ಒಂದರ ಮೇಲೊಂದು ಚಿತ್ರಗಳು ಮುಂದೂಡಿಕೆ, ಈಗ ಮತ್ತೊಬ್ಬ ಸ್ಟಾರ್ ನಟನ ಚಿತ್ರ ಮುಂದೂಡಿಕೆ

ಓಮೈಕ್ರಾನ್ ವೈರಸ್ ಮತ್ತು ಕೋವಿಡ್ ಮೂರನೇ ಅಲೆಯ ಆತಂಕಕ್ಕೆ ಪತರುಗುಟ್ಟಿದ ಭಾರತೀಯ ಚಿತ್ರರಂಗ! ಕೊರೋನ ವೈರಸ್ ನಿಂದ ಮುಕ್ತಿ ಸಿಗುತ್ತಿದೆ. ಇನ್ನು ನಿರಾಳವಾಗಿ ಜೀವನ ಸಾಗಿಸಬಹುದು ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ಜನರಿಗೆ ಇದೀಗ ಕೋವಿಡ್ ಮೂರನೇ ಅಲೆಯ ಆತಂಕ ಎದುರಾಗಿದೆ. ಇತ್ತೀಚೆಗೆ ಭಾರತ ದೇಶದಲ್ಲಿ ಕಳೆದ ಎರಡು ವಾರಗಳಿಂದೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆ ಕಾಣುತ್ತಲೇ ಇದೆ. ಕರ್ನಾಟಕ ರಾಜ್ಯದಲ್ಲಿಯೇ ದಿನವೊಂದಕ್ಕೆ ನೂರು ಇನ್ನೂರು ಕೋವಿಡ್ ಪ್ರಕರಣಗಳ ಸಂಖ್ಯೆ ಇದ್ದದ್ದು ಇದೀಗ ಸಾವಿರ ಗಡಿ ಬಂದು ತಲುಪಿದೆ. ಆದ ಕಾರಣ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದು ಹಳದಿ ಅಲರ್ಟ್ ಎಂದು ದೆಹಲಿ ಸರ್ಕಾರ ಘೋಷಿಸಿದೆ. ಈಗಾಗಲೇ ದೆಹಲಿಯಲ್ಲಿ ಚಿತ್ರ ಮಂದಿರಗಳು, ಶಾಲಾ ಕಾಲೇಜು, ಹೋಟೆಲ್ ಮತ್ತು ಜಿಮ್ ಗಳಿಗೆ ನಿರ್ಬಂಧ ಹೇರಲಾಗಿದೆ. ಆದ ಕಾರಣ ಇತ್ತ ಬಾಲಿವುಡ್ ಬಹು ನಿರೀಕ್ಷಿತ ಸಿನಿಮಾ ಆಗಿರುವ ಜೆರ್ಸಿ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ಜೆರ್ಸಿ ಸಿನಿಮಾ ಡಿಸೆಂಬರ್ 31ರಂದು ರಿಲೀಸ್ ಆಗಬೇಕಾಗಿತ್ತು.

ಆದರೆ ಕೋವಿಡ್ ಮೂರನೇ ಅಲೆಯ ಆತಂಕದಿಂದಾಗಿ ಸಿನಿಮಾದ ರಿಲೀಸ್ ಡೇಟ್ ಅನ್ನು ಪೋಸ್ಟ್ ಪೋನ್ ಮಾಡಲಾಗಿದೆ. ಕ್ರಿಕೆಟ್ ಕುರಿತಾದ ಚಿತ್ರವಾಗಿರುವ ಜೆರ್ಸಿ ಸಿನಿಮಾದಲ್ಲಿ ಶಾಹಿದ್ ಕಪೂರ್ ಮತ್ತು ಮೃನಾಲ್ ಥಾಕೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾವಾಗಿದ್ದ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಕೂಡ ಕೋವಿಡ್ ಮೂರನೇ ಅಲೆಯ ಹಿನ್ನೆಲೆ ಮುಂದೂಡಲಾಯಿತು. ಇದೀಗ ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಸಿನಿಮಾದ ರಿಲೀಸಿಂಗ್ ಡೇಟ್ ಅನ್ನು ಕೂಡ ಮುಂದೂಡಿ ಚಿತ್ರ ತಂಡ ಮಾಹಿತಿ ನೀಡಿದೆ.

%d bloggers like this: