ಒಂದೇ ಚಿತ್ರದಲ್ಲಿ ಮೂರು ದೊಡ್ಡ ನಟರು, ಚಿತ್ರದ ಬಜೆಟ್ ಎಷ್ಟು ಗೊತ್ತೇ

ಈಗಾಗಲೇ ದಕ್ಷಿಣ ಭಾರತದ ಅನೇಕ ಸ್ಟಾರ್ ನಟರು ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಮೂಲಕ ಬಾಲಿವುಡ್ ಮಾತ್ರ ಅಲ್ಲದೆ ಹೊರ ದೇಶಗಳಲ್ಲಿಯೂ ಕೂಡ ಹವಾ ಸೃಷ್ಟಿ ಮಾಡಿಕೊಂಡಿದ್ದಾರೆ. ಅದರ ಸಾಲಿಗೆ ಈಗಾಗಲೇ ಬಾಹುಬಲಿ ಚಿತ್ರದ ಮೂಲಕ ಡಾರ್ಲಿಂಗ್ ಪ್ರಭಾಸ್, ಕೆ.ಜಿ.ಎಫ್. ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್, ಇದೀಗ ಪುಷ್ಪ ಚಿತ್ರದ ಮೂಲಕ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಹೀಗೆ ಒಂದಷ್ಟು ಸೌತ್ ಸಿನಿ ಸ್ಟಾರ್ಸ್ ಭಾರತೀಯ ಚಿತ್ರರಂಗದಾದ್ಯಂತ ಭಾರಿ ಸದ್ದು ಮಾಡಿದ್ದಾರೆ. ಅವರಲ್ಲಿ ನಟ ಪ್ರಭಾಸ್ ಅವರಂತೂ ಹಿಂದಿಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ನಟ ಪ್ರಭಾಸ್ ಅವರು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಹೌದು ತೆಲುಗು ಚಿತ್ರರಂಗದ ಸುಪ್ರಸಿದ್ದ ನಿರ್ದೇಶಕ ನಾಗ ಅಶ್ವಿನ್ ಅವರು ನಿರ್ದೇಶನ ಮಾಡುತ್ತಿರುವ ಬಹುಕೋಟಿ ಬರೋಬ್ಬರಿ ಐನೂರು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಸಿನಿಮಾವೊಂದರಲ್ಲಿ ಪ್ರಭಾಸ್ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ನಾಗ್ ಅಶ್ವಿನ್ ಅವರು ಈ ಹಿಂದೆ ಎವಡೆ ಸುಬ್ರಮಣ್ಯಂ, ಪಿಟ್ಟ ಕತ್ತಲು, ಜಾತಿ ರತ್ನಲು, ಮಹಾನಟಿ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಇದೀಗ ವೈಜಯಂತಿ ಮೂವೀಸ್ ಬ್ಯಾನರಡಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾವೊಂದನ್ನ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಹಾಗಾಗಿ ಪ್ರಾಜೆಕ್ಟ್ ಕೆ ಎಂದು ಹೆಸರಿಟ್ಟು ಈ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಈಗಾಗಲೇ ಹೈದರಾಬಾದ್ ನಲ್ಲಿ ಮುಗಿಸಿಕೊಂಡಿದ್ದಾರೆ.

ಈಗ ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದ್ದು ಶೂಟಿಂಗ್ ನಲ್ಲಿ ಬಾಲಿವುಡ್ ಸ್ಟಾರ್ ಬಿಗ್-ಬಿ ಅಮಿತಾಬ್ ಬಚ್ಚನ್, ನಟಿ ದೀಪಿಕಾ ಪಡುಕೋಡೆ ಭಾಗವಹಿಸಿದ್ದಾರೆ. ಇವರ ಜೊತೆಗೆ ನಟ ಪ್ರಭಾಸ್ ಅವರು ಕೂಡ ಈಗ ಜೊತೆಯಾಗಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ ಪ್ರಭಾಸ್ ಅವರದ್ದು ಇಪ್ಪತ್ತೊಂದನೆಯ ಚಿತ್ರವಾಗಿದೆ. ನಾಗ್ ಅಶ್ವಿನ್ ಅವರ ನಿರ್ದೇಶನದ ಈ ಬಹುಕೋಟಿ ವೆಚ್ಚದ ಸಿನಿಮಾ ವೈಜ್ಞಾನಿಕ ರೋಚಕತೆಯ ಕಥಾಹಂದರವನ್ನೊಂದಿದೆಯಂತೆ. ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಲಿದೆ ಎಂದು ವೈಜಯಂತಿ ಮೂವಿಸ್ ಸಂಸ್ಥೆ ತಿಳಿಸಿದ್ದು ಈ ಚಿತ್ರದ ಬಗ್ಗೆ ಪ್ರಭಾಸ್ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಅದರ ಜೊತೆಗೆ ರಾಧೆ ಶ್ಯಾಮ್, ಆದಿಪುರುಷ, ಸಲಾರ್ ಮತ್ತು ಸ್ಪಿರಿಟ್ ಎಂಬ ಸಿನಿಮಾಗಳು ಪ್ರಭಾಸ್ ಅವರ ನಾಯಕತ್ವವನ್ನೊಂದಿದೆ.

%d bloggers like this: