ಒಂದಲ್ಲ, ಇನ್ನೂ ಎರಡು ಚಿತ್ರಗಳಲ್ಲಿ ಅಪ್ಪು ಅವರನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳಬಹುದು

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಎರಡು ಸಿನಿಮಾಗಳು ತೆರೆಗೆ ಬರಲು ಸಿದ್ದವಾಗುತ್ತಿವೆ. ಪವರ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಅಗಲಿ ತಿಂಗಳು ಸಮೀಪಿಸುತ್ತಿದ್ದರು ಅವರು ನಮ್ಮೊಂದಿಗೆ ಇಲ್ಲ ಎಂಬುದನ್ನು ಇಂದಿಗೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ಅವರು ಅಕಾಲಿಕ ನಿಧನಾರಾದ ಬಳಿಕ ಕನ್ನಡ ಚಿತ್ರರಂಗ ಸಂಪೂರ್ಣ ಮೌನಕ್ಕೆ ಶರಣಾಗಿತ್ತು. ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಅಗಲಿದ್ದರು ಕೂಡ ಮಾನಸಿಕವಾಗಿ ಅವರು ಸದಾ ಜೀವಂತರಾಗಿರುತ್ತಾರೆ. ಅವರು ಮಾಡಿದಂತಹ ಸಾಮಾಜಿಕ ಕಾರ್ಯಗಳು, ಅವರು ಮಾಡಿದ ಸಿನಿಮಾಗಳ ಮೂಲಕ ಅಪ್ಪು ಶಾಶ್ವತವಾಗಿರುತ್ತಾರೆ.

ಇನ್ನು ಇದೀಗ ಒಂದೊಂದೆ ಸಿನಿಮಾಗಳ ಚಟುವಟಿಕೆಗಳು ಆರಂಭಗೊಂಡಿದ್ದು ಕೋವಿಡ್ ನಿಂದ ಬ್ರೇಕ್ ಪಡೆದುಕೊಂಡಿದ್ದ ಎಲ್ಲಾ ಸಿನಿಮಾಗಳು ಚಿತ್ರಮಂದಿರದತ್ತ ಬರುತ್ತಿವೆ. ಅಂತೆಯೇ ನಟ ಪುನೀತ್ ರಾಜ್ ಕುಮರ್ ಅವರು ಇಹಲೋಕ ತ್ಯಜಿಸುವ ಮುನ್ನ ಒಂದಷ್ಟು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಅವುಗಳಲ್ಲಿ ಲೂಸಿಯಾ ಪವನ್ ಕುಮರ್ ಅವರ ದ್ವಿತ್ವ, ಭರ್ಜರಿ ಚೇತನ್ ಕುಮಾರ್ ಅವರ ಜೇಮ್ಸ್ ಮತ್ತು ನಟ ಪ್ರಭುದೇವ ಅವರ ಸೋದರ ನಾಗೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕತ್ವದ ಲಕ್ಕಿ ಮ್ಯಾನ್ ಸಿನಿಮಾದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಅಪ್ಪು ನಟಿಸಿದ್ದರು.

ದ್ವಿತ್ವ ಸಿನಿಮಾ ಹೊರತು ಪಡಿಸಿದರೆ ಅಪ್ಪು ಅವರು ಜೇಮ್ಸ್ ಮತ್ತು ಲಕ್ಕಿ ಮ್ಯಾನ್ ಚಿತ್ರದಲ್ಲಿ ತಮ್ಮ ಪಾತ್ರದ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದ್ದರು. ಅದರಂತೆ ಚೇತನ್ ಕುಮಾರ್ ನಿರ್ದೇಶನದ ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಆಗುವುದು ಬಹುತೇಕ ಖಚಿತ ಎಂದು ತಿಳಿದು ಬಂದಿದೆ. ಅದೇ ರೀತಿಯಾಗಿ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್ ಚಿತ್ರ ಕೂಡ ಬಿಡುಗಡೆಯಾಗಲು ಸಿದ್ದವಾಗಿದೆ. ಈ ಲಕ್ಕಿ ಮ್ಯಾನ್ ಸಿನಿಮಾ ತಮಿಳಿನ ಓಹ್ ಮೈ ಕಡವೊಳೆ ಎಂಬ ಸಿನಿಮಾದ ರಿಮೇಕ್ ಆಗಿದೆ.

ವಿಜಯ್ ಸೇತುಪತಿ ಅತಿಥಿ ಪಾತ್ರದಲ್ಲಿ ನಿರ್ವಹಿಸಿದ್ದ ಪಾತ್ರವನ್ನು ನಟ ಪುನೀತ್ ರಾಜ್ ಕುಮಾರ್ ಈ ಲಕ್ಕಿ ಮ್ಯಾನ್ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದು,ನಟಿ ರೋಶಿನಿ ಪ್ರಕಾಶ್ ಎರಡನೇ ನಾಯಕಿ ನಟಿಯಾಗಿ ನಟಿಸಿದ್ದಾರೆ. ಇನ್ನು ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಮಾಳವಿಕಾ ಅವಿನಾಶ್, ಸುಧಾ ಬೆಳವಾಡಿ, ಸುಂದರ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಲಕ್ಕಿ ಮ್ಯಾನ್ ಸಿನಿಮಾ ಡಿಸೆಂಬರ್ ಅಂತ್ಯ ಅಥವಾ ಜನವರಿ ತಿಂಗಳಲ್ಲಿ ತೆರೆ ಕಾಣಲಿದೆ ಎಂದು ಮಾಹಿತಿ ತಿಳಿದು ಬಂದಿದೆ.

%d bloggers like this: