ಒಂದ್ ರೂಪಾಯಿನೂ ಪಡೆಯದೆ ಈ ಇಲಾಖೆಗೆ ರಾಯಭಾರಿ ಆದ ಡಿಬಾಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ 2001ರಲ್ಲಿ ಮೆಜಸ್ಟಿಕ್ ಎಂಬ ಚಿತ್ರದ ಮೂಲಕ, ತನ್ನ ತಂದೆ ತೋರಿಸಿಕೊಟ್ಟ ದಾರಿಯಲ್ಲೇ ಸಿನಿಮಾ ರಂಗ ಪ್ರವೇಶಿಸಿ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡಿ ಕರಿಯ, ನನ್ನ ಪ್ರೀತಿಯ ರಾಮು, ಕಲಾಸಿಪಾಳ್ಯ, ಗಜ, ಸಾರಥಿ, ಬುಲ್ ಬುಲ್, ಯಜಮಾನ, ಅನಾಥರು ಈ ಚಿತ್ರಗಳು ದರ್ಶನ್ ಬಾಸ್ ಕೆರಿಯರ್ನನ್ನೇ ಬದಲಾಯಿಸಿದ ಚಿತ್ರಗಳು. ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಎಂಬ ಐತಿಹಾಸಿಕ ಚಿತ್ರಗಳು ದಚ್ಚುಗೆ ಗಮನಾರ್ಹ ಯಶಸ್ಸು ತಂದಿತ್ತು. ಒಂದು ಕಡೆ ಸಿನಿಮಾ ಆದರೆ ಇನ್ನೊಂದು ಕಡೆ ಸಾಕು ಪ್ರಾಣಿಗಳ ಪ್ರೇಮ. ಈಗಾಗ್ಲೇ ನಮ್ಮೆಲರಿಗು ಗೊತ್ತಿರೋ ಹಾಗೆ ದರ್ಶನ್, ಚಿಕ್ಕಣ್ಣ ರಂತಹ ಪ್ರಾಣಿ ಪ್ರೇಮಿಗಳಿಗೆ ಸಹ ಸ್ಪೂರ್ತಿಯಾಗಿದ್ದುಕೊಂಡು, ಕರ್ನಾಟಕದ ಫಾರೆಸ್ಟ್ ಡಿಪಾರ್ಟ್ಮೆಂಟ್ ಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

ಹಾಗೆ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆನೆ, 2 ಅನಕೊಂಡ ಹಾಗು ಹುಲಿಯಂತಹ ಕಾಡುಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಪ್ರಾಣಿ ಸಂಕುಲವನ್ನು ರಕ್ಷಿಸುವ ಕಡೆ ಗಮನ ವಹಿಸುತ್ತಿದ್ದಾರೆ. ದರ್ಶನ್ ಜೀವನದಲ್ಲಿ ಆದ ಕೆಲವು ಸಂಘರ್ಷಗಳು, ಹಾಗು ಸುದ್ದಿ ಮಾಧ್ಯಮದವರು ಕೂಡ ಆಗಾಗ ದರ್ಶನ್ ಹಾಗು ಅವರ ಹೆಂಡತಿಯ ಕಳೆದು ಹೋದ ಜಗಳಗಳನ್ನು ಪ್ರೆಸ್ ಮೀಟ್ ನಲ್ಲಿ ಕೇಳಿ ಕೆಣುಕುವುದು ಹಾಗು ಸುದ್ದಿ ಮಾಧ್ಯಮಕ್ಕೆ, ಕುಟುಂಬದ ಒಡೆತಗಳು, ದರ್ಶನ್ ಮನಶಾಂತಿಯನ್ನು ಘಾಸಿಗೊಳಿಸಿದ್ದರೂ ಸಹ ಅವರು ತಮ್ಮ ಹೆಂಡತಿಯೊಂದಿಗೆ ಸುಂದರವಾದ ಸಂಸಾರದೊಂದಿಗೆ ಪ್ರಕೃತಿ, ಪ್ರಾಣಿ ಸಂಕುಲ, ಸಾಕು ಪ್ರಾಣಿಗಳನ್ನು ಸಾಕುವುದರೊಂದಿಗೆ ರಾಜಕೀಯ ಕ್ಷೇತ್ರದಲ್ಲೂ ಸದ್ದು ಮಾಡುತ್ತಾ ಪ್ರತೀ ಕ್ಷೇತ್ರದಲ್ಲೂ ಸೈ ಅನಿಸಿಕೊಂಡಿದ್ದಾರೆ.

ಹೀಗೆ ನಮ್ಮ ದರ್ಶನ್ ಬಾಸ್ ತಮ್ಮನ್ನು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ದೊಡ್ಡ ಮನಸ್ಸಿನಿಂದ ಯಾವುದೇ ಸಂಭಾವನೆ ಪಡೆಯದೇ ಕೃಷಿ ಇಲಾಖೆಯ ರಾಯಭಾರಿಯಾಗಿ ತಮ್ಮನ್ನು ಕೃಷಿ ಕ್ಷೇತ್ರದಲ್ಲೂ ತಮ್ಮನ್ನು ಒಪ್ಪಿಸಿಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಕೃಷಿ ಸಚಿವ ಬಿಸಿ ಪಾಟಿಲ್ ದರ್ಶನ್ ರನ್ನು ಸಂಕ್ರಾಂತಿ ಹಬ್ಬದಂದು ಭೇಟಿ ಮಾಡುವುದರ ಮೂಲಕ, ಮೈಸೂರ್ನಲ್ಲಿರುವ ಬಾಸ್ ನ ಫಾರ್ಮ್ ಹೌಸ್ ಗೆ ಬಂದು, ದರ್ಶನ್ ಜೊತೆ ತಮ್ಮ ಕೃಷಿ ಇಲಾಖೆ ರಾಯಭಾರಿಯ ಯೋಜನೆ ಬಗ್ಗೆ ಚರ್ಚಿಸಿದ್ದು, ದರ್ಶನ್ ರೈತರ ಪರವಾದ ಕಾರ್ಯಕ್ರಮಗಳಲ್ಲಿ ಸರ್ಕಾರದ ಮುಖವಾಗಲಿದ್ದರೆ ಎಂಬುದು ದರ್ಶನ್ ಅಭಿಮಾನಿಗಳಿಗೆ ವಿಶೇಷ ಸುದ್ದಿಯಾಗಿದೆ.

ರೈತರೊಂದಿಗೆ ಸೇರಿ ಅವರ ಕಷ್ಟದ ಕಡಲಲ್ಲಿ ಕೂಡ ಪಾಲು ತೆಗೆದುಕೊಳ್ಳುವ ಹಾಗು ಅವರ ಕಷ್ಟಗಳಿಗೆ ಬೆಂಬಲ ನೀಡುವ ಬಗೆಗಿನ ಯೋಚನೆಗಳು ಈಗಾಗಲೇ ನಮ್ಮ ದಚ್ಚು ಚಿಂತಿಸಿದ್ದಾರೆ ಎಂಬ ಉಲ್ಲೇಖ ಬಂದಿದೆ. ಏನೇ ಆದರು ಜೀವನದಲ್ಲಿ ಮಾಧ್ಯಮಗಳು, ಅವರನ್ನು ದ್ವೇಷಿಸುವ ಜನರು ಏನೇ ಕುತಂತ್ರ ಮಾಡಿದರು ಸಹ, ಅವರನ್ನು ನಮ್ಮ ಬಾಸ್ ತುಂಬಾನೇ ಸುಲಭವಾಗಿ ತೆಗೆದುಕೊಳ್ಳುವ ಮನೋಭಾವನೆಯಿಂದ ನೆಗೆಟಿವ್ ಟಾಕ್ ತಲೆಗೆ ಹಾಕಿಕೊಳ್ಳದೆ ಜೀವನದಲ್ಲಿ ಅವರು ಕೈಗೊಳ್ಳುವ ಪ್ರತೀ ಕಾರ್ಯದಲ್ಲಿ ತಮ್ಮ ಶತ್ರುಗಳಿಗೆ ಟಕ್ಕರ್ ನೀಡುವಂತೆ ಅವರ ಮುಂದಿನ ಕೃಷಿ ಇಲಾಖೆಯ ಯಶಸ್ಸಿಗಾಗಿ ಶುಭಕೋರೋಣ.

%d bloggers like this: