ಒಂದೇ ಚಿತ್ರದಲ್ಲಿ, ಒಂದೇ ಪಾತ್ರದಲ್ಲಿ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರು

ಕೋವಿಡ್ ಲಾಕ್ ಡೌನ್ ನಂತರ ಚಿತ್ರ ಮಂದಿರಗಳಿಗೆ ಸಂಪೂರ್ಣ ವಿನಾಯಿತಿ ಸಿಕ್ಕ ಬೆನ್ನಲ್ಲೇ ಸಾಲು ಸಾಲು ಸಿನಿಮಾಗಳು ಬಿಡುಗಡೆಗೊಂಡವು. ಅದರ ಜೊತೆಗೆ ಹೊಸ ಚಿತ್ರಗಳು ಕೂಡ ಸಟ್ಟೇರಲು ಆರಂಭಿಸಿದವು. ಅಂತಹ ಪ್ರಾಜೆಕ್ಟ್ ಗಳ ಪೈಕಿ ಮಾಫಿಯಾ ಸಿನಿಮಾ ಕೂಡ ಒಂದು. ಮಮ್ಮಿ ಮತ್ತು ದೇವಕಿ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಮಾಫಿಯಾ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಜ್ವಲ್ ಅವರು ಈ ಪಾತ್ರಕ್ಕಾಗಿ ಈಗಾಗಲೇ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದು, ತಮ್ಮ ದೇಹವನ್ನು ‌ಹುರಿಗೊಳಿಸಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಡಿಯಲ್ಲಿ ಕುಮಾರ್ ಅವರು ಬಂಡವಾಳ ಹೂಡುತ್ತಿರುವ ಈ ಮಾಫಿಯಾ ಚಿತ್ರಕ್ಕೆ ಇದೀಗ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ ಆಗಿದೆ.

ಈ ಸ್ಟಾರ್ ನಟ ಬೇರಾರು ಅಲ್ಲ ಡೈನಾಮಿಕ್ ಸ್ಟಾರ್ ನಟ ದೇವರಾಜ್. ಮಾಫಿಯಾ ಚಿತ್ರದಲ್ಲಿ ನಾಯಕ ನಟರಾಗಿ ಮಗ ಪ್ರಜ್ವಲ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತಂದೆ ದೇವರಾಜ್ ಕೂಡ ಪೊಲೀಸ್ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅಪ್ಪ ಮಗ ಒಂದೇ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಅವರಿಗೆ ಜೋಡಿಯಾಗಿ ಇದೇ ಮೊದಲ ಬಾರಿಗೆ ನಟಿ ಅಧಿತಿ ಪ್ರಭುದೇವ ನಟಿಸುತ್ತಿದ್ದಾರೆ. ಇನ್ನು ಮಾಫಿಯಾ ಚಿತ್ರಕ್ಕೆ ಅನೂಪ್ ಸೀಳಿನ್ ಮ್ಯೂಸಿಕ್ ಮಾಡುತ್ತಿದ್ದು, ಖ್ಯಾತ ಸಂಭಾಷಣೆಕಾರ ಮಾಸ್ತಿ ಅವರು ಬರೆಯುತ್ತಿದ್ದಾರೆ. ಛಾಯಾಗ್ರಾಹಕರಾಗಿ ತರುಣ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ನೆರೆವೇರಿಸಿಕೊಂಡ ಮಾಫಿಯಾ ಚಿತ್ರತಂಡ ಚಿತ್ರೀಕರಣಕ್ಕೆ ಸಿದ್ದ ಮಾಡಿಕೊಳ್ಳುತ್ತಿದೆ.

%d bloggers like this: