ಒಂದೇ ಚಿತ್ರದಲ್ಲಿ ರಜನಿಕಾಂತ್ ಅವರ ಜೊತೆಗೆ ನಟಿಸುತ್ತಿದ್ದಾರೆ ಶಿವಣ್ಣ

ಈ ಒಂದು ಪ್ರಶ್ನೆ ಇದೀಗ ಸೌತ್ ಸಿನಿ ರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಸೌತ್ ಇಂಡಿಯನ್ ಸಿನಿಮಾಗಳಲ್ಲಿ ಮಲ್ಟಿಸ್ಟಾರರ್ ಸಿನಿಮಾ ಹೆಚ್ಚು ಬರುತ್ತಿವೆ. ಮಲ್ಟಿ ಸ್ಟಾರರ್ ಸಿನಿಮಾಗಳು ತೆರೆಗೆ ಬರುತ್ತಿರುವುದು ಹೊಸದೇನೂ ಅಲ್ಲ‌. ಆದರೆ ಒಂದು ಭಾಷೆಯ ನಟರು ಇನ್ನೊಂದು ಭಾಷೆಯ ಸ್ಟಾರ್ ನಟರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿರುವುದು ಬಹುತೇಕ ವಿರಳಾತಿವಿರಳ ಎಂದು ಹೇಳ‌ಬಹುದು. ಬಹಳ ಹಿಂದೆ ಅಂದರೆ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ಸಿಪಾಯಿ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಬಹಳ ವರ್ಷಗಳ ನಂತರ ಒಂದು ಭಾಷೆಯ ಒಬ್ಬ ಸೂಪರ್ ಸ್ಟಾರ್ ನಟ ಮತ್ತೊಬ್ಬ ಸ್ಟಾರ್ ನಟ ಒಟ್ಟಿಗೆ ನಟಿಸಲಿದ್ದಾರೆ ಎಂದು ಸುದ್ದಿ ತಿಳಿದುಬಂದಿದೆ.

ಹೌದು ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ಚಿತ್ರದಲ್ಲಿ ಕನ್ನಡದ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಹೌದು ಇತ್ತೀಚೆಗೆ ತೆರೆಕಂಡ ತಲಪತಿ ವಿಜಯ್ ಅವರ ಬೀಸ್ಟ್ ಸಿನಿಮಾ ನಿರ್ದೇಶನ ಮಾಡಿದ ನೆಲ್ಸನ್ ಅವರ ಹೊಸ ಸಿನಿಮಾದಲ್ಲಿ ರಜನಿಕಾಂತ್ ಅವರು ನಾಯಕ ನಟರಾಗಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಶಿವಣ್ಣ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡದ ಆಪ್ತ ಮೂಲಗಳು ತಿಳಿಸಿದೆ. ರಜಿನಿಕಾಂತ್ ಅವರ ಈ ಹೊಸ ಸಿನಿಮಾಗೆ169 ಎಂದು ಶೀರ್ಷಿಕೆ ಇಡಲಾಗುತ್ತಿದೆಯಂತೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಡಾ.ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ಅದರಂತೆ ಡಾ.ರಾಜ್ ಅವರ ಕುಟುಂಬದೊಟ್ಟಿಗೆ ಉತ್ತಮ ಸ್ನೇಹ ಭಾಂಧವ್ಯ ಹೊಂದಿರುವ ರಜಿನಿಕಾಂತ್ ಅವರು ಇದೀಗ ಶಿವಣ್ಣ ಅವರೊಟ್ಟಿಗೆ ಸಿನಿಮಾ ಮಾಡಲಿರುವುದು ನಿಜಕ್ಕೂ ಕೂಡ ಸಂತಸದ ಸಂಗತಿ ಎಂದು ಹೇಳಬಹುದು.

ಇನ್ನು ಈ ಚಿತ್ರದ ಲ್ಲಿ ನಟಿಸಲು ಶಿವಣ್ಢ ಅವರ ಜೊತೆ ಮಾತನಾಡಲು ಬೀಸ್ಟ್ ಚಿತ್ರದ ನಿರ್ದೇಶಕ ನೆಲ್ಸನ್ ಅವರು ಮತ್ತು ನಿರ್ಮಾಪಕರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತ ಶಿವರಾಜ್ ಕುಮಾರ್ ಅವರು ತಮ್ಮ ಸಂಸ್ಥೆಯಲ್ಲಿ ನಿರ್ಮಾಣ ಆಗುತ್ತಿರುವ ವೇದ ಚಿತ್ರದಲ್ಲಿ ನಟಿಸುವ ಸಿದ್ದತೆ ಅಲ್ಲಿದ್ದರೆ. ಇದರ ಜೊತೆಗೆ ಬೈರಾಗಿ ಚಿತ್ರದ ಪ್ರಮೋಶನ್ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರಕ್ಕೂ ಕೂಡ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಸೂಪರ್ ಸ್ಟಾರ್ ಜೊತೆ ನಮ್ಮ ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ತೆರೆ ಹಂಚಿಕೊಳ್ಳಲಿದ್ದಾರೆ.

%d bloggers like this: