ಫ್ಯಾಂಟಮ್ ಚಿತ್ರದ ಟೈಟಲ್ ಅನ್ನು ವಿಕ್ರಾಂತ್ ರೋನ ಅಂತ ಬದಲಾವಣೆ ಮಾಡಿದ್ದು ಈ ಕಾರಣಕ್ಕಾಗಿ

ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದ ಟೈಟಲ್ ಬದಲಾವಣೆಗೆ ಪ್ರಮುಖ ಕಾರಣವೇನು! ರಂಗಿತರಂಗ ಚಿತ್ರದ ಖ್ಯಾತಿಯ ನಿರ್ದೇಶಕ ಅನೂಪ್ ಬಂಡಾರಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ಫ್ಯಾಂಟಮ್ ಇದೀಗ ಟೈಟಲ್ ಚೇಂಚ್ ಮಾಡಿದೆ. ಫ್ಯಾಂಟಮ್ ಟೈಟಲ್ ಬದಲಾಗಿ ಈ ಚಿತ್ರಕ್ಕೆ ವಿಕ್ರಾಂತ್ ರೋಣ ಎಂಬ ಹೆಸರನ್ನು ಚಿತ್ರದ ಶೀರ್ಷಿಕೆಯಾಗಿ ಇಟ್ಟಿದೆ. ಚಿತ್ರದ ನಿರ್ದೇಶಕ ಇತ್ತೀಚೆಗೆ ತನ್ನ ಟ್ವಿಟ್ಟರ್ ಖಾತೆಯ ಮೂಲಕ ಬದಲಾಗಿಸಿರುವ ವಿಕ್ರಾಂತ್ ರೋಣದ ಟೈಟಲ್ ಅನ್ನು ಪ್ರಪಂಚದ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಕಿಚ್ಚ ಸುದೀಪ್ ಅವರ ಕಟೌಟ್ ನಿಲ್ಲಿಸಿ ಅಧಿಕೃತವಾಗಿ ಇದೇ ಜನವರಿ 31ರಂದು ಟೈಟಲ್ ಲಾಂಚ್ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಕೆಜಿಎಫ್ ಚಿತ್ರದ ತರಹ ವಿಕ್ರಾಂತ್ ರೋನ ಚಿತ್ರ ಸಿನಿಮಾ ಜಗತ್ತಿನಲ್ಲಿ ತನ್ನದೇ ಒಂದು ಬ್ರಾಂಡ್ ಕ್ರಿಯೇಟ್ ಮಾಡುವುದರಲ್ಲಿ ಸಂದೇಹವೇ ಇಲ್ಲ.

ಪ್ರಪಂಚದ ಎತ್ತರದ ಕಟ್ಟಡವಾಗಿರುವ ಬುರ್ಜ್ ಖಲೀಫಾದಲ್ಲಿ ಪ್ರಪಂಚದ ಯಾವ ಸಿನಿಮಾಗಳು ಕೂಡ ಈ ಸ್ಥಳದಲ್ಲಿ ಟೈಟಲ್ ಲಾಂಚ್ ಮಾಡಿಲ್ಲ, ಮೊಟ್ಟ ಮೊದಲ ಬಾರಿಗೆ ಈ ಒಂದು ವಿನೂತನ ಪ್ರಯತ್ನ ವಿಕ್ರಾಂತ್ ರೋಣ ಚಿತ್ರತಂಡದ್ದಾಗಿದೆ. ವಿಕ್ರಾಂತ್ ರೋಣ ಚಿತ್ರ ಪ್ರಪಂಚಾದ್ಯಂತ ಬಿಡುಗಡೆ ಗೊಳ್ಳುತ್ತಿದೆ. ಫ್ಯಾಂಟಮ್ ಟೈಟಲ್ ಬದಲಾವಣೆ ಮುಖ್ಯ ಕಾರಣ ಅಂದರೆ ನಮ್ಮ ಭಾರತೀಯರಿಗೆ ಫ್ಯಾಂಟಮ್ ಟೈಟಲ್ ವಿಶೇಷವಾಗಿ ಕಾಣಬಹುದು, ಆದರೆ ವಿದೇಶಿಯರಿಗೆ ಫ್ಯಾಂಟಮ್ ಎಂಬುದು ಹೊಸತಲ್ಲ, ಅವರ ದೃಷ್ಟಿಕೋನದಲ್ಲಿ ಫ್ಯಾಂಟಮ್ ಎಂದಾಕ್ಷಣ ಇದು ಹಾಲಿವುಡ್ ಸಿನಿಮಾದ ಕಾಪಿ ಇರಬಹುದು ಎಂಬ ಅನುಮಾನ ಬರಲು ಕಾರಣವಾಗುತ್ತದೆ.

ಅದೇ ವಿಕ್ರಾಂತ್ ರೋಣ ಎಂಬ ಹೆಸರು ದಕ್ಷಿಣ ಭಾರತದಲ್ಲಿ ಮಾತ್ರ ಪರಿಚಿತ, ವಿದೇಶಿಯರಿಗೆ ಈ ಹೆಸರು ವಿಶಿಷ್ಟವಾಗಿ ಕಾಣುತ್ತದೆ. ವಿಕ್ರಾಂತ್ ರೋಣ ಟೈಟಲ್ ವಿದೇಶಿಗರಿಗೆ ಕುತೂಹಲಕಾರಿ ಮತ್ತು ಆಸಕ್ತಿಕರವಾಗಿರುತ್ತದೆ ಎಂಬ ಉದ್ದೇಶದಿಂದ ಫ್ಯಾಂಟಮ್ ಟೈಟಲ್ ಅನ್ನು ಬದಲಾಯಿಸಲಾಗಿದೆ ಎಂದು ಚಿತ್ರತಂಡದ ಮೂಲಗಳ ಪ್ರಕಾರ ತಿಳಿದು ಬಂದಿದೆ. ಇನ್ನು ವಿಕ್ರಾಂತ್ ರೋಣ ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆ ಯುಟರ್ನ್ ಚಿತ್ರದ ಖ್ಯಾತಿಯ ಶ್ರದ್ದಾ ಶ್ರೀನಾಥ್ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲಿ ಅನೂಪ್ ಸೋದರ ನಟ ನಿರೂಪ್ ಭಂಡಾರಿ ಕೂಡ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.

%d bloggers like this: