ಒಂದೇ ದಿನದಲ್ಲಿ ಬರೋಬ್ಬರಿ 100 ಕಾರು ಮಾರಾಟ ಮಾಡಿದ ಕರ್ನಾಟಕದ ಶೋರೂಮ್ ಮಾಲೀಕ

ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ ನಿಸ್ಸಾನ್ ಮ್ಯಾಗ್ನೆಟ್ ಕಾರು! ಹೌದು ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್.ಯು.ವಿ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾರಾಟದಲ್ಲಿ ನೂತನ ದಾಖಲೆ ನಿರ್ಮಾಣ ಮಾಡಿದೆ. ಬಿಡುಗಡೆಗೊಂಡು ಇಲ್ಲಿಯ ವರೆಗೆ ನಿಸ್ಸಾನ್ ಮ್ಯಾಗ್ನೈಟ್ ಮಾದರಿಯ ಕಾರು ಬರೋಬ್ಬರಿ 36000 ಕ್ಕಿಂತ ಹೆಚ್ಚು ಮಾರಾಟವಾಗಿದೆ. ಅದರಲ್ಲೂ ಬೆಂಗಳೂರಿನ ಸೂರ್ಯ ನಿಸ್ಸಾನ್ ಡೀಲರ್ಸ್ ಮೂಲಕ ಒಂದೇ ದಿನದಲ್ಲಿ ಬರೋಬ್ಬರಿ ನೂರು ಯೂನಿಟ್ ನಿಸ್ಸಾನ್ ಮ್ಯಾಗ್ನೆಟ್ ಕಾರು ವಿತರಣೆ ಮಾಡಲಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಭಾರಿ ಬೇಡಿಕೆ ಹೆಚ್ಚಾಗುತ್ತಿದ್ದು ಬುಕ್ಕಿಂಗ್ ಆಗಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರನ್ನು ವಿತರಣೆ ಮಾಡುವುದಕ್ಕೆ ಸಮಸ್ಯೆ ಆಗುವಷ್ಟು ಬೇಡಿಕೆ ಸೃಷ್ಠಿಯಾಗಿದೆ.

ನಿಸ್ಸಾನ್ ಕಂಪನಿಯ ವಿಭಿನ್ನ ಮಾದರಿಯ ಕಾರನ್ನು ಹೊಂದಿದ್ದರು ಕೂಡ, ನಿಸ್ಸಾನ್ ಮ್ಯಾಗ್ನೈಟ್ ಕಾರಿಗೆ ಸಿಕ್ಕ ಬೇಡಿಕೆ ಬೇರೆ ಯಾವ ಮಾದರಿಯ ಕಾರಿಗೂ ಸಿಕ್ಕಿಲ್ಲ. ಈ ಮ್ಯಾಗ್ನೈಟ್ ಕಾರು ತನ್ನ ಪ್ರತಿ ಸ್ಪರ್ಧಿ ಕಾರಿಗಳಿಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಅವುಗಳಿಗಿಂತ ವಿಶೇಷ ಫೀಚರ್ ಗಳನ್ನು ಒಳಗೊಂಡಿದೆ. ಇದರ ಬೆಲೆಯು ಆರಂಭಿಕವಾಗಿ 5.49 ಲಕ್ಷ ರೂಗಳಿಂದ ಟಾಪ್ ಎಂಡ್ ಮಾದರಿ 9.35 ಲಕ್ಷ ರೂವರೆಗೂ ಇದ್ದು, ಈ ಮಾದರಿಯ ಕಾರಿಗೆ 50,000 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೈಶಿಷ್ಟ್ಯ ನೋಡುವುದಾದರೆ, ಪ್ರೀಮಿಯಂ ಫೀಚರ್ ನಲ್ಲಿ ಸುರಕ್ಷತೆಗೆ ಹೆಚ್ಚು ಮಹತ್ವ ನೀಡಲಾಗಿದೆ. ಅದಕ್ಕಾಗಿ ಐಸೋಫಿಕ್ಸನೆಟ್, ಸೆಂಟರ್ ಡೋರ್ ಲಾಕಿಂಗ್, ಅಟೋಡೋರ್ ಲಾಕ್, ರಿಮೋಟ್ ಕೀ ಲೆಸ್ ಪ್ರವೇಶದ ಸವಲತ್ತುಗಳನ್ನು ಹೊಂದಿದೆ. ಜೊತೆಗೆ ಇದರಲ್ಲಿ ಮುಂಭಾಗದಲ್ಲಿ ಏರ್ ಬ್ಯಾಗ್ ಹೊಂದಿದ್ದು, ಎಬಿಎಸ್ ಜೊತೆಗೂಡಿ ಇಬಿಡಿ ಆಂಟಿರೋಲ್ ಬಾರ್, ಟಯರ್ ಪ್ರೆಷರ್ ಮಾನಿಟರಿಂಗ್, ಬ್ರ್ಯಾಂಡ್ ಕಾಮೆಟ್ ಫೀಚರ್ ಒಳಗೊಂಡಿದೆ.

ಈ ನಿಸ್ಸಾನ್ ಮ್ಯಾಗ್ನೈಟ್ ಕಾರು 1.0 ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯ 100 ಬಿಎಚ್ಪಿ 160 ಎನ್ ಎಮ್ ಟಿರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. 360 ಡಿಗ್ರಿಯ ಕ್ಯಾಮೆರಾ, ಲೆದರ್ ಮ್ಯಾಪ್, ಸ್ಟ್ಯಾಂಡರ್ಡ್ ಆಗಿರುವ ವೇಗದ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಪ್ರಸ್ತುತ ಮಾದುಕಟ್ಟೆಯಲ್ಲಿ ಈ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಪ್ರತಿಸ್ಪರ್ಧಿ ಕಾರುಗಳ ಬೆಲೆಯು ಆರಂಭಿಕವಾಗಿ 6.70 ಲಕ್ಷ ರೂಯಿಂದ 12.80 ಲಕ್ಷ ರೂಹೊಂದಿದೆ. ಈ ಬೆಲೆಗೆ ಹೋಲಿಸಿದರೆ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆಯು ಉತ್ತಮವಾದ ಫೀಚರ್ ನೊಂದಿಗೆ ಕಡಿಮೆ ದರದಲ್ಲಿ ಮಾರಾಟ ವಾಗುತ್ತಿರುವುದು ಗ್ರಾಹಕರನ್ನು ಬೇಗ ಸೆಳೆಯುತ್ತಿದೆ ಎನ್ನಬಹುದಾಗಿದೆ.

%d bloggers like this: