ಒಮಿಕ್ರಾನ್ ವೈರಸ್ ಭೀತಿ, ವಿಮಾನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ಈಗಾಗಲೇ ಹೊರ ದೇಶಗಳಿಂದ ಭಾರತಕ್ಕೆ ಆಗಮಿಸುತ್ತಿರುವ ಪ್ರಯಾಣಿಕರನ್ನ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗುತ್ತಿದೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನೀಲ್ದಾಣದಲ್ಲಿ ಈ ಕಾರ್ಯ ಈಗಾಗಲೇ ಆರಂಭವಾಗಿದ್ದು, ವಿದೇಶಗಳಿಂದ ಬರುತ್ತಿರುವವರನ್ನು ಆರ್ಟಿಪಿಸಿಆರ್ ಟೆಸ್ಟ್ ನಡೆಸುತ್ತಿದ್ದಾರೆ. ಆದರೆ ಈ ದಿಢೀರ್ ಪರೀಕ್ಷೆ ಕೆಲವು ಪ್ರಯಾಣಿಕರಿಗೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಚೀನಾ ದೇಶದಲ್ಲಿ ಕೊರೋನ ವೈರಸ್ ಆರಂಭವಾದಾಗಿನಿಂದ ಜಗತ್ತಿನ ಎಲ್ಲಾ ದೇಶಗಳು ಕೂಡ ಒಂದಲ್ಲ ಒಂದು ರೀತಿಯ ಅಪಾಯ ಎದುರಿಸಿದ್ದಾಗಿದೆ. ಎಲ್ಲವೂ ಸರಿಯಾಗುತ್ತಿದೆ ಎನ್ನುವಷ್ಟಲ್ಲ ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಎಂಬ ಹೊಸ ವೈರಸ್ ಕಾಣಿಸಿಕೊಂಡಿದ್ದು ವಿಶ್ವ ಸಂಸ್ಥೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಈ ಒಮಿಕ್ರಾನ್ ವೈರಸ್ನ ಯಾವುದೇ ಗುಣಲಕ್ಷಣಗಳು ತಿಳಿಯದ ಕಾರಣ ಎಲ್ಲಾ ದೇಶಗಳಿಗೂ ಕೂಡ ಕೊಂಚ ಆತಂಕ ಉಂಟಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಕೋವಿಡ್ ಹೊಸ ರೂಪ ವೈರಸ್ ಓಮಿಕ್ರಾನ್ ಕಟ್ಟೆಚ್ಚರವಾಗಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯಕ್ಕೆ ಹೊರ ದೇಶಗಳಿಂದ ಬರುವ ಎಲ್ಲರಿಗೂ ಆರ್ಟಿಪಿಸಿಎರ್ ಟೆಸ್ಟ್ ಕಡ್ಡಾಯಗೊಳಿಸಿದ್ದು, ಏಳು ದಿನಗಳ ಕಾಲ ಮನೆಯಲ್ಲೇ ಇರಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಜಾರಿ ಮಾಡಿ ಆದೇಶ ಹೊರಡಿಸಿದೆ. ಅವರು ಕೋವಿಡ್ ಎರಡು ಡೋಸ್ ಪಡೆದಿದ್ದರು ಕೂಡ ಕಡ್ಡಾಯವಾಗಿ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಲೇ ಬೇಕಾಗಿದೆ.

ಅದಕ್ಕಾಗಿ ಪ್ರತ್ಯೇಕ ಸ್ಥಳವನ್ನು ಕೂಡ ಸಿದ್ದ ಪಡಿಸಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ತಿಳಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೋಗುವ 72 ಗಂಟೆಗಳ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿರಬೇಕಾಗಿರುತ್ತದೆ. ಈ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದವರಿಗೆ ಸಂಪೂರ್ಣವಾಗಿ ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ಅವರ ಶ್ಯಾಂಪಲ್ ತೆಗೆದುಕೊಂಡು ಕ್ಲಿನಿಕಲ್ ಮ್ಯಾನೇಜ್ ಮೆಂಟ್ ಪ್ರೋಟೋಕಾಲ್ ಪ್ರಕಾರ ಅವರನ್ನ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತದೆ. ಉಳಿದಂತೆ ಈ ಟೆಸ್ಟ್ ನಲ್ಲಿ ನೆಗೆಟೀವ್ ಬಂದ ವ್ಯಕ್ತಿಗಳು ಮನೆಗೆ ಹೋದರು ಕೂಡ ಕಡ್ಡಾಯವಾಗಿ ಏಳು ದಿನಗಳ ಕಾಲ ಹೋ ಐಸೋಲೇಶನ್ ನಲ್ಲಿ ಇರಬೇಕಾಗಿರುತ್ತದೆ. ಇನ್ನು ಈ ಓಮಿಕ್ರಾನ್ ವೈರಸ್ ದಕ್ಷಿಣಾ ಆಫ್ರಿಕಾದಲ್ಲಿ ಕಾಣಿಸಿಕೊಳ್ಳುವ ಮೊದಲು ನೆದರ್ಲ್ಯಾಂಡ್ ನಲ್ಲಿ ಕಾಣಿಸಿಕೊಂಡಿತ್ತು ಎಂದು ವರದಿಯಲ್ಲಿ ತಿಳಿದು ಬಂದಿದೆ.

%d bloggers like this: