ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ. ರಾಜ್ಯದಲ್ಲಿ ಈಗಾಗಲೇ ಒಮಿಕ್ರಾನ್ ಸೋಂಕು ಲಕ್ಷಣಗಳಿರುವ ಇಬ್ಬರು ವ್ಯಕ್ತಿಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ಸಭೆ ನಡೆಸಿ ಒಂದಷ್ಟು ಕಠಿಣ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಮಾಧ್ಯಮ ಸುದ್ದಿ ಗೋಷ್ಟಿ ನಡೆಸಿದ ಕಂದಾಯ ಸಚಿವ ಆರ್.ಅಶೋಕ್ ಅವರು ರಾಜ್ಯದಲ್ಲಿ ಇನ್ಮುಂದೆ ಮಾರ್ಗಸೂಚಿಗಳು ಕಠಿಣವಾಗಿರಲಿದೆ. ಶಾಲಾ ಕಾಲೇಜುಗಳಿಗೆ ಬರುವ ಎಲ್ಲಾ ವಿಧ್ಯಾರ್ಥಿಗಳು ಎರಡು ಡೋಸ್ ಪಡೆಯುವುದು ಕಡ್ಡಾಯವಾಗಿರುತ್ತದೆ.

ಅಂತೆಯೇ ಮಾಲ್ ಗಳಲ್ಲಿ ಕೆಲಸ ಮಾಡುವ ಎಲ್ಲಾರೂ ಕೂಡ ಕೋವಿಡ್ ಲಸಿಕೆ ಎರಡು ಡೋಸ್ ಗಳನ್ನು ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು, ಚಿತ್ರ ಮಂದಿರದಲ್ಲಿ ಕೆಲಸ ಮಾಡುವ ಸಿನಿಮಾ ನೋಡ ಬಯಸುವ ಎಲ್ಲರೂ ಕೂಡ ಎರಡು ಲಸಿಕೆ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದರು. ಕೊರೋನಾ ವೈರಸ್ ನ ಹೊಸ ರೂಪಾಂತರಿ ವೈರಸ್ ಆಗಿರುವ ಒಮಿಕ್ರಾನ್ ವೈರಸ್ ಹರಡುವಿಕೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೋವಿಡ್ ಎರಡ್ ಡೋಸ್ ಪಡೆಯುವುದನ್ನ ಕಡ್ಡಾಯ ಗೊಳಿಸುವ ನಿರ್ಧಾರಕ್ಕೆ ಬಂದಿದೆ. ಈಗಾಗಲೇ ಎಲ್ಲಾ ರೀತಿಯ ಪೂರ್ವ ಸಿದ್ದತೆಗಳನ್ನು ತಯಾರಿ ಮಾಡಿಕೊಳ್ಳುತ್ತಿದೆ.



ಸಾರ್ವಜನಿಕ ಸ್ಥಳಗಳಲ್ಲಿ ಸೇರುವಾಗ ಎಲ್ಲರು ಕೂಡ ಸಾಮಾಜಿಕ ಅಂತರ, ಮಾಸ್ಕ್ ಧರಿಸಲೇಬೇಕು. ಈಗಾಗಲೇ ಜಗತ್ತಿನಾದ್ಯಂತ ನಾಲ್ಕು ನೂರು ಜನರಿಗೆ ಒಮಿಕ್ರಾನ್ ಸೋಂಕು ತಗಲಿರುವುದು ವರದಿಯಾಗಿದೆ. ಆರೋಗ್ಯ ಸಚಿವರಾದ ಸುಧಾಕರ್ ಅವರು ಮಾತನಾಡಿ ರಾಜ್ಯದಲ್ಲಿ ಇನ್ಮುಂದೆ ಎಲ್ಲಾರು ಕೂಡ ಜವಾಬ್ದಾರಿಯುತವಾಗಿ ಮಾಸ್ಕ್ ಧರಿಸಬೇಕು ಇನ್ನು ರಾಜ್ಯದಲ್ಲಿ ಲಾಕ್ ಡೌನ್ ಆಗುತ್ತದೆ ಎಂದು ಅನಗತ್ಯ ಗೊಂದಲದ ಸುದ್ದಿಗಳನ್ನು ಹರಡಬಾರದು ಎಂದು ಸಹ ಎಚ್ಚರಿಸಿದ್ದಾರೆ.