ಒಂದರ ಮೇಲೊಂದು ಚಿತ್ರ ಹಿಟ್, ತಮ್ಮ ಹೊಸ ’83’ ಚಿತ್ರಕ್ಕೆ ರಣವೀರ್ ಸಿಂಗ್ ಪಡೆದ ಸಂಭಾವನೆ ಎಷ್ಟು ಗೊತ್ತೇ

ಸಿನಿಮಾ ಕ್ಷೇತ್ರದಲ್ಲಿ ಯಾರು ಯಾವಾಗ ಏನು ಬೇಕಾದರು ಆಗಬಹುದು, ಸರಾಸರಿ ನಟ ಕೂಡ ಸ್ಟಾರ್ ನಟರಾಗಿ ಮಿಂಚಬಹುದು. ಅದರಲ್ಲಿಯೂ ಯಾವುದಾದರೊಂದು ಒಂದು ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಂಡು ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಕಂಡ ನಂತರ ಆ ಚಿತ್ರದ ನಟ ನಟಿಯರು ಅಪಾರ ಜನಪ್ರಿಯತೆ ಪಡೆದುಕೊಳ್ಳುತ್ತಾರೆ. ಅದರ ಜೊತೆಗೆ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಳ್ಳುತ್ತಾರೆ. ಅದರಂತೆಯೇ ಇದೀಗ ಬಾಲಿವುಡ್ ಸ್ಟಾರ್ ನಟರ ಆದಂತಹ ರಣ್ವೀರ್ ಸಿಂಗ್ ಕೂಡ ತಮ್ಮ ಸಂಭಾವನೆಯಲ್ಲಿ ಭಾರೀ ಏರಿಕೆ ಮಾಡಿಕೊಂಡಿದ್ದಾರೆ. ಹೌದು ಹಿಂದಿ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ರಣವೀರ್ ಸಿಂಗ್ ಇತ್ತೀಚಿಗೆ ನಟಿಸಿದ ಬಹುತೇಕ ಚಿತ್ರಗಳು ಯಶಸ್ವಿಯಾಗುತ್ತಿವೆ. ಆದ ಕಾರಣ ರಣ್ ವೀರ್ ಸಿಂಗ್ ಕೂಡ ತಮ್ಮ ಸಂಭಾವನೆಯನ್ನ ಏರಿಸಿಕೊಂಡಿದ್ದಾರೆ.

ಇಂದು ಡಿಸೆಂಬರ್ 24ರಂದು ರಣ್ ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 83 ಸಿನಿಮಾ ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. 1983 ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ದ ಭಾರತ ತಂಡ ವಿಶ್ವಕಪ್ ಗೆದ್ದು ಬೀಗಿದ ಕ್ರಿಕೆಟ್ ಲೋಕದ ದಿಗ್ಗಜ ಕಪಿಲ್ ದೇವ್ ಅವರ ಜೀವನಾಧಾರಿತ ಕಥಾಹಂದರ ಹೊಂದಿರುವ ಈ 83 ಚಿತ್ರದಲ್ಲಿ ರಣ್ ವೀರ್ ಸಿಂಗ್ ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಜೋಡಿಯಾಗಿ ಪತ್ನಿ ನಟಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾಗೆ ದೀಪಿಕಾ ಪಡುಕೋಣೆ ಪಾಲುದಾರಿಕೆಯಲ್ಲಿ ಬಂಡವಾಳವನ್ನು ಕೂಡ ಹೂಡಿದ್ದಾರೆ. ನಿರ್ದೇಶಕ ಕಬೀರ್ ಖಾನ್ ನಿರ್ದೇಶನದ ಈ 83ಸಿನಿಮಾ ಇಂದು ದೇಶಾದ್ಯಂತ ತೆರೆಗೆ ಬರುತ್ತಿದೆ. ಈ 8 ಸಿನಿಮಾದ ಟ್ರೇಲರ್ ಈಗಾಗಲೇ ಸಾಕಷ್ಟು ಸದ್ದು ಮಾಡಿತ್ತು.

ಟ್ರೇಲರ್ ನೋಡಿದ ಸಿನಿ ಪ್ರೇಕ್ಷಕರು ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡು ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ವಿಶೇಷ ಅಂದರೆ ಕರ್ನಾಟಕದಲ್ಲಿ ಈ 83 ಚಿತ್ರದ ವಿತರಣೆಯ ಹಕ್ಕನ್ನು ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ಪಡೆದು ಸುದ್ದಿಯಾಗಿದ್ದರು. ಇದೀಗ ಈ 83 ಸಿನಿಮಾ ತಂಡದಿಂದ ಹೊರ ಬಂದಿರುವ ಸುದ್ದಿ ಅಂದರೆ ನಾಯಕ ನಟ ರಣ್ ವೀರ್ ಸಿಂಗ್ 83ಚಿತ್ರಕ್ಕಾಗಿ ಭಾರಿ ಸಂಭಾವನೆ ಪಡೆದಿದ್ದಾರಂತೆ. ಆಪ್ತ ಮೂಲಗಳ ಪ್ರಕಾರ ಕಪಿಲ್ ದೇವ್ ಪಾತ್ರದಲ್ಲಿ ನಟಿಸಲು ರಣ್ ವೀರ್ ಸಿಂಗ್ ಬರೋಬ್ಬರಿ ಇಪ್ಪತ್ತು ಕೋಟಿ ಸಂಭಾವನೆ ಪಡೆದಿದ್ದಾರಂತೆ. ಅಷ್ಟೆ ಅಲ್ಲದೆ ಈ ಚಿತ್ರದಿಂದ ಬರುವ ಲಾಭಾಂಶದಲ್ಲಿ ಒಂದಷ್ಟು ಕಮೀಶನ್ ಸಹ ಪಡೆಯಲಿದ್ದಾರಂತೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬಿದ್ದಿಲ್ಲ. ಸದ್ಯದ ಮಟ್ಟಿಗೆ ಬಾಲಿವುಡ್ನ ಯುವ ಯಶಸ್ವಿ ನಟರಲ್ಲಿ ರಣ್ ವೀರ್ ಸಿಂಗ್ ಮೊದಲ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

%d bloggers like this: