ಸರಕು ಸೇವಾ ತೆರಿಗೆಯ ಮೊತ್ತ ನಿರಂತರವಾಗಿ ಏರಿಕೆ ಕಂಡು ಭಾರತ ದೇಶದ ಆರ್ಥಿಕತೆಯಲ್ಲಿ ಚೇತರಿಕೆ ಕಾಣುತ್ತಿದೆ. ಕಳೆದೆರಡು ವರ್ಷಗಳಿಂದ ಭಾರತದಲ್ಲಿ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆ ಪಾತಾಳಕ್ಕಿಳಿದಿದ್ದ ಆರ್ಥಿಕತೆ ಇದೀಗ ಮತ್ತೆ ಪುಟಿದೇಳಿದ್ದು ಸರಕು ಮತ್ತು ಸೇವಾ ತೆರಿಗೆಯಲ್ಲಿ ಭಾರಿ ಪ್ರಮಾಣದ ಮೊತ್ತ ಸಂಗ್ರಹವಾಗಿದೆ. ಕಳೆದ 2017 ರಿಂದೀಚೆಗೆ ಸರಕು ಮತ್ತು ಸೇವಾ ತೆರಿಗೆ ನಾಲ್ಕನೇ ಬಾರಿಗೆ ದಾಖಲೆಯ ಮಟ್ಟದಲ್ಲಿ ಸಂಗ್ರಹವಾಗಿದೆ. ಈ ಸರಕು ಮತ್ತು ಸೇವಾ ತೆರಿಗೆ ಯೋಜನೆಯನ್ನು ಕೇಂದ್ರ ಸರ್ಕಾರ 2017 ರಲ್ಲಿ ಜಾರಿಗೆ ತಂದಿತ್ತು. ಪ್ರಾರಂಭದಲ್ಲಿ ಈ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಜಿಎಸ್ ಟಿ ಅನುಷ್ಠಾನಕ್ಕೆ ಬಂದ ನಂತರ ಅದರಂತೆ ಉತ್ಪಾದಕ ವಸ್ತುಗಳ ಬೆಲೆಯಲ್ಲಿ ಏರಿಳಿತ ಕಂಡು ಬಂದಿತ್ತು.

ಯಾವಾಗ ಕೇಂದ್ರ ಸರ್ಕಾರ ವ್ಯಾಪಾರ ವಾಣಿಜ್ಯ ವ್ಯವಹಾರ ನಡೆಸುವ ಪ್ರತಿಯೊಂದು ಉದ್ಯಮಗಳಿಗೂ ಕೂಡ ಜಿ.ಎಸ್.ಟಿ.ಕಡ್ಡಾಯ ಮಾಡಿ ಪ್ರತಿಯೊದು ಉದ್ಯಮಗಳಿಗೂ ಪ್ರತ್ಯೇಕವಾಗಿ ಜಿಎಸ್ ಟಿ ಸಂಖ್ಯೆಯನ್ನು ಕೂಡ ನೀಡಲಾಯಿತು. ಆರಂಭದಲ್ಲಿ ಈ ಸರಕು ಮತ್ತು ಸೇವಾ ತೆರಿಗೆ ನಿರೀಕ್ಷೆ ಮಾಡಿದಷ್ಟು ಸಂಗ್ರಹವಾಗಿರಲಿಲ್ಲ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಬರೋಬ್ಬರಿ 1.41 ಲಕ್ಷ ಕೋಟಿ ಸಂಗ್ರಹವಾಗಿ ದಾಖಲೆ ಮಾಡಿತ್ತು. ಇದಾದ ನಂತರ ಎರಡನೇ ಬಾರಿಗೆ ಅತ್ಯಧಿಕ ಪ್ರಮಾಣದಲ್ಲಿ ಸರಕು ಸೇವಾ ತೆರಿಗೆ ಸಂಗ್ರಹ ಆದದ್ದು ಅಕ್ಟೋಬರ್ ತಿಂಗಳಿನಲ್ಲಿ. ಈ ತಿಂಗಳಿನಲ್ಲಿ ಬರೋಬ್ಬರಿ 1.30 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುವ ಮೂಲಕ ಜಿಎಸ್ ಟಿ ಸಂಗ್ರಹದಲ್ಲಿ ಭಾರಿ ಅಚ್ಚರಿ ಮೂಡಿಸಿತು.



ಇನ್ನ ಅದರಂತೆ ಸೆಪ್ಟೆಂಬರ್ ತಿಂಗಳಿನಲ್ಲಿ 1.17 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹವಾಗಿತ್ತು. ದೇಶದಲ್ಲಿ ಸರಕು ಸೇವಾ ತೆರಿಗೆಯ ಹಣ ಹೆಚ್ಚು ಸಂಗ್ರಹವಾಗಲು ಒಂದಷ್ಟು ಪ್ರಮುಖ ಅಂಶಗಳಿವೆ. ಯಾವ ಉದ್ಯಮ ಸಂಸ್ಥೆಗಳು, ಸಣ್ಣ ಪುಟ್ಟ ವ್ಯಾಪಾರಿಗಳು ಕೂಡ ಕಡ್ಡಾಯವಾಗಿ ಆದಾಯ ತೆರಿಗೆ ಕಟ್ಟಲೇಬೇಕಾದ ನಿಯಮವನ್ನ ರೂಪಿಸಲಾಗಿತ್ತು. ಒಂದು ವೇಳೆ ಐಟಿ ರಿಟರ್ನ್ ಮಾಡದಿದ್ದಲ್ಲಿ ಇ-ವೇ ಬಿಲ್ ಬ್ಲಾಕಿಂಗ್, ಕ್ರೆಡಿಟ್ ನಿರಾಕರಣೆ ಮಾಡಲಾಗುತ್ತಿತ್ತು. ಅದರಲ್ಲಿಯೂ ಪ್ರಮುಖವಾಗಿ ಸತತವಾಗಿ ಆರು ಬಾರಿ ಐಟಿ ರಿಟರ್ನ್ ಸಲ್ಲಿಸದಿದ್ದರೆ ಅಂತಹ ಸಂಸ್ಥೆಯ ನೋಂದಣೆಯನ್ನು ರದ್ದು ಮಾಡುವಂತಹ ಅವಕಾಶ ಇತ್ತು. ಅಕ್ಟೋಬರ್ ತಿಂಗಳಿನಲ್ಲಿ ಜಿ ಎಸ್ ಟಿ 23,861 ಕೋಟಿ ರೂ.ರಾಜ್ಯ ಸರಕು ಸೇವಾ ತೆರಿಗೆ 30,421ಕೋಟಿ ರೂ. ಇಂಟಿಗ್ರೇಟೆಡ್ ಸರಕು ಸೇವಾ ತೆರಿಗೆ 67,361 ಕೋಟಿ, ಸೆಸ್ 8484 ಕೋಟಿ ಯಷ್ಟಿದ್ದು ಶೇಕಡಾ 24 ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಸರಕು ಸೇವಾ ತೆರಿಗೆಯ ಮೊತ್ತ ಹೆಚ್ಚಾಗಿ ಸಂಗ್ರಹವಾಗಲು ಕಾರಣವಾಗಿದೆ.



ಇದೀಗ ನವೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಕುರಿತು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ನವೆಂಬರ್ ತಿಂಗಳಿನಲ್ಲಿ ಕಳೆದ ಅಕ್ಟೋಬರ್ ತಿಂಗಳಿಗಿಂತ ಹೆಚ್ಚೆ ಜಿಎಸ್ ಟಿ ಹಣ ಸಂಗ್ರಹವಾಗಿದೆಯಂತೆ. ನವೆಂಬರ್ ತಿಂಗಳಿನಲ್ಲಿ ಬರೋಬ್ಬರಿ 1,31,526 ಲಕ್ಷ ಕೋಟಿ ಸರಕು ಮತ್ತು ಸೇವಾ ತೆರಿಗೆ ಹಣ ಸಂಗ್ರಹವಾಗಿ ದಾಖಲೆ ಮಾಡಿದೆ. ಸರಕು ಮತ್ತು ಸೇವಾ ತೆರಿಗೆ ಪೈಕಿ ಕೇಂದ್ರ ಜಿ.ಎಸ್.ಟಿ. 23,978 ಕೋಟಿರಷ್ಟಾದರೆ, ರಾಜ್ಯ ಸರ್ಕಾರದ ಜಿ.ಎಸ್.ಟಿ.ಯು 3,127 ಕೋಟಿಯಷ್ಟಾಗಿದೆ. ಇನ್ನು ಕೇಂದ್ರ ಸರ್ಕಾರ ತೆರಿಗೆ ಪರಿಹಾರವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೋಬ್ಬರಿ 53,782 ಕೋಟಿ ರೂ.ನೀಡುವುದು ಎಂದು ವಿತ್ತ ಸಚಿವಾಲಯ ತಿಳಿಸಿದೆ.