್ನೇ ಆತನ ಅಣ್ಣ ಮದುವೆಯಾಗುತ್ತಾನೆ. ಇತ್ತ ತಮ್ಮ ವಿಕ್ರಾಂತ್ ಕೊಟ್ಟ ಮಾತಿಗೆ ಕಟ್ಟುಬಿದ್ದು ಇಷ್ಟ ವಿಲ್ಲದಿದ್ದರು ಮದುವೆ ಆಗುತ್ತಾನೆ. ಒಂದೆಡೆ ಅತ್ತಿಗೆಯಾಗಿ ಮಾಜಿ ಪ್ರೇಯಸಿ. ಇನ್ನೊಂದೆಡೆ ಒಲವಿಲ್ಲದ ಹೆಂಡತಿ. ಇವರಿಬ್ಬರ ನಡುವೆ ಪೊಲೀಸ್ ಅಧಿಕಾರಿಯಾಗಿ ವಿಕ್ರಾಂತ್ ನಾಯಕ್. ಅಣ್ಣನ ಪಾತ್ರದಲ್ಲಿ ವಿನಯ್ ಗೌಡ ಕಾಣಿಸಿಕೊಂಡಿದ್ದು ಆರ್ಮಿ ಪಾತ್ರ ನಿರ್ವಹಿಸುತ್ತಿದ್ದಾರೆ. ಚಂದನ್ ಪತ್ನಿಯ ಪಾತ್ರದಲ್ಲಿ ನಟಿ ದಿವ್ಯಾ ವಾಗುಕರ್ ನಟಿಸುತ್ತಿದ್ದಾರೆ. ಮಾಜಿ ಪ್ರೇಯಸಿ ಇದೀಗ ಅತ್ತಿಗೆಯಾಗಿರುವ ಪಾತ್ರದಲ್ಲಿ ನಟಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ತನ್ನ ಅಣ್ಣನ ಹೆಂಡಿತಿಯಾಗಿ ಕಥಾ ನಾಯಕ ವಿಕ್ರಾಂತ್ ನಾಯಕ್ ನಿಗೆ ಹೀಗೆ ಸಾಗುತ್ತಾ ಮರಳಿ ಮನಸಾಗಿದೆ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿದೆ. ಎಲ್ಲಾ ಧಾರಾವಾಹಿಗಳಲ್ಲಿಯೂ ಆಗುವಂತೆ ಈ ಮರಳಿ ಮನಸ್ಸಾಗಿದೆ ಸೀರಿಯಲ್ ನಲ್ಲಿಯೂ ಕೂಡ ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಕಲಾವಿದರೊಬ್ಬರ ಬದಲಾವಣೆ ಆಗಿತ್ತು. ಚಂದ್ರಲೇಖ ಎಂಬ ಪಾತ್ರಕ್ಕೆ ಹಿರಿಯ ನಟಿ ಮರಿನಾ ಎಂಟ್ರಿಕೊಟ್ಟು ಸುದ್ದಿಯಾಗಿದ್ದರು. ಇದೀಗ ಈ ತ್ರಿಕೋನ ಪ್ರೇಮ ಕಥೆಯ ಎಳೆ ಹೊಂದಿರುವ ಮರಳಿ ಮನಸಾಗಿದೆ ಧಾರಾವಾಹಿಯು ಯಶಸ್ವಿಯಾಗಿ ನೂರು ಸಂಚಿಕೆಗಳನ್ನು ಪೂರೈಸಿದೆ. ಚಂದನ್ ಕುಮಾರ್ ಈ ಧಾರಾವಾಹಿಯ ಮೂಲಕ ಕಿರುತೆರೆಗೆ ರೀ ಎಂಟ್ರಿ ಪಡೆದುಕೊಂಡಿದ್ದರು. ಖಡಕ್ ಪೊಲೀಸ್ ಅಧಿಕಾರಿ ವಿಕ್ರಾಂತ್ ನಾಯಕ್ ಪಾತ್ರದಲ್ಲಿ ನಟ ಚಂದನ್ ಕುಮಾರ್ ಅವರಿಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ.