ಒಂದೇ ಚಿತ್ರದಲ್ಲಿ ರಿಷಭ್ ಶೆಟ್ಟಿ ಹಾಗೂ ದೂದ್ ಪೇಡಾ ದಿಂಗತ್ ಅವರು

ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಒಂದರ ಹಿಂದೆ ಒಂದು ಸೂಪರ್ ಹಿಟ್ ಸಿನಿಮಾ ನೀಡುವ ಮೂಲಕ ಸಖತ್ ಸೌಂಡ್ ಮಾಡುತ್ತಿರುವುದು ರಕ್ಷಿತ್ ಶೆಟ್ಟಿ ಅಂಡ್ ಟೀಮ್. ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಇವರ ಜೊತೆಗೆ ಈಗ ರಾಜ್.ಬಿ.ಶೆಟ್ಟಿ ಹೀಗೆ ಈ ಕರಾವಳಿ ಭಾಗದ ಕಲಾವಿದರು ಕೇವಲ ನಟರಾಗಿ ಮಾತ್ರವಲ್ಲದೆ ನಿರ್ದೇಶನ ಮತ್ತು ಬರಹದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಖತ್ ಸಕ್ಸಸ್ ಕಾಣುತ್ತಿದ್ದಾರೆ. ನಟ, ನಿರ್ದೇಶಕ ಅಂಡ್ ನಿರ್ಮಾಪಕರಾಗಿ ಯಶಸ್ಸು ಕಂಡಿರುವ ರಕ್ಷಿತ್ ಶೆಟ್ಟಿ ತಾನು ಬೆಳೆಯುವುದರ ಜೊತೆಗೆ ತನ್ನ ಜೊತ ಕೆಲಸ ಮಾಡಿದ್ದಂತಹ ಎಲ್ಲಾರಿಗೂ ಒಂದು ನೆಲೆ ರೂಪಿಸಿಕೊಡುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ. ತಮ್ಮ ಪರಮ್ವಾ ಸ್ಟೂಡಿಯೋಸ್ ನಿರ್ಮಾಣ ಸಂಸ್ಥೆಯಡಿಯಲ್ಲಿ ಕಿರಿಕ್ ಪಾರ್ಟಿ ಚಿತ್ರ ತಯಾರಾಗಿತ್ತು. ಇದರಲ್ಲಿ ಸೆವೆನ್ ಆಡ್ಸ್ ಅಂತ ಏಳು ಜನ ಬರಹಗಾರರು ಕೆಲಸ ಮಾಡಿದ್ದರು. ಆ ಏಳು ಜನರ ಪೈಕಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಬರಹಗಾರರಾಗಿ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಭಿಜಿತ್ ಮಹೇಶ್ ಇದೀಗ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ.

ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕರಾಗಿ ನಟ ದಿಗಂತ್ ಅವರು ಆಯ್ಕೆ ಆಗಿದ್ದಾರಂತೆ. ದಿಗಂತ್ ಅವರ ಜೊತೆ ಈ ಬಗ್ಗೆ ಒಂದು ಸುತ್ತಿನ ಮಾತುಕತೆ ಆಗಿದ್ದು, ದಿಗಂತ್ ಕಥೆ ಕೇಳಿ ಒಪ್ಪಿಕೊಂಡಿದ್ದಾರೆ ಎಂದು ಕೇಳಿ ಬಂದಿದೆ. ಈ ಮೂಲಕ ದಿಗಂತ್ ಶೆಟ್ಟರ ಬಳಗವನ್ನು ಸೇರಲಿದ್ದಾರೆ. ಇತ್ತೀಚೆಗೆ ನಟ ದಿಗಂತ್ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯಕ್ಕೆ ಚೇತರಿಸಿಕೊಂಡು ಡಿಸ್ಟಾರ್ಜ್ ಆಗಿ ಮತ್ತೆ ಸಿನಿಮಾಗಳ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಹೊಸ ಸಿನಿಮಾದಲ್ಲಿ ದಿಗಂತ್ ಅವರ ಜೊತೆಯಾಗಿ ರಿಷಭ್ ಶೆಟ್ಟಿ ಕೂಡ ತೆರೆ ಹಂಚಿಕೊಳ್ಳಲಿದ್ದಾರಂತೆ. ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ದಿಗಂತ್ ಅವರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ರಿಶಭ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಕಿರಿಕ್ ಪಾರ್ಟಿ ಅಂತೆಯೇ ಕಥಾಹಂದರ ಹೊಂದಿದ್ದು, ಪ್ರೀತಿ ಗೀತಿ ಇತ್ಯಾದಿ ವಿಚಾರಗಳು ಸಿನಿಮಾದಲ್ಲಿದ್ದು ಮನೋರಂಜನಾತ್ಮಕ ಚಿತ್ರ ಆಗಲಿದೆಯಂತೆ.

ಅಭಿಜಿತ್ ಮಹೇಶ್ ಮತ್ತು ನಿರ್ಮಾಪಕರಾದ ರಕ್ಷಿತ್ ಶೆಟ್ಟಿ ಈ ಚಿತ್ರಕ್ಕೆ ಬೇಕಾದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರಂತೆ. ಇದರ ಬಳಿಕ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಸೆವೆನ್ ಆಡ್ಸ್ ನಲ್ಲಿ ಅಭಿಜಿತ್ ಮಹೇಶ್ ಅಂತೆಯೇ ಚಂದ್ರಜಿತ್ ಬೆಳ್ಳಿಯಪ್ಪ ಎಂಬ ಮತ್ತೊಬ್ಬ ರೈಟರ್ ಕೂಡ ಇದ್ದರು. ಅವರ ಒಂದು ಹೊಸ ಚಿತ್ರಕ್ಕೂ ಕೂಡ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಲಿದ್ದಾರಂತೆ. ದಿಗಂತ್ ಅವರು ಸದ್ಯಕ್ಕೆ ಗಾಳಿಪಟ2, ಮಾರಿಗೋಲ್ಡ್ ಅಂತಹ ಸಿನಿಮಾದ ಕೆಲಸಗಳಲ್ಲಿ ಬಿಝಿಯಾಗಿದ್ದಾರೆ. ಇತ್ತ ರಿಷಭ್ ಶೆಟ್ಟಿ ಕೂಡ ತಮ್ಮದೇ ಕಾಂತಾರಾ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಇದರ ಜೊತೆಗೆ ಬೆಲ್ ಬಾಟಮ್2, ನಾಥೂರಾಮ್, ರುದ್ರ ಪ್ರಯಾಗ ಅಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ 777 ಚಾರ್ಲಿ ಚಿತ್ರದ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ತಮ್ಮ ಜೊತೆ ಕೆಲಸ ಮಾಡಿದ ಎಲ್ಲಾರನ್ನು ಕೂಡ ತಮ್ಮ ಜೊತೆ ಕೈ ಹಿಡಿದುಕೊಂಡು ಕರೆದ್ಯೋಯುತ್ತಿರುವುದು ನಿಜಕ್ಕೂ ಕೂಡ ಮಾದರಿ ಅಂತ ಹೇಳಬಹುದು.

%d bloggers like this: