ಒಬ್ಬರಾದ ಮೇಲೆ ಒಬ್ಬರು, ಈಗ ನಟ ಶ್ರೀಮುರುಳಿ ಸರದಿ

ಇತ್ತೀಚಿನ ದಿನಮಾನಗಳಲ್ಲಿ ಚಿತ್ರರಂಗ ಭಾಷೆಗಳ ಎಲ್ಲೆಯನ್ನು ಮೀರಿ ಮುನ್ನುಗ್ಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಒಂದು ಒಳ್ಳೆಯ ಚಿತ್ರ ಬಂದರೆ ಸಾಕು ಎಲ್ಲ ಭಾಷೆಯ ಸಿನಿರಸಿಕರು ಅದನ್ನುಆದರಿಂದ ಸ್ವಾಗತಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಹೀಗಾಗಿಯೇ ಚಿತ್ರ ನಿರ್ಮಾಪಕರು ನಿರ್ದೇಶಕರು ಜೊತೆಗೆ ನಟರು ಕೂಡ ಒಂದು ಭಾಷೆಯ ಚಿತ್ರವನ್ನು ಬೇರೊಂದು ಭಾಷೆಯಲ್ಲಿ ಬಿಡುಗಡೆ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಈಗಾಗಲೇ ಕೆಜಿಎಫ್ ಪೈಲ್ವಾನ್ ಕುರುಕ್ಷೇತ್ರ ಅವನೇ ಶ್ರೀಮನ್ನಾರಾಯಣ ಮುಂತಾದ ಚಿತ್ರಗಳು ಬೇರೆ ಭಾಷೆ ಗಳಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿದ್ದು ಈಗ ಇತಿಹಾಸ.

ಇದೀಗ ಕನ್ನಡದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಸಹ ಅದೇ ಸಾಲಿಗೆ ಸೇರಲಿದ್ದಾರೆ. ಅಯೋಗ್ಯ ಚಿತ್ರದ ಖ್ಯಾತಿಯ ಮಹೇಶ್ ನಿರ್ದೇಶನದ ಹಾಗೂ ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡುತ್ತಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಕ್ಯೂಟ್ ಬೆಡಗಿ ಆಶಿಕಾ ರಂಗನಾಥ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಮದಗಜ ಚಿತ್ರ ಶೂಟಿಂಗ್ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿ ಮಾಡುತ್ತಿದೆ.

ಇದೇ ಡಿಸೆಂಬರ್ 17ರಂದು ಶ್ರೀಮುರಳಿ ಅವರ ಹುಟ್ಟಿದ ಹಬ್ಬದ ದಿನದ ಅಂಗವಾಗಿ ಚಿತ್ರದ ಟೀಸರ್ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಪಡೆಯಿತು. ಇದೀಗ ಹೊಸ ವರ್ಷದ ಅಂಗವಾಗಿ ತೆಲುಗು ಭಾಷೆಯಲ್ಲಿಯೂ ಕೂಡ ಟೀಸರ್ ರಿಲೀಸ್ ಮಾಡುವ ಯೋಜನೆ ಹಮ್ಮಿಕೊಂಡಿದೆ ಮದಗಜ ಚಿತ್ರತಂಡ. ಆದರೆ ವಿಶೇಷವಾದ ಸಂಗತಿಯೇನೆಂದರೆ ಸ್ವತಃ ಶ್ರೀ ಮುರುಳಿ ಅವರೇ ತೆಲುಗು ಭಾಷೆಯ ಟೀಸರ್ ಗೂ ಸಹ ಡಬ್ಬಿಂಗ್ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ.

ಶ್ರೀಮುರುಳಿ ಅವರ ಅಭಿಮಾನಗಳಲ್ಲಿ ಅವರು ಟೀಸರ್ ನಲ್ಲಿ ಮಾತ್ರ ಶ್ರೀ ಮುರುಳಿಯವರು ಧ್ವನಿ ನೀಡಲಿದ್ದಾರೋ ಅಥವಾ ಪೂರ್ಣ ಚಿತ್ರಕ್ಕೆನೇ ಧ್ವನಿ ನೀಡಲಿದ್ದಾರೋ ಎಂಬ ಕುತೂಹಲ ಹುಟ್ಟಿಸಿದೆ. ಒಟ್ಟಾರೆಯಾಗಿ ಕೇವಲ ಕನ್ನಡ ನಾಡಿನೊಳಗೆ ಅಬ್ಬರಿಸುತ್ತಿದ್ದ ಚಿತ್ರಗಳು ಈಗ ಎಲ್ಲಾ ಗೋಡೆಗಳನ್ನು ಮುರಿದು ಬೇರೆ ಭಾಷೆಗಳಲ್ಲಿ ಸಹ ಸದ್ದು ಮಾಡುತ್ತಿವೆ, ಇದು ನಿಜಕ್ಕೂ ಎಲ್ಲ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎನ್ನಬಹುದು.

%d bloggers like this: